ಮೂವರು ಉಗ್ರರು ಮಟ್ಯಾಶ್

0
287

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರು ದುಷ್ಕೃತ್ಯ ಎಸಗಿದ್ದಾರೆ. ಉತ್ತರಕಾಶ್ಮೀರದ ಕುಪ್ವಾರ ಜಿಲ್ಲೆಯ ಲಂಗೇಟ್ ಹಂದ್ವಾರ ಆರ್ಮಿ ಕ್ಯಾಂಪ್ ಬಳಿ ಫೈರಿಂಗ್ ನಡೆದಿದೆ. ಹಂದ್ವಾರದ ಲಂಗೇಟ್ ನಲ್ಲಿರುವ ಆರ್ಮಿ ಕ್ಯಾಂಪ್ ಮೇಲೆ ದಾಳಿ ನಡೆದಿದೆ. 30 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ದಾಳಿಗೆ ಯತ್ನ ನಡೆದಿದೆ.
 
 
 
ಸೇನಾ ಸಮವಸ್ತ್ರದಲ್ಲಿ ಮೂವರು ಉಗ್ರರು ಬಂದಿದ್ದರು. ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.ಬೆಳಗ್ಗೆ 5 ಗಂಟೆಗೆ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಮೂವರು ಲಷ್ಕರ್ ಉಗ್ರರು ಆತ್ಮಾಹುತಿ ದಾಳಿಗೆ ಯತ್ನಿಸಿದ್ದಾರೆ. ಸೇನಾ ಕ್ಯಾಂಪ್ ಮೇಲೆ ದಾಳಿಗೆ ಯತ್ನಿಸಿದ ಉಗ್ರರು ಮಟ್ಯಾಶ್ ಮಾಡಲಾಗಿದೆ. 3 ಉಗ್ರರೂ ಕೂಡ ಪಾಕಿಸ್ತಾನ ಮೂಲದವರೆಂದು ಪತ್ತೆಯಾಗಿದೆ.
 
 
ಹತ್ಯೆಯಾದ ಉಗ್ರರ ಬಳಿಯಿದ್ದ 3ಎಕೆ-47 ರೈಫಲ್ ಗಳು, 17 ಮ್ಯಾಗಜಿನ್ ಗುಂಡು, 12 ಗ್ರೆನೇಡ್ ಗಳು, 3ಜಿಪಿಎಸ್, 2 ಮೊಬೈಲ್, 4ರೆಡಿಯೋ ಸೆಟ್, 9 ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್, ಭಾರತೀಯ ಕರೆನ್ಸಿ, ಉರ್ದು ಭಾಷೆಯಲ್ಲಿರುವ ಡೈರಿ, ಪಾಕಿಸ್ತಾನದಲ್ಲಿ ತಯಾರಾದ ಔಷಧಿ, ಬಿಸ್ಕೆಟ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರೀ ಸಿದ್ಧತೆಯೊಂದಿಗೆ ಉಗ್ರರು ದಾಳಿಗೆ ಬಂದಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಉಗ್ರರಿಂದಲೇ ದಾಳಿ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.
 
 
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತೀಯ ಸೇನೆ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ ನಂತರ, ಕಾಶ್ಮೀರದಲ್ಲಿ ಸೇನಾ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ಉಗ್ರರು ನಡೆಸಿರುವ ಮೂರನೇ ದಾಳಿ ಯತ್ನ ಇದಾಗಿದೆ.
 
 
ಜಮ್ಮು-ಕಾಶ್ಮೀರ ಗಡಿಯಲ್ಲಿ ಒಳನುಸುಳಲು ನಡೆಸಿದ ಯತ್ನ ವಿಫಲವಾಗಿದೆ. ರಾಮ್ ಪುರ, ನೌಗಾಮ್ ಸೆಕ್ಟರ್ ನಲ್ಲಿ ಒಳನುಸುಳಲು ಯತ್ನ ನಡೆದಿದೆ. ಗಡಿಭಾಗದ ಮೂರು ಸ್ಥಳಗಳಲ್ಲಿ ಒಳನುಸುಳಲು ಉಗ್ರರು ಯತ್ನ ನಡೆಸಿದ್ದಾರೆ. ಆದರೆ ಭಾರತೀಯ ಸೇನೆ ಉಗ್ರರ ಯತ್ನವನ್ನು ವಿಫಲಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here