ಮೂಲಂಗಿ ಚಪಾತಿ/ಪರೋಟ

0
508

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಮೂಲಂಗಿ 2 ಈರುಳ್ಳಿ 1 ಹಸಿ ಮೆಣಸಿನ ಕಾಯಿ 2 ಸ್ವಲ್ಪ ಕೊತ್ತಂಬರಿ ಸೊಪ್ಪು ಚಾಟ್ ಮಸಾಲ 1 ಚಮಚ ಜೀರಿಗೆ ಅರ್ಧ ಚಮಚ ಗೋಧಿ ಹಿಟ್ಟು 2 ಕಪ್’ಮೈದಾ  ತುಪ್ಪ 2 ಚಮಚ ಎಣ್ಣೆ 1 ಚಮಚ ರುಚಿಗೆ ತಕ್ಕ ಉಪ್ಪು.
 
 
ತಯಾರಿಸುವ ವಿಧಾನ:
ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಮತ್ತು ಹಸಿ ಮೆಣಸಿನ ಕಾಯಿ ಹಾಕಿ 1 ನಿಮಿಷದ ಬಳಿಕ ಈರುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ತುರಿದ ಮೂಲಂಗಿಯನ್ನು ಹಾಕಿ ಕಡಿಮೆ ಉರಿಯಲ್ಲಿ 8-10 ನಿಮಿಷ ಹುರಿಯಿರಿ. ಈಗ ಉಪ್ಪು, ಚಾಟ್ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಇಳಿಸಿ.
 
 
ಗೋಧಿ ಹಿಟ್ಟು ಮತ್ತು ಮೈದಾಹಿಟ್ಟು ಹಾಕಿ ಚೆನ್ನಾಗಿ ಕಲೆಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ನಂತರ ಮೂಲಂಗಿ ಮಿಶ್ರಣವನ್ನು ಅದರ ಜೊತೆ ಹಾಕಿ ಚೆನ್ನಾಗಿ ಕಲೆಸಿ. ಈಗ ಚಪಾತಿಗೆ ತಟ್ಟಿ, ತವಾವನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಎಣ್ಣೆ ಸವರಿ ಅದರಲ್ಲಿ ಚಪಾತಿಯ ಎರಡನ್ನುಅದನ್ನು ತವಾದಲ್ಲಿ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಮೂಲಂಗಿ ಚಪಾತಿ ರೆಡಿ. ಇದನ್ನು ಚಟ್ನಿ, ಗ್ರೆವಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

LEAVE A REPLY

Please enter your comment!
Please enter your name here