ಮೂರು ಮಕ್ಕಳಿಗೆ ತಾಯಿ ಹಾಲೇ ವಿಷವಾಗಿತ್ತಂತೆ!…

0
871

ನಿತ್ಯ ಅಂಕಣ: ಭಾಗ ೫
ಉಡುಪಿ ಜಿಲ್ಲೆಯ ದಕ್ಷಿಣದ ಗಡಿಭಾಗವಾದ ಪಡುಬಿದ್ರೆ ಸಮೀಪದ ಹೆಜಮಾಡಿ ಎಂಬ ಊರಲ್ಲಿ ನಡೆದ ವಿಸ್ಮಯ ಘಟನೆ ಇದು. ಮಹಿಳೆಯರು ಸೇರಿಕೊಂಡು ಒಲೆಯ ಊರುವಲಿಗಾಗಿ, ಸಮೀಪದ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸುತ್ತಿದ್ದರು. ಅವರಲ್ಲಿಗೆ ಅಪರಿಚಿತ ಅಜನಾಬಾಹು ಕೌಪಿನಧಾರಿ ವ್ಯಕ್ತಿಯೊರ್ವರು ಸನಿಹ ಬಂದನು. ಬಂದ ವ್ಯಕ್ತಿ, ಮಹಿಳೆಯೊರ್ವಳ ಬಲ ಸ್ಥನವನ್ನು ಸ್ಪರ್ಶಿಸಿದರು. ಎಲ್ಲಾ ಮಹಿಳೆಯರು ಹೆದರಿ, ಕೂಡಿಟ್ಟ ಒಂದಿಷ್ಟು ಕಟ್ಟಿಗೆ ಹೊತ್ತುಕೊಂಡು ಬೇಗನೆ ಮನೆ ಸೇರಿದರು. ಮನೆಗೆ ಬಂದ ಆ ಹೆಂಗಸು ಮನೆ ಮಂದಿಯಲ್ಲಿ ಕಾಡಿನಲ್ಲಿ ಕಟ್ಟಿಗೆ ಒಟ್ಟುಗೂಡಿಸುವಾಗ ಒಬ್ಬ ಹುಚ್ಚನಂತೆ ಕಾಣುತ್ತಿದ್ದ ಕಪ್ಪು ಮನುಷ್ಯ ಎಲ್ಲಿಂದಲೋ ಬಂದು, ತನಗೆ ಮಾಡಿದ ಕಿರುಕುಳವನ್ನು ಹೇಳಿದಳು. ಸಿಟ್ಟಾದ ಮಹಿಳೆಯ ಮನೆಯವರು ಅಕ್ಕ ಪಕ್ಕದ ಮನೆಯರನ್ನು ಒಟ್ಟುಗೂಡಿಸಿಕೊಂಡು, ದೊಣ್ಣೆ ಕತ್ತಿ ಹಿಡಿದುಕೊಂಡು, ಕಪ್ಪು ಮನುಷ್ಯನಿರುವ ಕಾಡಿಗೆ ಹೊರಟರು.

ಕಾಡಿನಲ್ಲಿ ಕಪ್ಪು ಮನುಷ್ಯನನ್ನು ಹುಡುಕಾಡುತ್ತಿರುವಾಗ ಮರದ ಮೇಲೆ ಹತ್ತಿ ಕುಳಿತ್ತಿರುವ ಮಹಿಳೆಯರು ಹೇಳಿರುವ, ಚಹರೆಯಲ್ಲಿರುವ, ವ್ಯಕ್ತಿ ಕಂಡು ಬಂದನು. ಆವಾಗ ಕಿರುಕುಳ ಅನುಭವಿಸಿದ ಮಹಿಳೆ, ಮರದ ಮೇಲೆ ಕುಳಿತ ವ್ಯಕ್ತಿಯ ಕಡೆಗೆ ಬೆರಳು ತೋರಿಸಿ, “ಇವನೇ ನನಗೆ ಕಿರುಕುಳ ನೀಡಿದವ” ಎಂದು ಹೇಳಿದಳು. ರೊಚ್ಚಿಗೆದ್ದ ಜನರು ಮರದ ಮೇಲಿದ್ದ ವ್ಯಕ್ತಿಯನ್ನು ಕೂಡಲೇ ಕೆಳಗಿಳಿಯುವಂತೆ ಹೇಳಿದರು. ಮರದ ಮೇಲಿದ್ದ ವ್ಯಕ್ತಿ, ಗಾಬರಿಯಾಗ ಬೇಡಿ, ನಾನು ಇಳಿಯುತ್ತೆನೆ. ತಮ್ಮೊಂದಿಗೆ ಮಾತನಾಡುತ್ತೆನೆ ಎಂದರು.

ಮರ ಇಳಿದು ಬಂದಿರುವ ವ್ಯಕ್ತಿಯು ತನ್ನಿಂದ ಸ್ಪರ್ಶಗೊಂಡಿರುವ, ಮಹಿಳೆಯ ಮನೆ ಮಂದಿಗೆ ಸನಿಹ ಕರೆದು, ಈ ಮಹಿಳೆಗೆ ಈ ಮೊದಲು ಮೂರು ಮಕ್ಕಳು ಹುಟ್ಟಿದ್ದು ಹೌದಲ್ಲವೇ..? ಎಂದು ಪ್ರಶ್ನಿಸಿದರು. ‘ಹೌದು’ ಎಂದು ಮಹಿಳೆಯರ ಕಡೆಯವರಿಂದ ಉತ್ತರ ಬಂದಿತು. ತಾಯಿ ಮೊಲೆ ಹಾಲು ಕುಡಿಯುವ ದಿನಗಳಲ್ಲಿ ಆ ಮೂರು ಕೂಸುಗಳು ಮೃತಪಟ್ಟಿದವಲ್ಲವೇ..! ಎಂದು ಆ ವ್ಯಕ್ತಿ ಪ್ರಶ್ನಿಸಿದಾಗ, ಆಶ್ಚರ್ಯ ಚಕಿತನಾದ ಮಹಿಳೆಯ ಪತಿ ‘ಹೌದು’ ಎಂದು ಉತ್ತರಿಸಿದನು. ಪಾಪಾ.. ಮಕ್ಕಳ ಕಳೆದಕೊಂಡ ಈ ಮಹಿಳೆ, ತಾನು ಉದರದಲ್ಲಿ ನವಮಾಸ ಹೊತ್ತು ಹೆತ್ತ ತನ್ನ ಕೂಸುಗಳು ಸಾವು ಕಾಣುವುದನ್ನು ಕಂಡು ಬಹಳ ದುಃಖಿತಳಾಗಿದ್ದಳು. “ಓ..ದೇವರೇ ಮುಂದಾದರು ನನ್ನ ಕಂದಮ್ಮಗಳ ರಕ್ಷಿಸು” ಎಂದು ಮನದೊಳಗೆ ಪರಿಪರಿಯಾಗಿ ದೇವರಲ್ಲಿ ಮೊರೆ ಇಡುತ್ತಿದ್ದಳು. ಅವಳ ಅಸಹಾಯಕತೆಯ ಮೊರೆಗೆ, ನಾನು ಬಂದು ಸ್ಪಂದಿಸಿದ್ದೆನೆ. ” ಈ ಮಹಿಳೆಯ ಬಲ ಸ್ಥನದಲ್ಲಿ ವಿಷದ ನಾಡಿ ಇದ್ದಿತು. ಅದರ ಹಾಲು ಕುಡಿಯುತ್ತಿದ್ದ ಕೂಸುಗಳು ಸಾಯುತ್ತಿದ್ದವು. ವಿಷದ ನಾಡಿ ನಾಶಗೊಳಿಸಿದ್ದೆನೆ. ಇನ್ನು ಮುಂದೆ ಶಿಶು ಮೃತಪಡುವಂತ ಘಟನೆಗಳು ನಡೆಯುದಿಲ್ಲ. ಎಂದು ಎರಡು ಕರಗಳ ಮೇಲಿತ್ತಿ ಅಭಯವಿತ್ತರು. ಊರಿಗೆ ಅಪರಿಚಿತವಾಗಿರುವ ಒರ್ವ ವ್ಯಕ್ತಿಯು, ತಮ್ಮ ಬದುಕಿನಲ್ಲಿ ಘಟಿಸಿರುವ ಸಂಗತಿಗಳ ಇದ್ದಂತೆ ಹೇಳಿದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಇವರು ನಾವು ತಿಳಿದಂತೆ ಹುಚ್ಚರಲ್ಲ ಯಾವುದೋ ಒಂದು ಅದ್ಭುತವಾದ ಮಹಾಶಕ್ತಿ ಎಂದು ನಂಬಿದರು. ಎಲ್ಲರೂ ಸೇರಿಕೊಂಡು ಲಂಗೋಟಿಧಾರಿ ವ್ಯಕ್ತಿಗೆ ನಮಸ್ಕರಿಸಿದರು. ತಮ್ಮಿಂದಾದ ತಪ್ಪಿಗೆ ಕ್ಷಮೆ ಬೇಡಿದರು. ಸಮಯ ಕಳೆದ ಬಳಿಕ ಮತ್ತೆ ಆ ಮಹಿಳೆ ಗರ್ಭವತಿಯಾದಳು. ಗಂಡು ಮಗುವನ್ನು ಹೆತ್ತಳು. ಅಭಯವಾಣಿಯಂತೆ ಮಗು ಬದುಕಿತು. ನಂತರ ಅಭಯತೋರಿದ ಮಹಾಮಹಿಮರ ದಿವ್ಯಶಕ್ತಿ ಏನೆಂದು ಮಹಿಳೆಯ ಮನೆಯವರೆಗೆ ತಿಳಿದು ಬಂದಿತು. ಅವರಿಗೆಲ್ಲ ಕೃಪೆತೋರಿದ ಮಹಾತ್ಮರು ಅವಧೂತ ನಿತ್ಯಾನಂದ ಸ್ವಾಮೀಗಳೆಂದು ಬಹಳ ಸಮಯದ ನಂತರವೇ ತಿಳಿದು ಬಂದಿದ್ದು.

ತಾರಾನಾಥ್‌ ಮೇಸ್ತ ಶಿರೂರು

LEAVE A REPLY

Please enter your comment!
Please enter your name here