ಮೂಢನಂಬಿಕೇ-ಏನಿದರ ಯಾಥಾಥ್ಯ೯?

0
507

ಮಸೂರ ಅಂಕಣ: ಆರ್ ಎಂ ಶರ್ಮ
ಸೃಷ್ಟಿಯಲ್ಲಿ ಇರುವುದೆಲ್ಲಾ ಪರಾತ್ಪರದ ದೇಣಿಗೆಯೇ ವಿನಹ ಅನ್ಯತರವಿಲ್ಲ.
ಅಲ್ಲಿಗೆ ಸಲ್ಲುವ,ಸಲ್ಲದ,ಸಲ್ಲಬೆಕದ,ಸಲ್ಲಬಾರದ,ಸಲ್ಲಲೇಬೇಕಾದ,ಸಲ್ಲದೇಬಾರದವೆಲ್ಲಾ ಸತ್ಯವಲ್ಲದೇ ಮತ್ತೇನು?
ಇಷ್ಟಾದರೂಕೇಳುವ,ಕೇಳಿಸಲ್ಪಡುವ ಸಂಗತಿಯೆಂದರೆ-ಮೂಢರು,ಮೌಢ್ಯ,ಮೂಢನಂಬಿಕೆ ಇವೇ ಸದಾ.
ಇದು ಎಕೆ ಹೀಗೆ?
ಅದರ ಬಗೆಗೆ ಚಿಂತಿಸೋಣ-ಚಚಿ೯ಸೋಣ-ಉತ್ತರಕ್ಕೆ ಪ್ರಯತ್ನಿಸೋಣ.
ಪರಾತ್ಪರ ಹೇಳಿದ ಮಾತು-“ಮೂಕಂ ಕರೋತಿ ವಾಚಾಲಮ್,ಪಂಘುಂ ಲಂಘಯತೇ ಗಿರಿಂ!”
ಇದಕ್ಕೆ ಮದ್ದು ಕೇವಲ-“ಯತ್ಕೃಪಾ ತಮಹಂ ವಂದೇ ಮಾಧವಂ!”
ಅಂದರೆ ಪರಮಾತ್ಮನ ಕೃಪೆ ಒಂದಿದ್ದರೆ ಸಾಕು-
ಮೂಕನು ವಾಚಾಳಿಯಾಗುತ್ತಾನೆ,
ಕುಂಟನು ಬೆಟ್ಟವನ್ನು ಹಾರುತ್ತಾನೆ ಎಂತ.
ಈ ಮದ್ದು-ಮುತ್ತಿನ ಮಾತು ಅಂಗವೈಕಲ್ಯತೆಯನ್ನು ಹತ್ತಿಕ್ಕಿ ಅವಕ್ಕೆ ಕಾಯ೯ಕ್ಷಮತೆಯನ್ನು ನೀಡುತ್ತವೆ ಎಂದರೆ ವಿಚಾರವಾದಿಗಳು ಒಪ್ಪುತ್ತಾರೆಯೆ?
ಒಪ್ಪಿದರೆ ವಿಚಾರ-ವಾದ ಎಲ್ಲಾ ಖೊಟ್ಟೆ ಆಗದೇನು?
ಒಪ್ಪಲು ಮನಸ್ಸಿಲ್ಲ.
ಒಪ್ಪದೇ ಗತಿಯಿಲ್ಲ.
ಏನೀ ಉಪಟಳ?
ಮಾಡಲು ಬೇಡವೇ ಝಳ ಝಳ?
ಹಾಗಾದರೆ ಮಾಡುವವರು ಯಾರು?
ಎಲ್ಲಿದ್ದಾರೆ?
ಯಾವಾಗಮಾಡುತ್ತಾರೆ?
ಸಾಲವೇ ಪ್ರಶ್ನೆಗಳ ಸರಮಾಲೆ?
ಭಗವಂತನನ್ನು ಎದುರಿಸುವ ಧೈಯ೯ಯಾರಿಗಿದೇ?
ಇಲ್ಲಿಗೆ ಮೌಢ್ಯದ ಖೊಟ್ಟೆತನ ಬಯಲು!
ಪರಮಾತ್ಮನ ಮಾತುಬಿಡಿ.
ಅವನಸ್ರುಷ್ಟಿಗೆ ಬರೋಣ.
ಸೃಷ್ಟಿಯ ಮೇರು ಮನವತೆ-ಮನುಷ್ಯವಗ೯ ಹೇಳುವಮಾತು,ಮಾಡುವ,ಮಡಿಸುವ ಕಾಯಕಗಳು ಸತ್ಯವಲ್ಲದೆ ತದ್ವಿರುದ್ಧ ಸತ್ಯಾತ್ ಸತ್ಯವಲ್ಲವೇ?
ಅದರಲ್ಲಿಯೂ-ಅಧಿಕಾರ,ಅಧಿಕಾರದ ಹಮ್ಮು-ಬಿಮ್ಮು,ಹಿಂಬಾಲಕರ ದಂಡು ಇವೆಲ್ಲಾ ಅಂಗೈಯಲ್ಲಿಯೇ ಸ್ವಗ೯ವನ್ನು ಸತ್ಯವೆನ್ನವೇ?
ನಿಜಕ್ಕೂ ಭೂಮಿಯಮೇಲೆ ಸ್ವಗ೯ವೇ?
ಇಲ್ಲಿ ಯಾರು ಮೂಢರು, ಮೌಢ್ಯ ಎಲ್ಲಿ?
ಹಾಗಾದರೆ ಇಲ್ಲಿಲ್ಲವೇ ಮೂಢನಂಬಿಕೆ?
ಹಳ್ಳಿಯಜನ,ಹಳ್ಳಿಯ ನಡವಳಿಕೆ,ಹಳ್ಳಿಯ ಮುಷ್ಟಿಗಾತ್ರದಜನ-ಮೆರೆದರೆ,ಮೇರುವದರೆ ಅವರು ಬೆರಲ್ಲ.
ಖಂಡಿತವಗಿಯೂ ಅವರೆಲ್ಲಾ ಬೇರೆ-ಮೋಸಮಾಡುವ ಗಣಿಗಳು-ಖಣಿಗಳು-ಕುಳಗಳು.
ಇದೇ ಅಹಂಕರದ,ದಪ೯ದ,ಅಧಿಕಪ್ರಸಂಗತನದ ಬಂಡವಾಳ.
ಇದೇನು ಬಂಡವಾಳವೇ-ಭಂಡಮಾತುಗಳೇ?
ಓದುಗರು ತೀಮಾ೯ನಿಸಬೇಕು ಅಷ್ಟೇ.
ಇನ್ನೂ ಮುಂದೆ ಹೋಗೋಣ-
ವಿಶೇಷವಾಗಿ ಸ್ರೀಮದ್ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಗಮನಿಸೋಣ-
ಅಧ್ಯಾಯ೩ ಶ್ಲೋಕ೨೫,
ತಥಾ ೨೬,
ಅಧ್ಯಾ ೬ ೩೦,
ಅಧ್ಯಾಯ೯ ೨೨,
ಅಧ್ಯಾ೧೮ ೪೫,
ತಥಾ ೬೧,
ಇವೆಲ್ಲದರ ಸಾರಾಂಶ-
ಸ್ವತಃ ಪರಮಾತ್ಮನವಾಣಿಗಳು, ಎಲ್ಲಾ ಜೀಗಲಲ್ಲಿಯೂ ತಾನೇ ಇದ್ದೇನೆ,
ಎಲ್ಲರನ್ನೂಸವ೯ದಾತಾನೇ ರಖ್ಕ್ಷಿಸುವುದು-ಯಾರಿಗೆ ತನ್ನಲ್ಲಿಯೆ ಅಚಲ ಭಕ್ತಿ ಇದೆಯೋ ಅಂತಹವರನ್ನು ಅನ್ಯರನ್ನಲ್ಲ,
ಬುದ್ಧಿಭೆದಮಾಡುವುದನ್ನು ತಾನು ಒಪ್ಪುವುದಿಲ್ಲ,
ಪ್ರತಿಜೀವಿಗೂ ತನ್ನ ಸ್ವಕಮ೯ದಲ್ಲಿಯೇ ಮೇರುವಾಗಿ ದುಡಿದರೆ ಮೋಕ್ಷ ಖಂಡಿತ ಎಂತ ಭರವಸೆ,
ಪ್ರತಿಜೀವಿಯ ಹೃದಯದಲ್ಲಿಯೂ ತಾನೆಸ್ಥಿರವಾಗಿದ್ದೇನೆ ಎಂಬ ಪರಮಸತ್ಯದ ಮಾತು,
ಎಲ್ಲಕ್ಕೂ ಮೀರಿ ಯರು ಬೇರೆಲ್ಲವನ್ನೂ ತ್ಯಜಿಸಿ ಪರಾತ್ಪರವನ್ನೇ ಅನನ್ಯವಾಗಿ,ಅನ್ಯೋನ್ಯವಗಿ ನಂಬುತ್ತಾರೋ ಅಂತಹವರಿಗೆ ತನೇ ಶ್ರೀರಕ್ಷೆ ಎಂಬ ಸತ್ಯದ ಪ್ರತಿಪಾದನೆ-
ಹಾಗಾದರೆ ಮುಧರಿಗೆ-
ಜಿವವಿಲ್ಲವೇ,
ಮೂಢರು ಪರಾತ್ಪರನನ್ನು ನಂಬುವುದಿಲ್ಲವೇ,ಮೂಢರು ತಮ್ಮ ಕಮ೯/ಕೆಲಸ/ಕಾಯಕದಲ್ಲಿ ಮೇರುತನ ಮೆರೆಯರೆ?
ಮೂಢರು ಪರಮಾತ್ಮನ ಸೃಷ್ಟಿಯಲ್ಲವೇ?
ಇದಕ್ಕೆ ಉತ್ತರ ಸತ್ಯ-ಸತ್ಯಾತ್ ಸತ್ಯ.
ಇಲ್ಲಿ ಮರೆಮಾಚವರು,ಉತ್ತರನೀಡದವರು, ದೈವದ ದೃಷ್ಟಿಯಲ್ಲಿ ಏನು ಎಂಬುದು ಸ್ವಯಂ ವೇದ್ಯ.
ರೋಗ ಅಲ್ಲಿದೆ-ಮದ್ದೂ ಅಲ್ಲಿಯೇ.
ಇದನ್ನೆ ಭಗವಂತ ಅಂದದ್ದು-
“ಯಃ ಪಶ್ಯತಿ,
ಸಃಪಶ್ಯತಿ”.
ಇಲ್ಲಿ ಪ್ರಸ್ತುತಿ ಸಾಂದ್ರವಿದೆ,ನಿರಪೇಕ್ಷವಿದೆ,ಗ್ರಾಹ್ಯವಿದೆ.
ಸುಭಾಷಿತಕಾರ ಹೇಳಿದ-
“”ಅಜ್ನ್~ಅಃ ಸುಖಮಾರಾಧ್ಯತೇ,ಸುಖತರಮಾರಾಧ್ಯತೇ ವಿಶೇಷಜ್ನ~ಃ
ಜ್ನಾ~ನಲವ ದುವಿ೯ಧಗ್ಧಃ ಬ್ರಹ್ಮಾಪಿ ನರಂ ನ ರಂಜಯತಿ”.
ಪರಾತ್ಪರದ ದೃಷ್ಟಿಯಲ್ಲಿ ಎಲ್ಲರೂ ತಿಳಿಯದವರೇ,
ಕಾರಣ ತಿಳಿದವನು,
ತಿಳಿಯಲ್ಪಡಬೇಕಾದವನು,
ತಿಳಿಯಲಾಗದವನು ತಾನೇ ಪರಾತ್ಪರ ಅಷ್ಟೇ.
ಅಲ್ಲಿಗೆ ಮೌಢ್ಯದ ನೆಲೆ-ಬೆಲೆ-ಸೆಲೆ ಎಲ್ಲಾ ಬಟ್ಟಬಯಲು.
ಇದಕ್ಕೆ ದಿಗಿಲು-ಬರಸಿಡಿಲು ಅವರಿಗೇ ಧಾಂಭಿಕಜನಕ್ಕೆ.
ಮುಸುಗು ಕಳಚಿಬಿತ್ತು-ನಗ್ನತೆ-ವ್ಯಗ್ರತೆ ಎಲ್ಲಾ ಬಯಲು.
ಇದೇ ವಿಪಯಾ೯ಸ,ವಿಪರೀತ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here