ಮೂಡುಬಿದಿರೆ-33ಹೊಸ ಪ್ರಕರಣ ದಾಖಲು

0
6218


ಮೂಡುಬಿದಿರೆ: ಮೂಡುಬಿದಿರೆ ವ್ಯಾಪ್ತಿಯಲ್ಲಿ 33ಹೊಸ ಕೊವಿಡ್ ಪ್ರಕರಣ ಇಂದು ದಾಖಲಾಗಿದೆ. ಮೂಡುಬಿದಿರೆ ನಗರ ವ್ಯಾಪ್ತಿಯಲ್ಲಿ 6, ಕಲ್ಲಮುಂಡ್ಕೂರು 26, ನೆಲ್ಲಿಕಾರ್ 1 ಪ್ರಕರಣ ದಾಖಲಾಗಿದೆ. ಈ ಪೈಕಿ ಮೂಡುಬಿದಿರೆಯ 4ಮಂದಿ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿಯೇ ಐಸೊಲೇಶನ್ ವ್ಯವಸ್ಥೆಗೊಳಪಟ್ಟಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಸುಜಿತ್ ಭಂಡಾರಿ ತಿಳಿಸಿದ್ದಾರೆ.
ಉಚಿತ ಆರೋಗ್ಯ ಸೇವೆ : ಕೋವಿಡ್ -19 ದ್ವಿತೀಯ ಅಲೆ ಅತಿಯಾಗುತ್ತಿರುವ ಹಿನ್ನಲೆಯಲ್ಲಿ ಮೂಡುಬಿದಿರೆ ತಾಲೂಕು ಹಾಗೂ ಆಸುಪಾಸಿನ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮೂಡುಬಿದಿರೆ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವಾ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಸಕರ ವಾರ್ ರೂಂ: ಮೂಲ್ಕಿ ಮೂಡುಬಿದಿರೆ ಕ್ಷೇತ್ರವ್ಯಾಪ್ತಿಯಲ್ಲಿ ಕೋವಿಡ್ ಸಮರ್ಪಕ ನಿರ್ವಹಣೆಯ ದೃಷ್ಠಿಯಿಂದ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮುತುವರ್ಜಿಯಲ್ಲಿ ಶಾಸಕರ ವಾರ್ ರೂಂ ತುರ್ತು ನಿರ್ವಹಣಾ ತಂಡ ರಚನೆಯಾಗಿದೆ. ಶಾಸಕರ ಸೇವಕ ಕಚೇರಿ: 6360917104,

LEAVE A REPLY

Please enter your comment!
Please enter your name here