ಪ್ರಮುಖ ಸುದ್ದಿರಾಜ್ಯವಾರ್ತೆ

ಮೂಡುಬಿದಿರೆ ಪುರಸಭೆಗೆ ಜವನೆರ್ ಬೆದ್ರ ಲಗ್ಗೆ…?

ರಾಷ್ಟ್ರೀಯ ಪಕ್ಷಗಳ ಎದೆಯಲ್ಲಿ ಢವ ಢವ…

ಮೂಡುಬಿದಿರೆ: ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್ ಬೆದ್ರ ಸಂಘಟನೆ ಅಕ್ಷರಶಃ ಈ ಬಾರಿ ಪುರಸಭಾ ಚುನಾವಣೆಯಲ್ಲಿ ಧೂಳೆಬ್ಬಿಸಲಿದೆ. ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಸಹಿತ ಐವರು ಈಗಾಗಲೇ ಪುರಸಭಾ ಚುನಾವಣಾ ಅಖಾಡಕ್ಕೆ ಧುಮುಕುವ ಸ್ಪಷ್ಟ ಸೂಚನೆ `ವಾರ್ತೆ.ಕಾಂ’ಗೆ ಲಭಿಸಿದೆ. ಮೂಡುಬಿದಿರೆಯಲ್ಲಿ ಕಳೆದ ಹಲವು ಸಮಯಗಳಿಂದ ಜನಪರ ಕಾರ್ಯಗಳನ್ನು ಮಾಡುತ್ತಾ, ಸ್ವಚ್ಛತೆಯ ಬಗ್ಗೆ ಗಮನ ಸೆಳೆಯುವಂತಹ ಅತ್ಯಂತ ಪ್ರಾಮುಖ್ಯ ಕಾರ್ಯವನ್ನು ಮಾಡಿದ ಸಂಘಟನೆ ಜವನೆರ್ ಬೆದ್ರ ಸಂಘಟನೆ. ಯಾವೊಂದು ಫಲಾಪೇಕ್ಷೆಯೂ ಇಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನ ಕರೆಗೆ ಓಗೊಟ್ಟು ಕಳೆದ 63ವಾರಗಳಿಂದ ಮೂಡುಬಿದಿರೆಯ ಗಲ್ಲಿ ಗಲ್ಲಿಗಳನ್ನು, ಪಟ್ಟಣ ಹೊರವಲಯದ ಹಲವು ಭಾಗಗಳನ್ನು ಸ್ವಚ್ಛಪಡಿಸಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಸಂಘಟನೆಯೆಂದರೆ ಹೀಗಿರಬೇಕೆಂಬಂತಹ ರೀತಿಯಲ್ಲಿ ಜನಮಾನಸದಲ್ಲಿ ಅಚ್ಚಳಿಯುವಂತಹ ಕಾರ್ಯವನ್ನು ಮಾಡಿ ಸೈ ಎನಿಸಿಕೊಂಡಿದೆ.

ಇದೀಗ ಪುರಸಭೆಯೊಳಗಿರುವ ಕಸವನ್ನು ಗುಡಿಸಿ ಸ್ವಚ್ಛಗೊಳಿಸಲು ಈ ಸಂಘಟನೆ ಜನಾಪೇಕ್ಷೆಯಂತೆ ನಿರ್ಣಯ ಕೈಗೊಂಡಿದೆ ಎಂಬ ಮಹತ್ವದ ಅಂಶ ವಾರ್ತೆ.ಕಾಂಗೆ ಲಭಿಸಿದೆ.
ರಾಷ್ಟ್ರೀಯ ಪಕ್ಷಗಳಿಗೆ ಢವ…ಢವ… : ಹೌದು ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಚಿಂತನೆಯ ಕಾರ್ಯಕ್ರಮಗಳು, ಸಾಮಾಜಿಕ ದೃಷ್ಠಿಕೋನದ ಚಳವಳಿಗಳು, ಮೂಡುಬಿದಿರೆಯ ಮಣ್ಣಿನ ಮಗಳು ಅಬ್ಬಕ್ಕನ ಕುರಿತಾದ ಧ್ವನಿ, ಹಾಗೆಯೇ ಮೂಡುಬಿದಿರೆಯ ಏಕೈಕ ಕೋಟೆಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟಗಳು, ಪ್ರಾಚೀನ ಐತಿಹ್ಯಗಳ ಬಗೆಗಿನ ಕಾಳಜಿಯ ಮೂಲಕ ಹಲವು ಜನಪರ ಕಾರ್ಯವನ್ನು ಈ ಸಂಘಟನೆ ನಿಸ್ವಾರ್ಥವಾಗಿ ಮಾಡಿಕೊಂಡು ಬಂದು ಎಲ್ಲರ ಪ್ರಶಂಸೆಗೆ ಈ ಸಂಘಟನೆ ಪಾತ್ರವಾಗಿದೆ. ಯಾವೊಬ್ಬ ಜನಪ್ರತಿನಿಧಿಯೂ ಮಾಡದಂತಹ ಕಾರ್ಯವನ್ನು ಜವನೆರ್ ಬೆದ್ರ ಸಂಘಟನೆ ಸದಾ ಮಾಡುತ್ತಾ ಬಂದಿದ್ದು ಇಂತಹ ಸಂಘಟನೆ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವುದು ಸರ್ವೇ ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳಲ್ಲಿ ನಡುಕ ಉಂಟಾಗುವಂತೆ ಮಾಡುತ್ತಿದೆ.

ಐದಲ್ಲ…ಹದಿನೈದು!… : ಈ ಸಂಘಟನೆ ಮೂಡುಬಿದಿರೆಯ ಸುಮಾರು ಹದಿನೈದು ವಾರ್ಡುಗಳಲ್ಲಿ ತನ್ನ ಪ್ರತಿನಿಧಿಯನ್ನು ನಿಲ್ಲಿಸಿ ಚುನಾವಣೆ ಎದುರಿಸಲಿದೆ ಎಂಬ ಮಾಹಿತಿಯಿದೆ. ಮೂಡುಬಿದಿರೆ ಪುರಸಭೆಯಲ್ಲಿ ಆಡಳಿತ ಪಕ್ಷ , ವಿಪಕ್ಷ ಎಲ್ಲವೂ ಒಂದೇ ರೀತಿಯಲ್ಲಿದ್ದು ಯಾವೊಂದು ಅಭಿವೃದ್ಧಿ ಕಾರ್ಯವೂ ನಡೆಯುತ್ತಿಲ್ಲ. ಪ್ರತಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಅಕ್ಷರಶಃ ಮರೆತಿವೆ. ಇಂತಹ ಸಂದರ್ಭದಲ್ಲಿ ಸಮರ್ಥ ಜನಪ್ರತಿನಿಧಿಗಳ ಅವಶ್ಯಕತೆಯಿರುವುದನ್ನು ಮನಗಂಡು ಚುನಾವಣಾ ಅಖಾಡಕ್ಕೆ ಜವನೆರ್ ಬೆದ್ರ ಧುಮುಕಲಣಿಯಾಗಿದೆ ಎಂದು ತಿಳಿದುಬಂದಿದೆ.
ಒಂದೊಮ್ಮೆ ಜವನೆರ್ ಬೆದ್ರ ಸಂಘಟನೆ ಈ ಬಾರಿ ಚುನಾವಣೆ ಎದುರಿಸಿದ್ದೇ ಆದಲ್ಲಿ ಮೂಡುಬಿದಿರೆ ಪುರಸಭಾ ವ್ಯವಸ್ಥೆಯಲ್ಲೊಂದು ಬದಲಾವಣೆ ಆಗುವುದು ಖಚಿತ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಜನಬೆಂಬಲ: ಜವನೆರ್ ಬೆದ್ರ ಸಂಘಟನೆಗೆ ಈಗಾಗಲೇ ಜನಬೆಂಬಲ ವ್ಯಕ್ತವಾಗಿದೆ. ಜನತೆಯ ಕಣ್ಣೀರೊರೆಸುವ ಕಾರ್ಯವನ್ನು ಈ ಸಂಘಟನೆ ಮಾಡುವ ಕಾರಣದಿಂದಾಗಿ ನಮ್ಮ ಕಷ್ಟಕ್ಕೆ ಸ್ಪಂದಿಸುವವರು ಆರಿಸಿಬರಬೇಕೆಂಬ ಮಾತೂ ಮತದಾರರಿಂದ ಕೇಳಿಬರಲಾರಂಭಿಸಿವೆ. ಎಲ್ಲದಕ್ಕೂ `ಕಾಲವೇ ಉತ್ತರ ನೀಡಬೇಕಾಗಿದೆ…’

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here