ಮೂಡುಬಿದಿರೆಯಲ್ಲಿ ಯುವಕರ ಸ್ಪಂದನೆ

0
984
ಪೊಲೀಸ್‌ ನಿರೀಕ್ಷಕ ದಿನೇಶ್‌ ಕುಮಾರ್‌ ಅವರಿಂದ ಮಾರ್ಗದರ್ಶನ

ಮೂಡುಬಿದಿರೆ:ದಿನ ದಿನವೂ ಆತಂಕ ಸೃಷ್ಠಿಸುತ್ತಿರುವ ಕೊರೊನಾಕ್ಕೆ ಅಕ್ಷರಶಃ ಮೂಡುಬಿದಿರೆಯ ಜನತೆ ಕಂಗೆಟ್ಟಿದ್ದಾರೆ. ಹಲವು ರೀತಿಯಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಈ ಕೊರೊನಾ ಹೊಡೆತ ನೀಡಿದೆ. ಏತನ್ಮಧ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇತರರಿಗೆ ಸಹಕಾರ ನೀಡಲು ಮೂಡುಬಿದಿರೆಯ ಹಲವು ಮಂದಿ ಟೊಂಕ ಕಟ್ಟಿ ನಿತ್ತಿರುವುದು ಶ್ಲಾಘನಾರ್ಹ.

ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಶಾಲೆಯ ಆಡಳಿತ ನಿರ್ದೇಶಕ ಪ್ರಕಾಶ್‌ ಶೆಟ್ಟಿಗಾರ್‌, ಜವನೆರ್‌ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್‌ ಕೋಟೆ, ಪ್ರೀತಿ ಅಕಾಡೆಮಿಯ ನವೀನ್‌ ಮೂಡುಬಿದಿರೆ, ಮೂಡುಬಿದಿರೆಯ ಪೊಲೀಸ್‌ ನಿರೀಕ್ಷಕ ದಿನೇಶ್‌ ಕುಮಾರ್‌ ಸಹಿತ ಅವರ ಸಿಬ್ಬಂದಿಗಳು, ಆರದಿರಲಿ ಬದುಕು ಸಂಸ್ಥೆಯ ಸದಸ್ಯ ಪ್ರಸಾದ್‌ ಕೊಡ್ಯಡ್ಕ , ನ್ಯೂದುರ್ಗಾ ಡಿಜಿಟಲ್ಸ್‌ ಸಂಸ್ಥೆಯ ಸಂತೋಷ್‌ ಕುಮಾರ್‌ ಸಹೋದರರು , ಮೂಡುಬಿದಿರೆಯ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಸದಸ್ಯರು ಅಶಕ್ತರಿಗೆ, ಸಮಸ್ಯೆಯಲ್ಲಿದ್ದವರಿಗೆ ಸ್ಪಂದಿಸುತ್ತಿದ್ದಾರೆ. ಮನೆ ಮನೆಗೆ ದಿನಸಿ, ಅವಶ್ಯ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯ  ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.

ಶಾಸಕರಿಂದ ಸಭೆ: ಮೂಲ್ಕಿ ಮೂಡಬಿದ್ರಿ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರು   ಮೂಡಬಿದಿರೆ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೊನಾ ನಿಯಂತ್ರಣದ ವಿಷಯದಲ್ಲಿ  ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಹಿತಿ  ಪಡೆದರು. ದೇಶದಲ್ಲಿ ಲಾಕ್ ಡೌನ್ ನಡೆಯುತ್ತಿರುವ ಈ ಸಂಧರ್ಭದಲ್ಲಿ ಕ್ಷೇತ್ರದ ಹಲವಾರು ದಿನಸಿ ಅಂಗಡಿಗಳಲ್ಲಿ ದಿನ ಬಳಕೆ ವಸ್ತುಗಳು ಖಾಲಿಯಾಗಿ ಜನರು ತೊಂದರೆ ಅನುಭವಿಸುತ್ತಿರುವದನ್ನು ಮನಗಂಡು , ಈಗಿಂದೀಗಲೇ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಂಡು ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಉಮಾನಾಥ್‌ ಕೋಟ್ಯಾನ್‌ ರಿಂದ ಅಧಿಕಾರಗಳೊಂದಿಗೆ ಸಭೆ

ಈವರಗೆ ಎಲ್ಲಾ ಇಲಾಖೆಯ ಅಧಿಕಾರಿಗಳೂ ಕೊರೊನಾ  ವಿರುದ್ದದ ಹೋರಾಟದಲ್ಲಿ ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ  ಉತ್ತಮವಾಗಿಯೇ ಕಾರ್ಯನಿರ್ವಹಿಸಿರುವಿರಿ , ಮುಂದೆಯೂ ಒಟ್ಟಾಗಿಯೇ ಎದುರಿಸೋಣ ಎಂದು ಹುರಿದುಂಬಿಸಿದರು .ತುರ್ತು ಸಂಧರ್ಭವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಕೊರೊನಾ  ವೈರಸ್ ವಿರುದ್ದದ ಹೋರಾಟದಲ್ಲಿ ತಾಲೂಕು ಆಡಳಿತದ ಜೊತೆ ದಯವಿಟ್ಟು ಸಹಕರಿ ಎಂದು ಶಾಸಕ ಉಮಾನಾಥ್‌ ಕೋಟ್ಯಾನ್‌ ಮನವಿ ಮಾಡಿದರು.

Advertisement

LEAVE A REPLY

Please enter your comment!
Please enter your name here