ಬೆಳುವಾಯಿಯಲ್ಲಿ ಕಟ್ಟಡವೇ ಸೀಲ್ ಡೌನ್!…
ಮೂಡುಬಿದಿರೆ: ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿ ಇಡೀ ಕಟ್ಟಡವನ್ನೇ ಸೀಲ್ ಡೌನ್ ಮಾಡಲಾಗಿದೆ. ತನ್ಮೂಲಕ ಜನತೆಗೆ ಕೊರೊನಾ ಭೀತಿ ಮತ್ತಷ್ಟು ಹೆಚ್ಚುವಂತಾಗಿದೆ. ಮೂಡುಬಿದಿರೆ ಕಾರ್ಕಳ ಮುಖ್ಯ ರಸ್ತೆಯ ಬೆಳುವಾಯಿ ಜಂಕ್ಷನ್ ನಲ್ಲಿರುವ ಸಮರ್ಥ ಕಾಂಪ್ಲೆಕ್ಸ್ ಕೊರೊನಾದ ಹಿನ್ನಲೆಯಲ್ಲಿ ಸೀಲ್ ಡೌನ್ ಆಗಿದೆ.
ಕಾರ್ಕಳದಲ್ಲಿ ಕ್ವಾರಂಟೈನ್ ಮುಗಿಸಿ ಬಂದ ವ್ಯಕ್ತಿ ಇದೇ ಕಾಂಪ್ಲೆಕ್ಸ್ ನಲ್ಲಿದ್ದರು. ಇವರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಇಡೀ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಮೂಡುಬಿದಿರೆ ತಹಶೀಲ್ದಾರ್ ತಿಳಿಸಿದ್ದಾರೆ. ಮೂಡುಬಿದಿರೆ ತಾಲೂಕಿನಲ್ಲಿ ೧೯ಕಡೆಗಳಲ್ಲಿ ಕಂಟೈನ್ ಮೆಂಟ್ ಝೋನ್ ಇದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.