ಮೂಡುಬಿದಿರೆಯಲ್ಲಿ ಬಿಗಿ ನಿಯಮ ಜಾರಿ

0
10367

 ಮೂಡುಬಿದಿರೆ : ರಾತ್ರಿ ಕರ್ಪ್ಯೂ ವಾರಾಂತ್ಯ ಕರ್ಫ್ಯೂ ಜನತಾ ಕರ್ಫ್ಯೂ ಗೆ ಜನರಿಂದ ನಿರೀಕ್ಷಿತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ 14ದಿನಗಳ ಬಿಗಿ ಲಾಕ್ ಡೌನ್ ಗೆ  ಸೋಮವಾರ ಮೂಡುಬಿದಿರೆಯಲ್ಲಿ ಉತ್ತಮ ಸ್ಪಂದನೆ ಲಭ್ಯವಾಗಿದೆ .ಬೆಳಿಗ್ಗೆ 6ಗಂಟೆಯಿಂದ 9ಗಂಟೆಯತನಕ ಅಗತ್ಯವಸ್ತು ಖರೀದಿಯ ನೆಪದಲ್ಲಿ ಜನಜಾತ್ರೆ ಇದ್ದರೂ ತದನಂತರ ಪೊಲೀಸರು ಕಟ್ಟುನಿಟ್ಟಿನ ಕ್ರಮದಿಂದಾಗಿ ಸಂಪೂರ್ಣ ಮೂಡಬಿದ್ರೆ ಸ್ತಬ್ಧವಾಗಿತ್ತು .ಅನಿವಾರ್ಯ ಕಾರಣಗಳಿಗೆ ಮಾತ್ರ ವಾಹನ ಬಳಕೆಯ ವ್ಯವಸ್ಥೆ  ಇದ್ದರು ಕೆಲವೊಂದು ವ್ಯಕ್ತಿಗಳು ವಾಹನದಲ್ಲಿ ಓಡಾಡುತ್ತಿದ್ದುದು ಕಂಡುಬಂತು.ಮೂಡಬಿದ್ರೆ ಪೊಲೀಸ್ ಠಾಣೆ ಜಂಕ್ಷನ್ ,ಬೆಳುವಾಯಿ ಕಾಂತಾವರ ಕ್ರಾಸ್ ಹಾಗೂ ವಿದ್ಯಾಗಿರಿ ಪರಿಸರದಲ್ಲಿ ಬಿಗು ಪೊಲೀಸ್ ತಪಾಸಣೆ ಏರ್ಪಡಿಸಲಾಗಿತ್ತು .ಅಗತ್ಯ ದಾಖಲೆಗಳೊಂದಿಗೆ ಸಂಚರಿಸುವ ವಾಹನಗಳಿಗೆ ಪೊಲೀಸರು ಅವಕಾಶ ನೀಡಿದ್ದರು .ಅವಶ್ಯ ಸೇವೆಯಡಿ ಬರುವ ಮುದ್ರಣ ದೃಶ್ಯ ಮಾಧ್ಯಮ ಸಿಬ್ಬಂದಿಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ .ಪೆಟ್ರೋಲ್ ಬಂಕ್ ಬ್ಯಾಂಕುಗಳು ಹಾಗೂ ಔಷಧಾಲಯಗಳು ತೆರೆದಿದ್ದವಾದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು .ಉಳಿದಂತೆಮೂಡಬಿದಿರೆಯ ಆದ್ಯಂತ ಎಲ್ಲಾ ವ್ಯವಹಾರಗಳು ಸ್ತಬ್ಧವಾಗಿದ್ದವು . 

LEAVE A REPLY

Please enter your comment!
Please enter your name here