ಮೂಡುಬಿದಿರೆಯಲ್ಲಿ ಕೊರೊನಾ ಸ್ಪೋಟ!

0
13594

ಮೂಡುಬಿದಿರೆ: ಅಕ್ಷರಶಃ ಮೂಡುಬದಿರೆಯಲ್ಲಿ ಭೀತಿಯ ವಾತಾವರಣ. ದಿನ ದಿನಕ್ಕೆ ಮೂಡುಬಿದಿರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರತೊಡಗಿದೆ. ಇದರಿಂದಾಗಿ ಮೂಡುಬಿದಿರೆಯಲ್ಲಿ ಆತಂಕ ಸೃಷ್ಠಿಯಾಗಿದೆ.
ಜನತೆ ಜಾಗೃತರಾಗುತ್ತಿಲ್ಲ: ದಿನೇ ದಿನೇ ಕೊರೊನಾ ಪ್ರಕರಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ಮೂಡುಬಿದಿರೆಯಲ್ಲಿ ಜನಜಾಗೃತರಾಗುತ್ತಿಲ್ಲ. ಅವಶ್ಯ ವಸ್ತು ಖರೀದಿಯ ನೆಪದಲ್ಲಿ ಪಟ್ಟಣದಲ್ಲಿ ದಿನಂಪ್ರತಿ ಸುತ್ತಾಡುತ್ತಿದ್ದಾರೆ. ಮಳಿಗೆಗಳು, ಮೆಡಿಕಲ್, ರಸ್ತೆಗಳಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಎಲ್ಲೂ ಅಂತರ ಕಾಯ್ದುಕೊಳ್ಳುವ ಪ್ರಶ್ನೆಯೇ ಕಂಡು ಬರುತ್ತಿಲ್ಲ. ವರುಷದ ಹಿಂದೆ ಕೊರೊನಾ ಮೊದಲ ಅಲೆ ಬಂದಾಗ ಅಂಗಡಿಗಳಲ್ಲಿ ಅವಶ್ಯ ವಸ್ತು ಖರೀದಿಗೆ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅದೇ ಅಂತರವನ್ನು ಜನತೆ ಪಾಲಿಸುತ್ತಿದ್ದರು . ಆದರೆ ಈ ಬಾರಿ ಇದೆಲ್ಲವೂ ಕಾಣುತ್ತಿಲ್ಲ. ಎಲ್ಲೂ ಸ್ಯಾನಿಟೈಸಿಂಗ್ ವ್ಯವಸ್ಥೆಯನ್ನು ಮಾಡುವುದು ಕಂಡು ಬಂದಿಲ್ಲ.
ಕೊರೊನಾ ವಿವರ: ಏಪ್ರಿಲ್ 28 ಒಟ್ಟು ಪ್ರಕರಣ ಸಂಖ್ಯೆ 36,ಏ.29-14, ಏ.30-37, ಮೇ.1-43, ಮೇ 2-25, ಮೇ 3- 63,ಮೇ 4 -14, ಮೇ 5-35 ಹಾಗೂ ಮೇ6-115 ಪ್ರಕರಣಗಳು ದಾಖಲಾಗಿದೆ.
ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿದ್ದರೂ ಜನತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದಿರುವುದು ಮಾತ್ರ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಗೆ ಕಾರಣ ಎನ್ನಲಾಗಿದೆ.

LEAVE A REPLY

Please enter your comment!
Please enter your name here