ಮೂಡುಬಿದಿರೆ: ನಮ್ಮ ಮೂಡುಬಿದಿರೆಗೂ ಕೊರೊನಾ ವಕ್ಕರಿಸಿತೇ…? ಈ ಭೀತಿ ಪರಿಸರವಾಸಿಗಳನ್ನು ಕಾಡತೊಡಗಿದೆ. ಮೊನ್ನೆ ಮೊನ್ನೆಯಷ್ಟೇ ವಿದೇಶಾಗಮನವಾದ ವ್ಯಕ್ತಿ ಕೊರೊಂಟೈನ್ ಬಿಟ್ಟು ಹೊರ ಸುತ್ತಾಡುತ್ತಿದ್ದಾರೆ. ಇವರಿಂದ ಸೋಂಕು ಹರಡುವ ಭೀತಿ ಎದುರಾಗಿದೆ; ಈ ಸುದ್ದಿ ಮೂಡುಬಿದಿರೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ.
ಇಲ್ಲಿನ ಮಾಸ್ತಿಕಟ್ಟೆ ಖಾಸಗೀ ಅಪಾರ್ಟ್ ಮೆಂಟ್ ನಲ್ಲಿರುವ ವಿದೇಶದಿಂದ ಊರಿಗೆ ಮರಳಿದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆಯೇ? ಹೀಗೊಂದು ಗುಮಾನಿ ಇದೀಗ ಮೂಡಿದೆ.
ಮೊನ್ನೆಯಷ್ಟೇ ಏರ್ ಲಿಫ್ಟ್ ಮೂಲಕ ವಿದೇಶದಿಂದ ಸ್ವದೇಶಕ್ಕಾಗಮಿಸಿದ ಪ್ರಯಾಣಿಕ ಇವರಾಗಿದ್ದು ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆಯೆನ್ನಲಾಗಿದೆ. ಅಧಿಕೃತವಾಗಿ ಇವರಿಗೆ ಕೊರೊನಾ ಇದೆ ಎಂಬುದು ದೃಢವಾಗಿಲ್ಲವಾದರೂ, ಸಂದೇಹ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಪುರಸಭಾ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಗೈದಿದ್ದಾರೆ. ಪರಿಸರದಲ್ಲಿ ಭಯದ ವಾತಾವರ ಸೃಷ್ಠಿಯಾಗಿದೆ. ಸುದ್ದಿಯಂತೂ ಮೂಡುಬಿದಿರೆ ಜನತೆಯ ನಿದ್ದೆಗೆಡಿಸುವಂತೆ ಮಾಡಿದೆ. ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳುವ ಅನಿವಾರ್ಯತೆಯಿದೆ.