ಎಲ್ಲರ ಎದೆಯಲ್ಲೂ ಢವ…ಢವ… ಡೇಂಜರ್ ಮೂಡುಬಿದಿರೆ
ಮೂಡುಬಿದಿರೆ: ಇನ್ನು ನೀವೆಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಬುಡಕ್ಕೆ ನೀವೇ ಕೊಡಲಿ ಏಟು ಕೊಟ್ಟಂತೆ. ಯಸ್…ಮೂಡುಬಿದಿರೆಯ ಜನತೆ ಡೇಂಜರ್ ಝೋನ್ ಗೆ ಸೇರಿಕೊಳ್ಳುತ್ತಿದ್ದೀರಿ…ಜೋಕೆ…ಇನ್ನು ಎಡವಿದರೆ ನಮ್ಮ ಸಮಾಧಿಯನ್ನು ನಾವೇ ಕಟ್ಟಿಕೊಂಡಂತೆ…ಎಂದರೂ ತಪ್ಪಲ್ಲ… ಪ್ಲೀಸ್…ಪ್ಲೀಸ್ ಇನ್ನಾದರೂ ಎಚ್ಚೆತ್ತುಕೊಳ್ಳಿ…ಇದು ವಾರ್ತೆ.ಕಾಂ ಮಾಡುವ ಕಳಕಳಿಯ ವಿನಂತಿ…
ಮೂಡುಬಿದಿರೆ ಸಮೀಪದ ಕಡಂದಲೆ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಡಂದಲೆ ಮೈನ್ ಇಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಗಂಟಲು ಮಾದರಿಯ ದ್ರವವನ್ನು ಕೋವಿಡ್ -೧೯ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಮೃತರ ಅಂತ್ಯ ಸಂಸ್ಕಾರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದ ಪ್ರಕಾರ ವೈದ್ಯಕೀಯ ಶಿಷ್ಟಾಚಾರದಂತೆ ಮಂಗಳೂರು ಪಾಲಿಕೆ ವ್ಯಾಪ್ತಿಯ ಬೋಳೂರು ಚಿತಾಗಾರದಲ್ಲಿ ವೈದ್ಯಕೀಯ ನಿಗಾದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಪ್ರದೇಶಕ್ಕೆ ಅನೇಕ ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಭೇಟಿ ನೀಡಿದ್ದರು ಎಂಬುದು ಗಮನಾರ್ಹ ಅಂಶ.
ಮೂಡುಬಿದಿರೆಯ ಜನತೆಯೇ ಇಷ್ಟು ದಿನ ಯತೇಚ್ಛವಾಗಿ ಸಂಚರಿಸಿದ್ದೀರಿ.. ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಇದೀಗಿ ಇದೇ ಮೂಡುಬಿದಿರೆ ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ…