ಮೂಡುಬಿದಿರೆಗೆ ಮತ್ತೊಂದು ಆಘಾತ – ೮ಮಂದಿಗೆ ಕೊರೊನಾ ಪಾಸಿಟಿವ್‌

0
3991


ಮೂಡುಬಿದಿರೆ: ಅಕ್ಷರಶಃ ಮೂಡುಬಿದಿರೆಗೆ ಆಘಾತಗಳ ಮೇಲೆ ಆಘಾತಗಳಾಗಿವೆ. ಮೂಡುಬಿದಿರೆ ದರೆಗುಡ್ಡೆಯ ಎಂಟು ಮಂದಿಗೆ ಇದೀಗ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಕ್ವಾರಂಟೈನ್‌ ಪೂರೈಸಿ ಮನೆಗೆ ಬಂದ ಇವರಲ್ಲಿ ರೋಗ ಲಕ್ಷಣ ದೃಢಪಡುವ ಮೂಲಕ ಕೊರೊನಾ ಪಾಸಿಟಿವ್‌ ಎಂಬುದು ದಾಖಲಾಗಿದೆ.
ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕ್ವಾರಂಟೈನ್‌ ಅವಧಿ ಪೂರೈಸಿ ಮೂಡುಬಿದಿರೆಗೆ ಆಗಮಿಸಿದ್ದರು. ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಇವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
೧೩ವರ್ಷದ ಬಾಲಕಿ, ೫೩ವರ್ಷದ ಪುರುಷ, ೪೨ವರುಷದ ಪುರುಷ, ೧೬ವರ್ಷದ ಯುವಕ, ೨೯ವರುಷದ ಯುವಕ, ೧೫ವರ್ಷದ ಬಾಲಕ, ೩೮ವರುಷದ ಮಹಿಳೆ, ೩೨ವರುಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇವರು ವಾಸವಿದ್ದ ಮನೆಯನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಪರಿಗಣಿಸಲಾಗಿದೆ.

LEAVE A REPLY

Please enter your comment!
Please enter your name here