ಮೂಡುಬಿದಿರೆಗೆ ತಟ್ಟದ ಬಂದ್ ಬಿಸಿ

0
370

ನಮ್ಮ ಪ್ರತಿನಿಧಿ ವರದಿ
ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಕರೆ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗಿದೆ.
 
 
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಕರ್ನಾಟಕ ಬಂದ್ ನ ಒಂದು ಅಂಶವೂ ಕೂಡ ಗೋಚರಿಸಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಿದ್ದು, ಉಳಿದ ಎಲ್ಲಾ ಕೆಲಸಗಳು ಯಥಾ ಪ್ರಕಾರ ನಡೆಯುತ್ತಿದೆ. ಸಾರಿಗೆ ಬಸ್ ಗಳು, ಖಾಸಗಿ ಬಸ್ ಗಳು, ಅಂಗಡಿಗಳು, ಮೆಡಿಕಲ್ ಶಾಪ್ ಗಳು, ಹಣ್ಣು-ತರಕಾರಿ ಮಾರುಕಟ್ಟೆ, ಜನರ ಓಡಾಟ ಮಾಮೂಲಿಯಾಗಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here