ಮೂಡಬಿದಿರೆ ಪಟ್ಟಣದಲ್ಲೊಂದು ಅಗ್ನಿಶಾಮಕ ವ್ಯವಸ್ಥೆಯಿರಲಿ

0
398

 
ಇದು ವಾರ್ತೆ.ಕಾಂ ಕಳಕಳಿ
ಜನನಿಬಿಡ ಮೂಡಬಿದಿರೆ… ಹೇಳೀ ಕೇಳಿ ಅವ್ಯವಸ್ಥೆಯ ಅಭಿವೃದ್ಧಿ. ಯಾವೊಂದು ಶಿಸ್ತೂ ಇಲ್ಲದೆ ಬೇಕಾಬಿಟ್ಟಿಯಾಗಿ ಮೂಡಬಿದಿರೆ ಬೆಳೆಯುತ್ತಿದೆ. ಈ ಬೆಳೆಯುವ ರಭಸದಲ್ಲಿ ಆಗಾಥವೊಂದಾದರೆ ಯಾವೊಂದು ವ್ಯವಸ್ಥೆಯೂ ಉಪಕಾರಕ್ಕೆ ದೊರಕುವುದಿಲ್ಲ. ಮೂಡಬಿದಿರೆಯಲ್ಲಿ ಶಿಕ್ಷಣ ಸಂಸ್ಥೆಗಳು ಖಾಸಗೀ ಒಡೆತನದೊಂದಿಗೆ ತಮ್ಮ ಸ್ವಾಮ್ಯವನ್ನು ಎಂದು ಸ್ಥಾಪಿಸಲು ಹೊರಟಿತೋ ಆ ದಿನವೇ ಮೂಡಬಿದಿರೆ ಅವ್ಯವಸ್ಥಿತವಾಗಿ ಬೆಳವಣಿಗೆಯಾಗತೊಡಗಿತು. ಇದಕ್ಕೆ ಪೂರಕವೇ ಎಂಬಂತೆ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಲಾರಂಭಿಸಿದವರು. ಮೂಡಬಿದಿರೆಗೆ ಬರುವ ಜನಸಂಖ್ಯೆಯೂ ಅದೇ ಪ್ರಕಾರ ಹೆಚ್ಚಾಗತೊಡಗಿತು. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ ಮೂಡಬಿದಿರೆಯಲ್ಲಿ ಸುಸಜ್ಜಿತ ಮೂಲಭೂತ ವ್ಯವಸ್ಥೆ ಇಲ್ಲ ಎಂದೇ ಹೇಳಬಹುದು.
 
fire truck vaarte1
 
ಮೂಡಬಿದಿರೆ ನಗರದಲ್ಲಿ ಏನಾದರೂ ಅಗ್ನಿ ಅವಗಢವಾದರೆ ಮೂಡಬಿದಿರೆಯಿಂದ ಸರಿ ಸುಮಾರು 6ಕಿಲೋಮೀಟರ್ ದೂರದಲ್ಲಿರುವ ಗಂಟಾಲ್ ಕಟ್ಟೆಯಲ್ಲಿರುವ ಅಗ್ನಿಶಾಮಕ ದಳದವರು ದೌಢಾಯಿಸಿ ಬರುವ ಸ್ಥಿತಿ. ಈ ಮಧ್ಯೆ ಟ್ರಾಫಿಕ್ ಜಾಮ್ . ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ಈ ಅಗ್ನಿಶಾಮಕ ಇಲಾಖೆಯವರು ನಿಭಾಯಿಸುತ್ತಾರೆಯಾದರೂ ನಗರದ ಹೊರವಲಯದಲ್ಲಿರುವುದರಿಂದಾಗಿ ನಗರ ವ್ಯಾಪ್ತಿಯಲ್ಲಾಗುವ ಅವಗಢಗಳಿಗೆ ತಕ್ಷಣ ಸ್ಪಂದಿಸುವುದು ಕಷ್ಟವೇ.
ಅತ್ಯವಶ್ಯಕವಾಗಿರುವ ಅಗ್ನಿಶಾಮಕ ದಳದ ವಾಹನಗಳು ನಗರ ವ್ಯಾಪ್ತಿಯಲ್ಲಿದ್ದರೆ ತುರ್ತು ಸಂದರ್ಭದಲ್ಲಿ ವೇಗವಾಗಿ ಸ್ಪಂದಿಸಲು ಸಾಧ್ಯವಾಗುವುದರಲ್ಲಿ ಸಂದೇಹವಿಲ್ಲ.
 
ವಾಹನವಿಲ್ಲ…ಸಮಸ್ಯೆಯೂ ಮುಗಿಯುವುದಿಲ್ಲ…
ಮೂಡಬಿದಿರೆ ನಗರದಿಂದ ಹೊರಭಾಗದಲ್ಲಿರುವ ಅಗ್ನಿಶಾಮಕ ಇಲಾಖೆ ತನ್ನ ಕರ್ತವ್ಯವನ್ನು ನಿಭಾಯಿಸಲು ಹರಸಾಹಸ ಪಡುತ್ತಿದೆ. ಎಷ್ಟೇ ದೂರವಿದ್ದರೂ ತನ್ನ ಕರ್ತವ್ಯ ನಿಭಾಯಿಸಲೇ ಬೇಕಾದ ಅನಿವಾರ್ಯತೆ ಒಂದೆಡೆ…ಮತ್ತೊಂದೆಡೆ ಸಿಬ್ಬಂದಿಗಳ ಕೊರತೆ… ಸಿಬ್ಬಂದಿ ನೇಮಕಾತಿಯೂ ಆಗಿಲ್ಲ… ಏಕಕಾಲದಲ್ಲಿ ಎರಡು ಭಾಗಗಳಲ್ಲಿ ಅಗ್ನಿದುರಂತವಾದರೆ ಇವರ ಪಾಡು ಹೇಳತೀರದು…ಇಲ್ಲಿರುವುದು ಒಂದೇ ಒಂದು ವಾಹನ.. ಈ ಎಲ್ಲಾ ಸಮಸ್ಯೆಗಳ ಸುಳಿಯಲ್ಲಿ ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತದೆ.
 
 
 
ಉದ್ಘಾಟನೆಯ ಭಾಗ್ಯ ಯಾಕಿಲ್ಲ…
ಮೂಡಬಿದಿರೆ ಸಮೀಪದ ಕಡಲ್ ಕೆರೆ ಸಮೀಪ ಅಗ್ನಿಶಾಮಕ ಇಲಾಖೆಗೆ ನೂತನ ಕಚೇರಿ ನಿರ್ಮಾಣವಾಗಿ ಹಲವು ಸಮಯಗಳೇ ಸಂದಿವೆ. ಆದರೆ ಅಲ್ಲಿಗೆ ಇಲಾಖೆಯ ವರ್ಗಾವಣೆಯಾಗಿಲ್ಲ. ನೂತನ ಕಚೇರಿ ಉದ್ಘಾಟನೆಯ ಭಾಗ್ಯವೂ ಲಭಿಸಿಲ್ಲ… ಇದಕ್ಕೆ ಕಾರಣವೇನು ಎಂಬುದೇ ಚಿದಂಬರ ಪ್ರಶ್ನೆಯಾಗಿದೆ. ಕಡಲ್ ಕೆರೆ ಬಳಿ ಅಗ್ನಿಶಾಮಕ ಇಲಾಖೆ ಕಾರ್ಯಾರಂಭಮಾಡಿದರೆ ನೀರಿನ ಸಮಸ್ಯೆಯೂ ಪರಿಹಾರವಾಗುತ್ತದೆ.

LEAVE A REPLY

Please enter your comment!
Please enter your name here