ಮೂಡಬಿದಿರೆಯಲ್ಲಿ ಮಹಿಳಾ ದಿನಾಚರಣೆ

0
209

ಮೂಡಬಿದಿರೆ ಪ್ರತಿನಿಧಿ ವರದಿ
ಮೂಡಬಿದಿರೆ ರೋಟರಿಕ್ಲಬ್ ಟೆಂಪಲ್ ಟೌನ್ ಹಾಗೂ ರೋಟರಿ ಟೆಂಪಲ್ ಟೌನ್ ಆನ್ಸ್ ಕ್ಲಬ್ ಜಂಟಿಯಾಗಿ ಎಂ.ಸಿ.ಎಸ್ ಬ್ಯಾಂಕ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ  ಆಯೋಜಿಸಿತು. ಈ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಡಾ.ಶಶಿಕಲಾ, ಪರ್ತಕರ್ತೆ  ಪ್ರೇಮಶ್ರೀ ಕಲ್ಲಬೆಟ್ಟು,ಸುನಿತಾ ಹಾಗೂ ವಾಣಿ ಮಂಜುನಾಥ್ ಇವರನ್ನು ಜಂಟಿ ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕಿ ರುಚಿಕಾ ಮಹಿಳಾ ದಿನಾಚರಣೆ  ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಆನ್ಸ್ ಕ್ಲಬ್ ಅಧ್ಯಕ್ಷೆ ಸಾರಿಕಾ ರಾಜೇಶ್, ಕಾರ್ಯದರ್ಶಿ ಸರಿತಾ ಹರೀಶ್ , ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ರಾಜೇಶ್ ಬಂಗೇರ, ಕಾರ್ಯದರ್ಶಿ ಹರೀಶ್ ಉಪಸ್ಥಿತರಿದ್ದರು. ದೀಪ್ತಿ ಬಾಲಕೃಷ್ಣ ಪ್ರಾರ್ಥಿಸಿದರು. ರಾಜೇಶ್ ಸ್ವಾಗತಿಸಿದರು. ಸರಿತಾ ವಂದಿಸಿದರು.
 

LEAVE A REPLY

Please enter your comment!
Please enter your name here