ಮೂಡಬಿದಿರೆಯಲ್ಲಿ `ಎಲ್ಲ ಸೇವೆಗಳೂ' ಬಂದ್

0
282
ಮೂಡಬಿದಿರೆ ಹೃದಯ ಭಾಗದಲ್ಲಿ ಕಾರ್ಮಿಕ ಸಂಘಟನೆಯ ಜಾಥಾ ನಡೆಯಿತು.

ನಮ್ಮ ಪ್ರತಿನಿಧಿ ವರದಿ
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ಕರೆನೀಡಿರುವ ಶುಕ್ರವಾರದ ಭಾರತ ಬಂದ್ ಗೆ ಮೂಡಬಿದಿರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ-ಕಾಲೇಜುಗಳು, ಸರಕಾರಿ ಕಚೇರಿಗಳು, ಖಾಸಗೀ-ಸರಕಾರಿ ಬಸ್ ಸಂಚಾರ, ಅಂಗಡಿ ಮುಂಗಟ್ಟುಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡಿವೆ.
ಪೆಟ್ರೋಲ್ ಬಂಕ್, ಹಾಲುವ್ಯಾಪಾರ, ಔಷಧ ಮಾರಾಟ ಮಳಿಗೆ, ಆಸ್ಪತ್ರೆಗಳು ತಮ್ಮ ಸೇವೆಯನ್ನು ನೀಡಿದವು. ಖಾಸಗೀ ವಾಹನ ಸಂಚಾರ ವಿರಳವಾಗಿತ್ತು. ದೂರದೂರುಗಳಿಗೆ ತೆರಳುವ ಸರಕಾರಿ ಬಸ್ ಗಳು ಮೂಡಬಿದಿರೆ ಪೊಲೀಸ್ ಠಾಣಾ ಸಮೀಪ ನಿಲುಗಡೆಗೊಂಡವು. ಕಾರ್ಮಿಕ ಸಂಘಟನೆಗಳು ನಗರದಲ್ಲಿ ಜಾಥಾ ನಡೆಸಿ ಬಂದ್ ಮಾಡುವಂತೆ ವಿನಂತಿ ಮಾಡಿದವು. ಪೊಲೀಸ್ ಬಂದೋಬಸ್ತ್ ಏರ್ಪಾಡಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿತ್ತು.

LEAVE A REPLY

Please enter your comment!
Please enter your name here