ಮೂಡಬಿದಿರೆಯಲ್ಲಿಲ್ಲ ಜಲಕ್ಷಾಮ

0
650
ನೀರು ತುಂಬಿದ ಪುಚ್ಚಮೊಗರು ಡ್ಯಾಂ.

 
ಮೂಡಬಿದಿರೆ ಪ್ರತಿನೀಧಿ ವರದಿ
ಮೂಡಬಿದಿರೆಯಲ್ಲಿ ಜಲಕ್ಷಾಮದ ತೊಂದರೆಯಿಲ್ಲ. ಒಂದೊಮ್ಮೆ ಜಲಕ್ಷಾಮ ಉಂಟಾದರೂ ಅದರ ಸಮರ್ಪಕ ನಿರ್ವಹಣೆಗೆ ಪುರಸಭೆ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಯಾವುದೇ ರೀತಿಯಲ್ಲೂ ನೀರಿನ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ `ವಾರ್ತೆ.ಕಾಂ’ ಗೆ ತಿಳಿಸಿದ್ದಾರೆ.
 
 
ಹೆಚ್ಚುತ್ತಿರುವ ಬಿಸಿಲ ಧಗೆ ಒಂದೆಡೆಯಾದರೆ, ಮೋಡದ ವಾತಾವರಣ ಮತ್ತೊಂದೆಡೆ. ನೀರಿನ ಬಳಕೆ ಅತಿಯಾಗುತ್ತಿದ್ದರೂ ಸಾರ್ವಜನಿಕರಿಗೆ ಯಾವೊಂದು ತೊಂದರೆ ಉಂಟಾಗಬಾರದೆಂದು ಪುರಸಭೆ ನಿಗಾ ವಹಿಸಿದೆ ಎಂದವರು ಹೇಳಿದ್ದಾರೆ.
 
 
ಪುರಸಭೆಯ ಯಾವ ವಾರ್ಡಿನಲ್ಲೂ ನೀರ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಹಲವು ಕಡೆಗಳಿಗೆ ಸ್ವತಃ ಹೋಗಿ ತಪಾಸಣೆ ಮಾಡಿರುವುದಾಗಿ ಹರಿಣಾಕ್ಷಿ ತಿಳಿಸಿದರು.
harinakshi_s_suvarna
ಜನತೆಯ ಅನುಕೂಲಕ್ಕಾಗಿ ನಿರಂತರ ನೀರು ಸರಬರಾಜು ಮಾಡುವ ವ್ಯವಸ್ಥೆಯಿದೆ. ಎಲ್ಲಿಯಾದರೂ ಸಮಸ್ಯೆ ಉದ್ಭವಿಸಿದ್ದೇ ಆದಲ್ಲಿ ತಕ್ಷಣ ಸ್ಥಳಕ್ಕೆ ತೆರಳಿ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೇವೆ ಎಂದವರು ವಿವರಿಸಿದ್ದಾರೆ.
 
 
ಮೂಡಬಿದಿರೆ ಪಟ್ಟಣದಲ್ಲಿರುವ ಪ್ರತೀ ವ್ಯಕ್ತಿಗೆ ನೂರು ಲೀಟರ್ ನಂತೆ ಕುಡಿಯುವ ನೀರನ್ನು ಪುರಸಭೆ ವತಿಯಿಂದ ಪೂರೈಸಲಾಗುತ್ತಿದೆ. ನೀರಿನ ಅಭಾವವಾಗಬಾರದೆಂಬ ದೃಷ್ಠಿಯಿಂದ 133 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು ಈ ಪೈಕಿ 70ಕ್ಕೆ ವಿದ್ಯುತ್ ಪಂಪ್ ಅಳವಡಿಸಿ ನೀರೆತ್ತಲಾಗುತ್ತಿದೆ. ಪುಚ್ಚಮೊಗರು ಅಣೆಕಟ್ಟಿನಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಈ ಎಲ್ಲಾ ಕಾರಣಗಳಿಂದಾಗಿ ನೀರಿಗೆ ತೊಂದರೆ ಉಂಟಾಗದೆಂಬ ಭರವಸೆ ಪುರಸಭೆಯದ್ದು. ಹಲವು ಮನೆಗಳಲ್ಲಿ ಕೆರೆ, ಬಾವಿಗಳಿವೆ. ಉಳಿದಂತೆ ಮೂಡಬಿದಿರೆ ಪುರಸಭೆಯಿಂದ 5600ನೀರ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದೆ. ಆ ಮೂಲಕ ನೀರು ಲಭಿಸುವಂತೆ ಮಾಡಲಾಗಿದೆ. ಈಗಾಗಲೇ ಸುಮಾರು 30ಸಾವಿರ ಮಂದಿ ಪಟ್ಟಣದಲ್ಲಿ ವಾಸಿಸುತ್ತಿದ್ದು ಅವರಿಗೆ ಜಲಕ್ಷಾಮದ ತೊಂದರೆ ಉಂಟಾಗಿಲ್ಲ ಎಂದು ಹೇಳಿದ್ದಾರೆ.
 
 
 
ಗ್ರಾಮ ಗ್ರಾಮಗಳಲ್ಲಿ ಕೊಳವೆ ಬಾವಿ
ಕರಾವಳಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ. ಪ್ರತೀ ಗ್ರಾಮ ವ್ಯಾಪ್ತಿಯಲ್ಲಿ ಶೀಘ್ರ ನಾಲ್ಕರಿಂದ ಐದು ಕೊಳವೆ ಬಾವಿಗಳನ್ನು ಕೊರೆದು ಎರಡು ದಿನಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶಿಸಲಾಗಿದೆ. – ಅಭಯಚಂದ್ರ ಜೈನ್ , ಶಾಸಕರು.
abhayachandra jain
ಚಿತ್ರ: ಹರೀಶ್ ಕೆ.ಆದೂರು.

LEAVE A REPLY

Please enter your comment!
Please enter your name here