ಮೂಕ ರೋಧನೆಗೆ ಕರಗಿದ ಹೃದಯ…

0
834

ಇದು ವಾರ್ತೆ ಎಕ್ಸ್‌ ಕ್ಲೂಸಿವ್‌ : ಹರೀಶ್‌ ಕೆ.ಆದೂರು

ಮೂಡುಬಿದಿರೆ: ಮೂಕ ರೋಧನೆಗೆ ಹೃದಯ ಕರಗಿತು…ನಮ್ಮಂತೆಯೇ ಅವುಗಳಿಗೂ ಹಸಿವಿದೆ…ನಮಗಾದರೆ ಒಂದು ಹೊತ್ತಿನ ಗಂಜಿಯಾದರೂ ಇದೆ…ಇವಕ್ಕೆಲ್ಲಿದೆ…? ಪಾಪ ಎಂಬ ಭಾವನೆ ಮೂಡಿದ್ದೇ ತಡ…ಅವರು ಅತ್ತ ಧಾವಿಸಿದರು… ಕೈಯಲ್ಲಿ ಒಂದಷ್ಟು ಆಹಾರ ಪೊಟ್ಟಣಗಳು…ಕುಡಿಯಲು ನೀರು…ಹಿಡಿದು ತೆರಳಿತು ಆ ತಂಡ!
ಗುಂಡಿಬಿದ್ದ ಕಂಗಳಲ್ಲಿ ಇನ್ನೂ ಬತ್ತದ ಆಸೆಯಿತ್ತು…ಎಲ್ಲಿಯಾದರೂ ಒಂದಷ್ಟು ಕೂಳು ಸಿಗಬಹುದೆಂಬ ಭಾವನೆ ಕಂಡು ಬರುತ್ತಿತ್ತು…ಒಂದೆರಡಲ್ಲ…ಹುಡುಕುತ್ತ ಹೋದಷ್ಟೂ ಅಲ್ಲಿ ಇಲ್ಲಿ ಎಲ್ಲೆಡೆಗಳಲ್ಲಿ ಮೂಕ ರೋಧನೆಯಲ್ಲಿ ಮುಳುಗಿದ್ದ ಪ್ರಾಣಿಗಳು ಕಂಡು ಬಂದವು…ಹುಡುಕಿ ಹುಡುಕಿ ಅವುಗಳಿಗೆ ಆಹಾರ ನೀಡುವ ಕಾರ್ಯವನ್ನು ಈ ತಂಡ ಮಾಡಿತು…! ಒಂದೆರಡು ಹೊತ್ತಲ್ಲ…ಒಂದೆರಡು ದಿನಗಳೂ ಅಲ್ಲ..ಬರೋಬ್ಬರಿ ಏಳು ದಿನಗಳಿಂದ ಈ ಕಾರ್ಯವನ್ನು ಯಾವೊಂದು ಸ್ವಾರ್ಥವಿಲ್ಲದೆ ಮಾಡುತ್ತಿದೆ ಮೂಡುಬಿದಿರೆಯ ಯುವ ಪಡೆ ಅಮರ್‌ ಕೋಟೆ ನೇತೃತ್ವದ ʻಜವನೆರ್‌ ಬೆದ್ರʼ ಸಂಘಟನೆ!. ಅಶಕ್ತರಿಗೆ, ಅವಶ್ಯವಿರುವವರಿಗೆ ಆಹಾರ ಕಿಟ್ ಒದಗಿಸುತ್ತಾ ಲಾಕ್‌ ಡೌನ್‌ ಸಂದರ್ಭದಲ್ಲಿ ಮಾನವೀಯತೆ ಮೆರೆದ ಸಂಘಟನೆಯಿಂದ ನಡೆದ ಮತ್ತೊಂದು ಮಹತ್ವದ ಕಾರ್ಯ ಇದೆಂದರೆ ತಪ್ಪಲ್ಲ.

ನೆಮ್ಮದಿಯಿಂದ ಆಹಾರ ಸೇವನೆ…


ಹೌದು…ಸುಕಾ ಸುಮ್ಮನೆ ಇದೊಂದು ಪ್ರತಿಷ್ಠಿತ ಸಂಘಟನೆಯಾಗಿ ಗುರುತಿಸಿ ಕೊಂಡಿಲ್ಲ…ಯಾರಿಗೂ ಬೇಡವಾಗಿರುವ ಬೀದಿ ಬದಿಯ ನಾಯಿಗಳಿಗೆ, ಆಶ್ರಯವಿಲ್ಲದೆ ಬೀದಿಯಲ್ಲಿ ಸುತ್ತುತ್ತಿರುವ ಬೆಕ್ಕು, ಪ್ರಾಣಿಗಳಿಗೆ ಈ ಸಂಘಟನೆಯ ಸದಸ್ಯರು ಪ್ರೀತಿಯಿಂದ ಆಹಾರ ನೀಡುತ್ತಾರೆ….!ಇದೊಂದು ಮಾನವೀಯ ಕಾರ್ಯ…ದೇವರು ಮೆಚ್ಚುವ ಕೆಲಸ…ಈ ಕಾರಣಕ್ಕಾಗಿಯೇ ಈ ಸ್ವಯಂ ಸೇವಾ ಸಂಘಟನೆ ತನ್ನ ಕಾರ್ಯಗಳ ಮೂಲಕ, ಸಾಧನೆಗಳ ಮೂಲಕ ಎತ್ತರೆತ್ತರಕ್ಕೇರುತ್ತಿದೆ…

Advertisement
ಬೀದಿ ನಾಯಿಗಳಿಗೆ ಅನ್ನಹಾಕುತ್ತಿರುವ ಅಮರ್‌ ಕೋಟೆ….

ಎಲ್ಲೆಲ್ಲಿ…? ಮೂಡುಬಿದಿರೆಯ ಬಸ್‌ ನಿಲ್ದಾಣ, ಪಂಚರತ್ನ ಹೊಟೆಲ್‌ ಪರಿಸರ, ಸ್ವರಾಜ್ಯ ಮೈದಾನ, ಆಲಂಗಾರು, ಅಬ್ಬಕ್ಕ ಮಿನಿ ಪಾರ್ಕ್‌ , ಮೆಸ್ಕಾಂ ಪರಿಸರ, ಜಿ.ವಿ.ಪೈ ಹಾಸ್ಪಿಟಲ್ ಪರಿಸರ, ಸೇರಿದಂತೆ ಮೂಡುಬಿದಿರೆಯ ಒಳ ಹೊರಗೆ ಅನೇಕ ಪ್ರದೇಶಗಳಲ್ಲಿರುವ ಬೀದಿ ನಾಯಿ, ಪ್ರಾಣಿಗಳಿಗೆ ಆಹಾರ ಒದಗಿಸುವ ಕಾರ್ಯ ಜವನೆರ್‌ ಬೆದ್ರ ಸಂಘಟನೆಯಿಂದ ನಡೆಯುತ್ತಿದೆ.

ಸಂಘಟನೆಯ ಸದಸ್ಯರಿಂದ ಬೀದಿನಾಯಿಗಳಿಗೆ ಪ್ರಾಣಿಗಳಿಗೆ ಆಹಾರ


೬ಕೆ.ಜಿ.ಅಕ್ಕಯ ಅನ್ನವೂ ಸೇರಿದಂತೆ ಒಣಮೀನು ಸೇರಿಸಿ ಆಹಾರ ತಯಾರಿಸಿ ನೀಡಲಾಗುತ್ತಿದೆ.
ಈ ಮಾನವೀಯ ಕಾರ್ಯ ಅಮರ್‌ ಕೋಟೆ ನೇತೃತ್ವದಲ್ಲಿ ನಡೆಯುತ್ತಿದ್ದು ಸಂಘಟನೆಯ ಸದಸ್ಯರಾದ ಅನಿಲ್‌ ಕುಮಾರ್‌, ದೀಪಕ್‌ ಕುಮಾರ್‌ ಕೊಲ್ಕೆ, ಶುಭಕರ್‌, ರಾಜೇಶ್‌ ಸಹಕಾರ ನೀಡುತ್ತಿದ್ದಾರೆ.
ಭೇಷ್..ಇವರ ಈ ಮಾನವೀಯ ಕಾರ್ಯಕ್ಕೆ ಬೆನ್‌ ತಟ್ಟೋಣವಲ್ಲವೇ…? ಹಾಗಿದ್ದರೆ ತಡವೇಕೆ…ನೀವೂ ಅಭಿನಂದನೆ ತಿಳಿಸಿ.. 97418 26999

LEAVE A REPLY

Please enter your comment!
Please enter your name here