ಮುಷ್ಕರ ಕೈಬಿಡಲಿ: ಸಚಿವ ರಾಮಲಿಂಗಾರೆಡ್ಡಿ

0
229

 
ಬೆಂಗಳೂರು ಪ್ರತಿನಿಧಿ ವರದಿ
ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಸಿಎಂ ಜತೆ ಚರ್ಚೆ ಬಳಿ ಮಾತನಾಡಿದ ಸಚಿವರು, ಮೊದಲಿ ಸಾರಿಗೆ ನೌಕರರು ಮುಷ್ಕರವನ್ನು ಕೈ ಬಿಡಲಿ. ಬಳಿಕ ಯಾವುದೇ ರೀತಿಯ ಮನವಿಗೆ ಸರ್ಕಾರ ಸ್ಪಂದಿಸುತ್ತದೆ.
 
ಎಸ್ಮಾ ಲ್ಯಾಪ್ಸ್ ಆಗಿತ್ತು, ನಾನೇ ವಾಪಸ್ ತಂದಿದ್ದೇನೆ. ಈ ಸಂದರ್ಭದಲ್ಲಿ ಎಸ್ಮಾ ಜಾರಿ ಮಾಡುವ ಉದ್ದೇಶವಿಲ್ಲ. ಸಾರಿಗೆ ಇಲಾಖೆ ಸಂಘಟನೆ ಜತೆ ಸಂಘರ್ಷಕ್ಕೆ ಇಷ್ಟವಿಲ್ಲ. ಪ್ರತಿನಿತ್ಯ 17 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತೇವೆ. 4 ವಿಭಾಗಗಳಿಂದ ನಿತ್ಯ 17 ಕೋಟಿ ರೂಪಾಯಿ ನಷ್ಟವಾಗಿದೆ. ವಹಿವಾಟಿನ ಶೇ.50ರಷ್ಟು ವೇತನ ನೀಡಲಾಗುತ್ತಿದೆ. ಮುಷ್ಕರ ಕೈಬಿಡಲಿ, ನಂತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಸಿಎಂ ಸಿದ್ದರಾಮಯ್ಯ ಸಹ ಇದನ್ನೇ ಹೇಳಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here