ಮುಷ್ಕರಕ್ಕೆ AITUC ಬೆಂಬಲ

0
500

 
ಮಂಗಳೂರು ಪ್ರತಿನಿಧಿ ವರದಿ
ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರ ವೇತನ ಯಾವುದೇ ಉಳಿದ ಸರಕಾರಿ ಕ್ಷೇತ್ರದ ಸಂಸ್ಥೆಗಳಿಂತ ಅತ್ಯಂತ ಕಡಿಮೆಯಾಗಿದೆ. ಅದರೊಂದಿಗೆ ಈ ನಿಗಮಗಳಲ್ಲಿ ಕಾರ್ಮಿಕರ ಮೇಲಿನ ದೌರ್ಜನ್ಯ ಅತ್ಯಧಿಕವಾಗಿದೆ. ಕಾರ್ಮಿಕರನ್ನು ಜೀತದಾಳುಗಳಾಗಿ ನೋಡಿಕೊಳ್ಳಲಾಗುತ್ತಿದೆ.
 
 
ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕರ್ನಾಟಕ ಸರಕಾರ ಕೇವಲ 8% ವೇತನ ವೃದ್ಧಿ ಘೋಷಿಸಿರುವುದು ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಕೇಂದ್ರ ಸರಕಾರಿ ನೌಕರರ ವೇತನ 23.55% ನಷ್ಟು ಏರಿಸಲಾಗಿದೆ. ರಾಜ್ಯ ಸರಕಾರಿ ನೌಕರರ ವೇತನ ಅದೇ ಪ್ರಮಾಣದಲ್ಲಿ ಏರುವ ಸಾಧ್ಯತೆಗಳು ಕಂಡುಬರುತ್ತಿದೆ. ಆದರೆ ರಾಜ್ಯ ಸಾರಿಗೆ ನೌಕರರ ವೇತನ ಕೇವಲ 8% ಏರಿಸಿರುವುದು ವಿಷಾದಕರ ಸಂಗತಿ.
 
ಇವೆಲ್ಲವನ್ನೂ ಪ್ರತಿಭಟಿಸಿ ಸಾರಿಗೆ ಕಾರ್ಮಿಕರ ಜಂಟಿ ಸಮಿತಿ 2016ರರ ಜುಲೈ 25ರಿಂದ ಅನಿಧಿಷ್ಟಾವಧಿ ಮುಷ್ಕರ ಘೋಷಿಸಿದೆ.
ಕಾರ್ಮಿಕರ ಬೇಡಿಕೆಗಳು ನೈಜ ಬೇಡಿಕೆಗಳಾಗಿದ್ದು ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಜಂಟಿ ಸಮಿತಿ ಜೊತೆ ಚರ್ಚಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು AITUC ದಕ ಮತ್ತು ಉಡುಪಿ ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ ಹಾಗೂ ಈ ಮುಷ್ಕರಕ್ಕೆ ತನ್ನ ಪೂರ್ಣ ಬೆಂಬಲ ನೀಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here