ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

0
534

ಬೆಂಗಳೂರು ಪ್ರತಿನಿಧಿ ವರದಿ
ಪೊಲೀಸರ ಬೇಡಿಗೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವೆಡೆ ಪೊಲೀಸರು ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
 
 
ಪ್ರತಿಭಟನೆಗೆ ಮುಂದಾದರೆ ಕಠಿಣ ಕ್ರಮದ ಎಚ್ಚರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೊಲೀಸರ ಕುಟುಂಬವನ್ನೂ ಸಂಪರ್ಕಿಸಿದ್ದಾರೆ. ಇದರಿಂದ ಪೊಲೀಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸದಿರಲು ನಿರ್ಧರಿಸಿದ್ದಾರೆ. ಹಿರಿಯ ಅಧಿಕಾರಿಗಳ ಮನವೊಲಿಕೆಗೆ ಸಿಬ್ಬಂದಿಗಳು ರಜೆ ವಾಪಸ್ ಪಡೆದಿದ್ದಾರೆ.
 
 
ಮಂಡ್ಯ, ಕಲಬುರಗಿ,ರಾಯಚೂರು, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಚಿಕ್ಕಬಳ್ಳಾಪುರ, ಮೈಸೂರು,ಕೊಪ್ಪಳ, ಚಿತ್ರದುರ್ಗ,ರಾಮನಗರ, ಹಾವೇರಿ, ತುಮಕೂರು ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಯಾವುದೇ ಪ್ರತಿಭಟನೆ ನಡೆಸದೆ ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪೊಲೀಸರ ಕುಟುಂಬಸ‍್ಥರು ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ. ಧಾರವಾಡದಲ್ಲೂ ಪೊಲೀಸರ ಪ್ರತಿಭಟನೆ ಬಹುತೇಕ ಅನುಮಾನವಾಗಿದೆ.

LEAVE A REPLY

Please enter your comment!
Please enter your name here