ಮುಳ್ಳೇರ್ಯ ಹವ್ಯಕ ಮಂಡಲ ಸಭೆ

0
282

ವರದಿ: ಗೋವಿಂದ ಬಳ್ಳಮೂಲೆ
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ಸಭೆ ಸೆ.4ರಂದು ಶ್ರೀರಾಮಧಾಮ ಪಂಜಿಕ್ಕಲ್ಲಿನಲ್ಲಿ ಜರಗಿತು.
 
 
 
ಧ್ವಜಾರೋಹಣ ಶಂಖನಾದ ಗುರು ವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಪ್ರೊ. ಕೃಷ್ಣ ಭಟ್ ಅಧ್ಯಕ್ಷತೆವಹಿಸಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಅವರು ವರದಿ ವಾಚಿಸಿ ಮಹಾಮಂಡಲದಿಂದ ಬಂದಿರುವ ಮಾಹಿತಿಗಳನ್ನಿತ್ತು ಸಭಾ ನಿರ್ವಹಣೆ ಮಾಡಿದರು. ಮಂಡಲದ ಪ್ರತೀ ವಲಯಗಳಿಗೆ ಉಸ್ಥುವಾರಿಗಳನ್ನು ನೇಮಿಸಲಾಯಿತು.
 
 
ಯಂ.ಯನ್.ಹರೀಶ್ ಕೊಡಗು ಅವರು ಅಶೋಕೆಯ ಕುರಿತು ಸಮಗ್ರಾವಲೋಕನ ವಿವರಣೆಗಳನ್ನಿತ್ತರು. ಚಂದ್ರಶೇಖರ ಭಟ್ ಪಳ್ಳತ್ತಡ್ಕ ಅವರು ಗೋಕಿಂಕರ ಯಾತ್ರೆಯ ಕಾರ್ಯಸ್ವರೂಪಗಳ ಮಾಹಿತಿ ನೀಡಿದರು. ಕುಸುಮಾ ಪೆರುಮುಖ ಅವರು ಮಾತೃ ವಿಭಾಗದ ಮುಂದಿನಚಟುವಟಿಕೆಗಳ ಸ್ವರೂಪ ವಿಸ್ಥರಣೆ ಮಾಡಿದರು.
 
 
 
ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಸರಳಿ ಮಹೇಶ್ ಅವರು ಶ್ರೀ ಭಾರತಿ ಪ್ರಕಾಶನ,ಮಾಧ್ಯಮ, ಅಂತರ್ಜಾಲ ಬಳಕೆಯ ಬಗ್ಗೆ ವಿಷಧೀಕರಣವನ್ನಿತ್ತರು. ಸಹಾಯ ವಿಭಾಗದ ಯೋಜನೆಗಳು, ಆರೋಗ್ಯ ಚಿಕ್ತ್ಸಾ ಶಿಬಿರಗಳನ್ನು ನಡೆಸುವ ಕುರಿತು ಮಂಡಲ ಸಹಾಯ ಪ್ರಧಾನ ಡಾ. ಡಿ ಪಿ ಭಟ್ ಅವರು ವಿವರ ವಿಸ್ತರಣೆ ಮಾಡಿದರು. ಮಹಾ ಮಂಡಲ ವೃತ್ತಿ ನಿರತರು ವಿಭಾಗ ಪ್ರಧಾನ ಆನಂದ ಸುಬ್ರಹ್ಮಣ್ಯ ನಾರಾವಿ ಅವರು ಆ ವಿಭಾಗವನ್ನು ಕಾರ್ಯಗತಗೊಳಿಸುವ ಪ್ರಾಧಾನ್ಯತೆಗಳ ಬಗ್ಗೆ ತಿಳಿಸಿದರು.
 
 
ಮಹಾ ಮಂಡಲ ಉಲ್ಲೇಖಪ್ರಧಾನ ಗೋವಿಂದ ಬಳ್ಳಮೂಲೆ ಅವರು ದಾಖಲೀಕರಣದ ಮಹತ್ವ ಜವಾಬ್ದಾರಿಕೆ ಮತ್ತು ಕಾರ್ಯಗತಗೊಳಿಸುವ ರೀತಿನೀತಿಗಳ ಮಾಹಿತಿಗಳನ್ನಿತ್ತರು. ಮಂಡಲ ಉಲ್ಲೇಖ ಪ್ರಧಾನ ಕೃಷ್ಣ ಮೋಹನ ಎಡನಾಡು ಅವರು ದಾಖಲೀಕರಣದ ಮುಂದಿನ ಸಮಯಬಂಧಿತ ಯೋಜನಾ ಮಾಹಿತಿಗಳನ್ನಿತ್ತರು. ಮಂಡಲ ಗುರಿಕ್ಕಾರರಾಗಿ ನೇಮಿಸಲ್ಪಟ್ಟ ಸತ್ಯನಾರಾಯಣ ಭಟ್ ಮೊಗ್ರ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಘಿಕ ರಾಮತಾರಕ ಜಪ ಶಾಂತಿಮಂತ್ರ ಶಂಖನಾದ ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here