ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆ

0
331

ವರದಿ: ಗೋವಿಂದಬಳ್ಳಮೂಲೆ
ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿಗ್ದರ್ಶನದಲ್ಲಿರುವ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಕಾಸರಗೋಡು ವಲಯ ಕಾರ್ಯದರ್ಶಿ ಉಳುವಾನ ಈಶ್ವರ ಭಟ್ಟರ ಕೂಡ್ಲು ನಿವಾಸದಲ್ಲಿ ಜರಗಿತು. ಶ್ರೀಮತಿ ಪರಮೇಶ್ವರಿ ಅವರು ದೀಪ ಪ್ರಜ್ವಲನೆ ಮಾಡಿದರು.
 
 
 
ಧ್ವಜಾರೋಹಣ ಶಂಖನಾದ ಗುರುವಂದನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. ಸಾಮೂಹಿಕ ಆದಿತ್ಯ ಹೃದಯ ಪಠಣದ ಬಳಿಕ ಮಂಡಲ ಅಧ್ಯಕ್ಷ ಫ್ರೊ.ಶ್ರೀಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆಯವರು ಗತಸಭೆಯ ವರದಿಯನ್ನು ಮಂಡಿಸಿದರು. ಕಳೆದ ತಿಂಗಳ ಮಂಗಲಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಸಹಕರಿಸಿದ ಎಲ್ಲ ಗುರುಭಕ್ತರಿಗೆ ಕೃತಜ್ಞತೆ ಸಲ್ಲಿಸುತ್ತಾ, ಮಹಾಮಂಗಲದ ವೈದಿಕ ಹಾಗೂ ಗೋತುಲಾಭಾರದ ಕಾರ್ಯಕ್ರಮವನ್ನು ನಿರ್ವಹಿಸಿದ ಪಳ್ಳತ್ತಡ್ಕ, ಎಣ್ಮಕಜೆ, ಪೆರಡಾಲ ವಲಯಗಳ ಕಾರ್ಯಕರ್ತರನ್ನು ವಿಶೇಷವಾಗಿ ಅಭಿನಂದಿಸಿದರು.
 
 
*ಸಭೆಯಲ್ಲಿ ಮಹಾ ಮಂಡಲದ ಸುತ್ತೋಲೆಗಳ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಲಾಲಾಯಿತು.
*ಬಳಿಕ ಸಭೆಯಲ್ಲಿ ಭಾಗವಹಿಸಿದ ವಿವಿಧ ವಲಯಗಳ ಪ್ರತಿನಿಧಿಗಳಿಂದ ಆಯಾ ವಲಯಗಳ ಮಾಸಿಕ ಚಟುವಟಿಕೆಗಳ ವರದಿ ಮಂಡಿಸಲ್ಪಟ್ಟಿತು.
ಈ ಸಂದರ್ಭದಲ್ಲಿ ವಿದ್ಯಾಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಿಂದ ನಿವೃತ್ತರಾದ ಡಿ.ಡಿ.ಇ. ಮಹಾಲಿಂಗೇಶ್ವರರಾಜ್ ಇವರನ್ನು ಶಾಲು ಹೊದೆಸಿ ಫಲವನ್ನು ನೀಡಿ ಸನ್ಮಾನಪತ್ರವನ್ನಿತ್ತು ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಉಳುವಾನ ಈಶ್ವರ ಭಟ್ ಅವರು ವಾಚಿಸಿದರು.
ಶ್ರೀಗಳು ಮಂಡಲಕ್ಕೆ ಅನುಗ್ರಹಿಸಿ ನೀಡಿರುವ ‘ ಬೇಲೆನ್ಸ್ ಬಾಲ್ ” ನ ಸಾಂಕೇತಿಕ ಅರ್ಥವೈಶಾಲ್ಯದ ಬಗ್ಗೆ ಗೋವಿಂದಬಳ್ಳಮೂಲೆ ಅವರು ವಿವರಿಸಿದರು.
ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಬಳಿಕ ಮಂಡಲ ಪದಾಧಿಕಾರಿಗಳ ಸಭೆಯು ಜರಗಿತು.
ಸಾಂಘಿಕ ರಾಮತಾರಕ ಜಪ , ಶಾಂತಿ ಮಂತ್ರ, ಧ್ವಜಾವತರಣ , ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here