ಮುಳ್ಳೇರಿಯ ಮಂಡಲ ಸಭೆ, ಗೋಪೂಜೆ

0
536

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಆದಿತ್ಯವಾರ ಮಂಡಲ ಕೃಷಿಪ್ರಧಾನ ಹಾಗೂ ಚಲಿಸುವ ಗೋ ಆಲಯದ ರೂವಾರಿ ಬದಿಯಡ್ಕ ಸಮೀಪದ ಮುಣ್ಚಿಕ್ಕಾನ ಗಣೇಶ ಭಟ್ಟರ ಮನೆಯಲ್ಲಿ ನಡೆಯಿತು. ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ. ಕೃಷ್ಣ ಭಟ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
 
 
 
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಮಾತನಾಡಿ ಜ.29ರಂದು ಮಂಗಳೂರಿನ ಕುಳೂರಿನಲ್ಲಿ ನಡೆಯಲಿರುವ `ಗೋಯಾತ್ರೆ-ಮಹಾಮಂಗಲ’ ಸಮಾರಂಭದ ಪೂರ್ವಭಾವಿ ಸಿದ್ಧತೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಮನೆಯ ಪ್ರತಿಯೊಬ್ಬ ಸದಸ್ಯನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಹಾಗೂ ಗೋಭಕ್ತರೆಲ್ಲರನ್ನೂ ಸೇರಿಸಬೇಕು ಕರೆಯಿತ್ತರು.
 
 
 
ಮಹಾಮಂಡಲದ ಮಹೇಶ್ ಚಟ್ನಳ್ಳಿ ಮಾತನಾಡಿ ಮಂಗಲ ಗೋಯಾತ್ರೆಯ ಸಮಗ್ರ ಚಿತ್ರಣವನ್ನು ನೀಡಿದರು. ಪ್ರವೀಣ್ ಭೀಮನ ಕೋಣೆ ಇಂದಿನ ಸಮಕಾಲೀನ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸದುಪಯೋಗಪಡಿಸುವ ಅನಿವಾರ್ಯಯತೆಯ ಬಗ್ಗೆ ವಿವರಣೆ ನೀಡಿ ಟ್ವಿಟ್ಟರ್ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಗತಸಭಾ ವರದಿಯನ್ನಿತ್ತರು. ವಲಯ ಪ್ರತಿನಿಧಿಗಳು ಹಾಗೂ ವಿಭಾಗ ಪ್ರಧಾನರು ತಮ್ಮ ವಲಯಗಳ ವರದಿಗಳನ್ನು ಮಂಡಿಸಿದರು. ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಶಾಂತಿಮಂತ್ರ, ಶಂಖನಾದ, ಧ್ವಜಾವರೋಹಣದೊಂದಿಗೆ ಮುಕ್ತಾಯವಾಯಿತು.
 
 
 
ವಿಶ್ವ ತುಳು ಆಯೊನೊ :
ಬದಿಯಡ್ಕದಲ್ಲಿ ನಡೆಯಲಿರುವ ತುಳು ಆಯೊನೊದಲ್ಲಿ ನಡೆಯಲಿರುವ ಹವ್ಯಕ ಭಾಷೆಯ ಕಾರ್ಯಕ್ರಮದ ಬಗ್ಗೆ ಉಪಾಧ್ಯಕ್ಷ ಕುಮಾರ್ ಸುಬ್ರಹ್ಮಣ್ಯ ಪೈಸಾರಿ ಮಾಹಿತಿಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆಯಿತ್ತರು.

LEAVE A REPLY

Please enter your comment!
Please enter your name here