ಮುನಿಯಾಲು ಸ್ವರ್ಣಪ್ರಾಶನ

0
426

 
ಉಡುಪಿ ಪ್ರತಿನಿಧಿ ವರದಿ
ಮಕ್ಕಳ ಸ್ವಾಸ್ಥ್ಯರಕ್ಷಣೆ ಹಾಗೂ ವ್ಯಾಧಿಕ್ಷಮತೆಯ ಅಭಿವೃದ್ಧಿಗಾಗಿ ಮುನಿಯಾಲು ಅಯುರ್ವೇದ ಸಂಶೋಧನಾ ಸಂಸ್ಥೆಯಿಂದ ವಿಶೇಷವಾಗಿ ಸಂಶೋಧಿಸಲ್ಪಟ್ಟ ಹಿರಣ್ಯ ಪ್ರಾಶದ ಬಿಂದುಗಳನ್ನು 16 ವರ್ಷಗಳೊಳಗಿನ ಮಕ್ಕಳಿಗೆ ಈ ತಿಂಗಳ ಪುಷ್ಯನಕ್ಷತ್ರವಾದ ಮೇ12, 2016ರಂದು ನೀಡಲಾಗುತ್ತಿದೆ.
 
 
ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗುತ್ತಿದ್ದು ಹೆಚ್ಚು ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಹಾಗೂ ವಿ.ಟಿ ರಸ್ತೆಯ ರಾಮಕೃಷ್ಣ ಧರ್ಮ ವೈದ್ಯಾಶ್ರಮ ಶಾಖೆ, ಬೆಂಗಳೂರಿನ ಅರಕೆರೆ ಮೈಕೋಲೇ ಔಟ್ನ ಓಂಕಾರ್ ನಗರದ ಆರನೇ ಅಡ್ಡರಸ್ತೆಗಳಲ್ಲಿ ಹಾಗೂ ರಾಜ್ಯದಾದ್ಯಂತ ಇರುವ ಪ್ರತಿನಿಧಿ ವೈದ್ಯರ ಚಿಕಿತ್ಸಾಲಯಗಳಲ್ಲಿ ಹಿರಣ್ಯಪ್ರಾಶನದ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಪ್ರತೀ ತಿಂಗಳೂ ಸುಮಾರು ಐದು ಸಾವಿರ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದು, ಅಭಿಪ್ರಾಯ ಸಂಗ್ರಹಣೆ ಮಾಡಿದಾಗ ಕನಿಷ್ಠ ಆರು ಬಾರಿ ಉಪಯೋಗಿಸಿದ ಮಕ್ಕಳಲ್ಲಿ ವಿಶೇಷವಾಗಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮತ್ತು ಬುದ್ಧಿಮತ್ತೆಯನ್ನು ವರ್ಧಿಸುವಲ್ಲಿ ಅತ್ಯುಪಯುಕ್ತವಾಗಿರುವುದು ಕಂಡು ಬಂದಿದೆ ಮತ್ತು ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಮುಂಬಯಿಯ ದಾದರ್ನ ಮಮತಾ ಆಶೀಷ್ ಸೊಸೈಟಿಯಲ್ಲಿಯೂ ಕೂಡಾ ಹಿರಣ್ಯ ಪ್ರಾಶನದ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಸಾರ್ವಜನಿಕರೆಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here