ಮುನಿಯಾಲು ಸ್ವರ್ಣಪ್ರಾಶನ

0
426

ನಮ್ಮ ಪ್ರತಿನಿಧಿ ವರದಿ
ಮಕ್ಕಳ ಸ್ವಾಸ್ಥ್ಯರಕ್ಷಣೆ ಹಾಗೂ ವ್ಯಾಧಿಕ್ಷಮತೆಯ ಅಭಿವೃದ್ಧಿಗಾಗಿ ಮುನಿಯಾಲು ಆಯುರ್ವೇದ ಸಂಶೋಧನಾ ಸಂಸ್ಥೆಯಿಂದ ವಿಶೇಷವಾಗಿ ಸಂಶೋಧಿಸಲ್ಪಟ್ಟ ಹಿರಣ್ಯಪ್ರಾಶದ ಬಿಂದುಗಳನ್ನು 16 ವರ್ಷಗಳೊಳಗಿನ ಮಕ್ಕಳಿಗೆ ಈ ತಿಂಗಳ ಪುಷ್ಯ ನಕ್ಷತ್ರವಾದ ಅಕ್ಟೋಬರ್ 23, 2016ರಂದು ನೀಡಲಾಗುತ್ತಿದೆ.
 
 
ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗುತ್ತಿದ್ದು ಹೆಚ್ಚು ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಯೆನಪೋಯ ಮಾಲ್ ನಲ್ಲಿ ಹಾಗೂ ವಿ.ಟಿ ರಸ್ತೆಯ ರಾಮಕೃಷ್ಣಧರ್ಮ ವೈದ್ಯಾಶ್ರಮಶಾಖೆ, ಬೆಂಗಳೂರಿನ ಅರಕೆರೆ ಮೈಕೋಲೇಔಟ್ ನ ಓಂಕಾರ್ ನಗರದ ಆರನೇ ಅಡ್ಡರಸ್ತೆಗಳಲ್ಲಿ ಮತ್ತು ಮೈಸೂರಿನ ಎನ್ ಆರ್ ಮೊಹಲ್ನ ಶಿವಾಜಿ ರಸ್ತೆ ಹಾಗೂ ಹೊಸತಾಗಿ ಆರಂಭಗೊಂಡ ಕಾಸರಗೋಡಿನ ನಾಯಕ್ಸ್ ರೋಡ್ ಜಂಕ್ಷನಲ್ಲಿರುವ ತೆಕ್ಕಿಲ್ ಕಾಂಪ್ಲೆಕ್ನಲ್ಲಿ ಮತ್ತು ರಾಜ್ಯದಾದ್ಯಂತ ಇರುವ ಪ್ರತಿನಿಧಿ ವೈದ್ಯರ ಚಿಕಿತ್ಸಾಲಯಗಳಲ್ಲಿ ಹಿರಣ್ಯಪ್ರಾಶನದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
 
 
 
 
ಪ್ರತೀ ತಿಂಗಳೂ ಸುಮಾರು ಐದು ಸಾವಿರ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದು, ಅಭಿಪ್ರಾಯ ಸಂಗ್ರಹಣೆ ಮಾಡಿದಾಗ ಕನಿಷ್ಠ ಆರು ಬಾರಿ ಉಪಯೋಗಿಸಿದ ಮಕ್ಕಳಲ್ಲಿ ವಿಶೇಷವಾಗಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮತ್ತು ಬುದ್ಧಿಮತ್ತೆಯನ್ನು ವರ್ಧಿಸುವಲ್ಲಿ ಅತ್ಯುಪಯುಕ್ತವಾಗಿರುವುದು ಕಂಡು ಬಂದಿದೆ ಮತ್ತು ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಮುಂಬಯಿಯದಾದರ್ನ ಮಮತಾ ಆಶೀಷ್ ಸೊಸೈಟಿ ಮತ್ತು ಮಾಲಾಡ್ ಪೂರ್ವದಲ್ಲಿರುವ ಪೊದರ್ ಶಾಲೆಯ ಸಮೀಪದಲ್ಲಿರುವ ಶಾಖೆಗಳಲ್ಲಿಯು ಕೂಡಾ ಹಿರಣ್ಯಪ್ರಾಶನದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

LEAVE A REPLY

Please enter your comment!
Please enter your name here