ಮುದ್ದೆ ಸಿದ್ದ ಇನ್ನಿಲ್ಲ

0
213

ರಾಮನಗರ ಪ್ರತಿನಿಧಿ ವರದಿ
ಕಾಲು ನೋವಿನಿಂದ ಇತ್ತೀಚೆಗೆ ಚೇತರಿಕೆ ಕಂಡಿದ್ದ ಕಾಡಾನೆ ಮುದ್ದೆ ಸಿದ್ದ ಗುರುವಾರ (ಡಿಸೆಂಬರ್ 8) ರಾತ್ರಿ ರಾಮನಗರದ ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ಸಾವನ್ನಪ್ಪಿದ್ದಾನೆ.
 
 
 
ಕಾಲು ಮುರಿದುಕೊಂಡಿದ್ದ ಸಿದ್ದ 99 ದಿನಗಳ ತೀವ್ರ ಹೋರಾಟ ನಡೆಸಿತ್ತು. ಕ್ರೇನ್ ಸಹಾಯದಿಂದ ಗ್ಯಾಂಟ್ರಿ ಟವರ್ ನಲ್ಲಿ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
 
 
ಆಗಸ್ಟ್ ತಿಂಗಳಲ್ಲಿ ಬನ್ನೇರುಘಟ್ಟದಿಂದ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವೇಳೆಯಲ್ಲಿ ಕಾಡಾನೆಯ ಕಾಲು ಮುರಿದಿತ್ತು. ಆ ನಂತರ ಸರಕಾರವೇ ಮುತುವರ್ಜಿ ವಹಿಸಿ, ಚಿಕಿತ್ಸೆಗಾಗಿ ಸಮಿತಿಯೊಂದನ್ನು ರಚಿಸಿ, ಮಂಚನಬೆಲೆಯ ಅವ್ವೇರಹಳ್ಳಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿತ್ತು. ಅರಣ್ಯ ಇಲಾಖೆಯು ವೈಲ್ಡ್ ಲೈಫ್ ಎಸ್ ಒಎಸ್ ಎಂಬ ಸಂಸ್ಥೆ ಸಹಕಾರದ ಜತೆಗೆ ಸಿದ್ದನ ಚಿಕಿತ್ಸೆ ನಡೆಸುತ್ತಿತ್ತು.
 
 
ಹಲವು ದಿನಗಳ ಕಾಲ ಅನಾರೋಗ್ಯ ಎದುರಿಸಿದ್ದ ಕಾಡಾನೆ ಚೇತರಿಕೆ ಕಾಣುವ ಲಕ್ಷಣಗಳು ಇರಲಿಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ ಕಾಡಾನೆ ಸಿದ್ದ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಸಿದ್ದ ಮೃತಪಟ್ಟಿದೆ.

LEAVE A REPLY

Please enter your comment!
Please enter your name here