ಮುದ್ದಿನ ಪತಿಗಾಗಿ ಹೆಸರು ಬದಲಾಯಿಸಿಕೊಂಡ ಪತ್ನಿ

0
615

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮತ್ತು ರೂಪದರ್ಶಿ, ನಟಿ ಹೇಜೆಲ್ ಕೀಚ್ ಅವರು ಹಿಂದು ಸಂಪ್ರದಾಯದಂತೆ ನಿನ್ನೆ ವಿವಾಹವಾಗಿದ್ದಾರೆ.
 
ತನ್ನ ಪತಿ ಯುವಿಗಾಗಿ ಹೇಜೆಲ್ ತಮ್ಮ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಿಸಿಕೊಂಡಿದ್ದಾರೆ. ನವೆಂಬರ್ 30 ರಂದು ಸಿಖ್ ಸಂಪ್ರದಾಯದಂತೆ ಯುವರಾಜ್ ಸಿಂಗ್ ವಿವಾಹವಾಗಿದ್ದರು. ಹೇಜೆಲ್ ಕೀಚ್ ಅವರ ತಂದೆ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಾಯಿ ಹಿಂದೂ ಧರ್ಮಕ್ಕೆ ಸೇರಿದ್ದರು.
 
 
 
ಇದರಿಂದಾಗಿ ಹೇಜೆಲ್ ಕೀಚ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಯುವಿ ಬಹಳ ಗೌರವಿಸುವ ಬಾಬಾ ರಾಮ್ ಸಿಂಗ್ ಸಲಹೆಯಂತೆ ಹೇಜೆಲ್ ಕೀಚ್ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಾಯಿಸಲಾಗಿದೆ.
 
ಹೇಜೆಲ್ ಕೀಚ್ ತಾಯಿ ಹಿಂದೂ ಧರ್ಮದವರಾಗಿದ್ದರಿಂದ ಹಿಂದು ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ನಡೆಯಿತು. ಈ ಸಮಾರಂಭಕ್ಕೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸೀಮಿತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here