ಮುಖ್ಯಮಂತ್ರಿ ಶುಭಾಶಯ

0
273

ಗೌರೀ ಗಣೇಶ ಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ
ಗೌರಿ ಮತ್ತು ಗಣೇಶ ಹಬ್ಬಗಳ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. ಗೌರಿ ಹಬ್ಬವು ತಾಯಿಯಲ್ಲಿ ಮಗನ ಮೇಲಿನ ಪುತ್ರ ವಾತ್ಸಲ್ಯಕ್ಕೆ ಹಾಗೂ ಗಣೇಶನ ಹಬ್ಬವು ಮಗನಲ್ಲಿ ತಾಯಿಯ ಮೇಲಿನ ಮಾತೃ ಭಕ್ತಿಗೆ ಧ್ಯೋತಕವಾಗಿದೆ. ಯಾವುದೇ ಕಾರ್ಯಚಟುವಟಿಕೆಯ ಶುಭಾರಂಭಕ್ಕೆ ವಿಘ್ನಗಳ ನಿವಾರಕ ವರಸಿದ್ಧಿ ವಿನಾಯಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಶ್ರೀ ವಿಘ್ನೇಶ್ವರ ಸ್ವಾಮಿಯ ಕೃಪಾ ಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ. ರಾಜ್ಯದ ಎಲ್ಲೆಡೆ ಅಭಿವೃದ್ಧಿ ಪಸರಿಸಲಿ. ರಾಜ್ಯವು ಸಮೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here