ಮುಖ್ಯಕಾರ್ಯದರ್ಶಿಗೆ ಐಟಿ ಬಿಸಿ

0
273

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡು ರಾಜ್ಯದ ಮುಖ್ಯಕಾರ್ಯದರ್ಶಿಗೂ ಐಟಿ ಬಿಸಿ ತಟ್ಟಿದೆ. ಮುಖ್ಯಕಾರ್ಯದರ್ಶಿ ರಾಮಮೋಹನ್ ರಾವ್ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದೆ. ಕಾರ್ಯದರ್ಶಿಯ ಸಂಬಂಧಿಕರ ಮನೆ ಸೇರಿ ಒಟ್ಟು 10 ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ.
 
 
 
ಚೆನ್ನೈನ ಅಣ್ಣಾನಗರದಲ್ಲಿರುವ ರಾಮಮೋಹನ್ ರಾವ್ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ರಾಮಮೋಹನ್ ರಾವ್ ಪುತ್ರನ ನಿವಾಸ, ಕಚೇರಿ ಮೇಲೂ ಐಟಿ ದಾಳಿ ನಡೆದಿದೆ. ಇಂದು ಮುಂಜಾನೆ 5.30ರಿಂದ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮನೆಯಲ್ಲಿದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಲಿ ವೇಳೆ ಅಪಾರ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದೆ.
 
 
ಕಳೆದ ತಿಂಗಳಷ್ಟೇ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಪಡೆದಿದ್ದ ರಾವ್, ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಬೇನಾಮಿ ಹಣ, ವಹಿವಾಟು ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

LEAVE A REPLY

Please enter your comment!
Please enter your name here