ಮುಕ್ತ ದಾಖಲೆಗಳ ಪೋರ್ಟಲ್ ಲಭ್ಯ

0
368

 
ರಾಷ್ಟ್ರೀಯ ಪ್ರತಿನಿಧಿ ವರದಿ
ಸಿಕ್ಕಿಂ ರಾಜ್ಯದಲ್ಲಿ sikkim.data.gov.in ಪೋರ್ಟಲ್ ಆರಂಭವಾಗಿದೆ. ಈ ಪೋರ್ಟಲ್ ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ದಾಖಲೆಗಳು ಲಭ್ಯವಾಗಲಿದೆ.
 
 
 
ಇದರಲ್ಲಿರುವ ದಾಖಲೆಗಳನ್ನು ಯಾರೂ ಬೇಕಾದರೂ ಸ್ವತಂತ್ರವಾಗಿ ಬಳಕೆ ಮಾಡಿಕೊಳ್ಳಲು ಹಾಗೂ ಮರುಬಳಕೆ-ಮರುವಿನಿಮಯ ಮಾಡಿಕೊಳ್ಳಬಹುದು.
 
 
 
ಪೋರ್ಟಲ್ ನ್ನು ಸಿಕ್ಕಿಂ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ದೆಹಲಿಯ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಜಂಟಿಯಾಗಿ ರೂಪಿಸಿದೆ. ಈ ಯೋಜನೆಯಿಂದ ಸಿಕ್ಕಿಂ ರಾಜ್ಯ ದೇಶದಲ್ಲಿ ಮೊದಲ ಮುಕ್ತ ಸರ್ಕಾರಿ ದಾಖಲೆಗಳ ಪೋರ್ಟಲ್ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here