ಮುಂಬೈ ದಾಳಿಯ ಕೊನೆಯ ಹೀರೋ ಇನ್ನಿಲ್ಲ

0
250

ರಾಷ್ಟ್ರೀಯ ಪ್ರತಿನಿಧಿ ವರದಿ
26/11 ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ವೇಳೆ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಗುರುವಾರ ರಾತ್ರಿ ಸಾವನ್ನಪ್ಪಿದೆ.
 
 
ಹನ್ನೊಂದು ವರ್ಷ ವಯಸ್ಸಿನ ಸೀಸರ್ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿತ್ತು. ಕಳೆದ ಕೆಲ ದಿನಗಳಿಂದ ಹಿಂದೆ ನಾಯಿ ಆರೋಗ್ಯ ತೀರಾ ಹದಗೆಟ್ಟು ನಡೆಯಲೂ ಆಗದ ಸ್ಥಿತಿಯಲ್ಲಿತ್ತು. ಸೀಸರ್ ಆರೋಗ್ಯದಲ್ಲಿ ಕಳೆದೊಂದು ವಾರದಲ್ಲಿ ತಕ್ಕ ಮಟ್ಟಿನ ಚೇತರಿಕೆ ಕಂಡಿತ್ತು. ಇದರಿಂದ ಸೀಸರ್ ಮೊದಲಿನಂತೆ ಓಡಾಡಬಹುದು ಎಂಬ ಆಶಾಭಾವ ಹೊಂದಿದ್ದೇವು. ಆದರೆ ಅದು ಹುಸಿಯಾಗಿದ್ದು, ನಿನ್ನೆ ತಡರಾತ್ರಿಯಲ್ಲಿ ಸೀಸರ್ ಸಾವನ್ನಪ್ಪಿದೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
 
 
ವಿರಾರ್‍ನ ರಿಟೈರ್‍ಮೆಂಟ್ ಅನಿಮಲ್ ಹೋಮ್‍ನಲ್ಲಿ ಕೊನೆಯುಸಿರೆಳೆದ ಸೀಸರ್ ಮೇಲೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
 
 
ಮುಂಬೈ ಉಗ್ರ ದಾಳಿ ವೇಳೆ ತಾಜ್ ಹೊಟೆಲ್ ನಲ್ಲಿ ಅಡಗಿದ್ದ ಉಗ್ರರ ಜಾಡು ಹಿಡಿಯುವಲ್ಲಿ ಸೀಸರ್ ಪ್ರಮುಖ ಪಾತ್ರ ವಹಿಸಿತ್ತು. ಸೀಸರ್ ನೊಂದಿಗೆ ಇಲಾಖೆಯ ಇತರೆ ಶ್ವಾನಗಳಾದ ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿಗಳು ಸಹಾಯ ಮಾಡಿದ್ದು, 4 ಪೊಲೀಸ್ ನಾಯಿಗಳಲ್ಲಿ ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿ ಕೂಡ ಸಾವನ್ನಪ್ಪುವುದರೊಂದಿಗೆ ಸೀಸರ್ ಒಂಟಿಯಾಗಿತ್ತು.
 
 
ಇದರಿಂದ ಸೀಸರ್ ಖಿನ್ನತೆಗೆ ಒಳಗಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೀಸರ್‍ನನ್ನು ಪರೇಲ್‍ನ ಪಶು ಚಿಕಿತ್ಸಾಲಯದಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಸೀಸರ್ ಪವಾಡಸದೃಶವಾಗಿ ಚೇತರಿಸಿಕೊಂಡಿತ್ತು. ಆದರೆ ಕಳೆದ ವಾರದಿಂದ ಶಕ್ತಿಹೀನವಾಗಿದ್ದ ಸೀಸರ್ ನಡೆದಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿತ್ತು.ಫಿಜಾ ಶಾ ಎಂಬ ವ್ಯಕ್ತಿ ಈ ನಾಯಿಯನ್ನು ಪೋಷಿಸುತ್ತಿದ್ದರು.

LEAVE A REPLY

Please enter your comment!
Please enter your name here