ಬೆಂಗಳೂರು ಪ್ರತಿನಿಧಿ ವರದಿ
ಇನ್ನೂ ಆರಂಭವಾಗದ ಪಿಯು ಮೌಲ್ಯಮಾಪನ updated news
ರಾಜ್ಯದ 45 ಕೇಂದ್ರಗಳಲ್ಲಿ ಪಿಯು ಮೌಲ್ಯಮಾಪನ ಸ್ಥಗಿತವಾಗಿದೆ. ಈ ಮೂಲಕ ಪಿಯು ಉಪನ್ಯಾಸಕರು ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಎಸ್ಮಾ ಜಾರಿಯಾದರೂ ಬೇಡಿಕೆ ಈಡೇರುವವರೆಗೂ ಹೋರಾಟ ಮಾಡುತ್ತೇವೆ. ಜೈಲಿಗೆ ಹೋದರೂ ಕೂಡ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಉಪನ್ಯಾಸಕರು ನೆರ ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆ ಈಡೇರುವವರೆಗೂ ಮೌಲ್ಯಾಮಾಪನ ಬಹಿಷ್ಕಾರಿಸುತ್ತೇವೆ. ಇಂದಿನಿಂದ ಪಿಯು ಮೌಲ್ಯಮಾಪನ ಆರಂಭವಾಗಬೇಕಿತ್ತು. ಆದರೆ ಪಿಯು ಉಪನ್ಯಾಸಕರು ಕೆಲಸಕ್ಕೆ ಹಾಜರಾಗದೇ, ಮೌಲ್ಯಮಾಪನ ಕೇಂದ್ರಗಳಲ್ಲಿ ಸಹಿ ಹಾಕದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಹೊರಬಂದ ಸತ್ಯಸಂಗತಿ
ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಆರೋಪಿ ಮಂಜುನಾಥ್ ಪಾತ್ರ ದೃಢವಾಗಿದೆ. ಆರೋಪಿಗಳು ಸಿಐಡಿ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಮಾ.20ರ ಬೆಳಗ್ಗೆ 10.15ಕ್ಕೆ ವಾಟ್ಪಪ್ ನಲ್ಲಿ ಮಂಜುನಾಥ್ ಪ್ರಶ್ನೆಪತ್ರಿಕೆ ಪ್ರತಿಯನ್ನು ರವಾನಿಸಿದ್ದಾನೆ. ಮಾ.21ರ ರಾಸಾಯನ ಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಪ್ರತಿಯಾಗಿದೆ.
ಇತ್ತ ಓಬಳ್ ರಾಜ್, ನನ್ನ ಬಳಿ ಇರುವುದು ಬೇಸಿಕ್ ಫೋನ್ ಎಂದಿದ್ದಾನೆ. ಮಂಜುನಾಥ್ ಜತೆ ಸಂಪರ್ಕದಲ್ಲಿದ್ದಿದು ನಿಜವೆಂದು ಒಪ್ಪಿಕೊಂಡಿದ್ದಾನೆ. ಸಚಿವರ ಕಚೇರಿ ಲ್ಯಾಂಡ್ ಲೈನ್ ಮೂಲಕ ಸಂಪರ್ಕದಲ್ಲಿದ್ದೆ ಎಂದು ಸಿಐಡಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ದ್ವಿತೀಯ ಪಿಯು ಕೆಮಿಸ್ಟ್ರಿ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಸೋರಿಕೆ ಕೇಸ್ ಹಿನ್ನೆಲೆಯಲ್ಲಿ 10 ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ಸಂಬಂಧ ಸಿಐಡಿ ತಂಡ ಅಮಾನತುಗೊಂಡಿದ್ದ 10 ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಬಂಧಿತರು ಪಿಯು ಪರೀಕ್ಷ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಶ್ನೆಪತ್ರಿಕೆಗಳ ಸೋರಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು.
ಓಬಳ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಓಬಳ್ ರಾಜ್ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ. ನಿನ್ನೆ ಆರೋಪಿ ಓಬಳ್ ರಾಜ್ ನ ಸಿಐಡಿ ತಂಡ ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಓಬಳ್ ರಾಜ್ ಸಂಪರ್ಕದಲ್ಲಿದ್ದ ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ.