ಮುಂದುವರಿದ ಶೋಧ ಕಾರ್ಯ

0
166

 
ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ವಾಯುಸೇನೆಯ ವಿಮಾನ ನಾಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನದ ಪತ್ತೆಗಾಗಿ ಬೃಹತ್ ಶೋಧ ಕಾರ್ಯಾ ಚರಣೆ ಶುರುವಾಗಿದೆ.
 
 
ಭಾರತೀಯ ವಾಯುಸೇನೆ ಮತ್ತು ನೌಕಾಸೇನೆಯಿಂದ ಹುಡುಗಾಟ ಆರಂಭಿಸಲಾಗಿದೆ. ಯುದ್ಧನೌಕೆ ‘ಐಎಸ್ ಎಸ್ ಜಲಸ್ವಾ’ ದಿಂದಲೂ ಹುಡುಕಾಟ ನಡೆಯುತ್ತಿದೆ. ಸಬ್ ಮೆರಿನ್, ನೌಕಾಸೇನೆ ಹಡಗುಗಳಿಂದ ನಿರಂತರ ಶೋಧ ಕಾರ್ಯ ನಡೆಸಲಾಗುತ್ತಿದೆ.
 
 
ನಾಪತ್ತೆಯಾಗಿರುವ ವಿಮಾನ ಹುಡುಕಲು ನೆರೆದೇಶದ ನೆರವು ಕೇಳಲಾಗಿದೆ. ಮಲೇಷ್ಯಾ, ಸಿಂಗಾಪುರ್, ಶ್ರೀಲಂಕಾ ದೇಶದ ನೆರವು ಕೇಳಿದೆ.
 
 
ನಿನ್ನೆ ಬೆಳಗ್ಗೆ ಬಂಗಾಳಕೊಲ್ಲಿ ಸಮುದ್ರ ಮೇಲೆ ಹಾರುವಾಗ ಭಾರತೀಯ ವಾಯುಸೇನೆಗೆ ಸೇರಿದ ವಿಮಾನ ನಾಪತ್ತೆಯಾಗಿದೆ. ವಿಮಾನದಲ್ಲಿ 29 ಮಂದಿ ಪ್ರಯಾಣಿಕರಿದ್ದರು. ವಾಯುಸೇನೆಗೆ ಸೇರಿದ AN-32 ವಿಮಾನ ನಾಪತ್ತೆಯಾಗಿದೆ.
 
 
ನಾಪತ್ತೆಯಾದ ವಿಮಾನ ಚೆನ್ನೈನ ತಾಂಬ್ರಮ್ ಏರ್ ಬೇಸ್ ನಿಂದ ಅಂಡಮಾನ್ ನ ಫ್ಲೋರ್ಟ್ ಬ್ಲೇರ್ ನತ್ತ ಹೊರಟಿತ್ತು. ಬೆಳಗ್ಗೆ 7.30ಕ್ಕೆ ಟೇಕ್ ಆಫ್ ಆದ ವಾಯುಸೇನೆ ವಿಮಾನ ನಂತರ ಬೆಳಗ್ಗೆ 7.46ಕ್ಕೆ ವಾಯುನೆಲೆಯನ್ನು ಸಂಪರ್ಕಿಸಿತ್ತು. 8.12ಕ್ಕೆ ಕೊನೆ ಬಾರಿ ರಾಡಾರ್ ಸಂಪರ್ಕಕ್ಕೆ ಸಿಕ್ಕಿತ್ತು. ಬಂಗಾಳಕೊಲ್ಲಿ ಸಮುದ್ರದ ಮೇಲೆ ವಿಮಾನ ಹಾರುವಾಗ ನಾಪತ್ತೆಯಾಗಿದೆ.

LEAVE A REPLY

Please enter your comment!
Please enter your name here