ಮುಂದುವರಿದ ಬಾರ್ ದಾಳಿ

0
226

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ಬಾರ್ ಗಳ ಮೇಲೆ ದಾಳಿ ಮುಂದುವರಿದಿದೆ. ಕಬ್ಬನ್ ಪಾರ್ಕ್ ಉಪವಿಭಾಗದ 2 ಬಾರ್ ಗಳ ಮೇಲೆ ದಾಳಿ ನಡೆದಿದೆ.
 
 
ಅಶೋಕನಗರ, ಕಬ್ಬನ್ ಪಾರ್ಕ್ ಪೊಲೀಸರು ಪತ್ಯೇಕವಾಗಿ ಬಾರ್ ಗಳ ಮೇಲೆ ದಾಳಿ ನಡೆಸಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿರುವ ನರ್ತಕಿ ಬಾರ್& ರೆಸ್ಟೋರೆಂಟ್ ಮೇಲೆ ಅಶೋಕನಗರ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಹೊರರಾಜ್ಯದ 20ಕ್ಕೂ ಹೆಚ್ಚು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಬಾರ್ ನ ಮ್ಯಾನೇಜರ್, ಕ್ಯಾಷಿಯರ್, ಸಿಬ್ಬಂದಿಗಳನ್ನು ಪೊಲೀಸರ ಬಂಧಿಸಿದ್ದಾರೆ.
 
 
 
ಬ್ರಿಗೇಡ್ ರಸ್ತೆಯಲ್ಲಿರುವ ಬ್ಲೂ ಬಾರ್ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ನಡೆಸಿದ ಪೊಲೀಸರು ಬಾರ್ ನಲ್ಲಿದ್ದ ಹೊರರಾಜ್ಯದ 6 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಬಾರ್ ನ ಮ್ಯಾನೇಜರ್ ಸೇರಿ 20ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಂಧಿಸಲಾಗಿದೆ.
 
 
ಈ ಎರಡು ಬಾರ್ ಗಳಲ್ಲಿ ಬಾರ್ ಗರ್ಲ್ಸ್ ಗಳನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾರ್ ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಶೋಕ್ ನಗರ, ಕಬ್ಬನ್ ಪಾರ್ಕ್ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.
 
 
ಬಿಹಾರ ಮತ್ತು ನೇಪಾಳದಿಂದ ಯುವತಿಯರನ್ನು ಮಾನವ ಕಳ್ಳಸಾಗಣೆ ಮೂಲಕ ಕರೆತಂದು ಬಾರ್ ಗರ್ಲ್ ಗಳಾಗಿ ಕೆಲಸಕ್ಕಿಟ್ಟುಕೊಂಡಿದ್ದರು. ಅಲ್ಲದೆ ಅವರಿಗೆ ಅಶ್ಲೀಲ ಉಡುಗೆಗಳನ್ನು ತೊಡಿಸಿ, ಅಶ್ಲೀಲ ನೃತ್ಯ ಮಾಡಿಸಿ, ಗಿರಾಕಿಗಳಿಗೆ ಲೈಂಗಿಕ ಪ್ರಚೋದನೆ ನೀಡಲಾಗುತ್ತಿತ್ತು ಎಂದು ಪೊಲೀಸರು  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here