ಮುಂದುವರಿದ ಧರಣಿ

0
279

ಚೆನ್ನೈ ಪ್ರತಿನಿಧಿ ವರದಿ
ಜಲ್ಲಿಕಟ್ಟು ಒತ್ತಾಯಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಇಂದೂ ಸಹ ಮುಂದುವರಿದಿದೆ. ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ತಿರುಚ್ಚಿಯಲ್ಲಿ 2 ಸಾವಿರ ಜನರು ರಾತ್ರಿಯಿಡೀ ಧರಣಿ ನಡೆಸುತ್ತಿದ್ದಾರೆ. ಮಧುರೈ ನಗರದಲ್ಲಿ 500ಕ್ಕೂ ಹೆಚ್ಚು ಜನರು ಧರಣಿ ನಡೆಸುತ್ತಿದ್ದಾರೆ. ಸೇಲಂ, ಕೊಮತ್ತೂರುಗಳಲ್ಲೂ ರಾತ್ರಿಯಿಡೀ ಧರಣಿ ನಡೆದಿದೆ.
ಟೆಕ್ಕಿಗಳು ಇಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟೀಚರ್ಸ್ ಅಸೋಸಿಯೇಷನ್, ಖಾಸಗಿ ನೌಕರರು ಭಾಗಿಯಾಗಿದ್ದಾರೆ.
 
 
ರೈಲು ಸಂಚಾರ ಸ್ಥಗಿತ
ಸೇಲಂ ರೇಲ್ವೆ ನಿಲ್ದಾಣಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಕಾರೈಕಲ್-ಬೆಂಗಳೂರು ಎಕ್ಸ್ ಪ್ರೆಸ್ ರೈಲಿಗೆ ಮುತ್ತಿಗೆ ಹಾಕಿದ್ದಾರೆ. ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಡೀಸೆಲ್ ಪೈಪ್ ನ್ನು ಡ್ಯಾಮೇಜ್ ಮಾಡಲಾಗಿದೆ. ಇದರಿಂದ ಕಾರೈಕಲ್-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರ ಸ್ಥಗಿತವಾಗಿದೆ. ಸೇಲಂ ಮೂಲಕ ಹಾದು ಹೋಗುವ 20 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರತಿಬಟನೆ ಹಿನ್ನೆಲೆಯಲ್ಲಿ ಕೆಲ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
 
 
ಇಂದು ಚೆನ್ನೈ ರಾಜ್ಯಪಾಲರ ಆಗಮನ
ಬೆಳಗ್ಗೆ 10 ಗಂಟೆಗೆ ತಮಿಳುನಾಡು ಸಚಿವ ಸಂಪುಟ ಸಭೆ ನಡೆಯಲಿದೆ. ಜಲ್ಲಿಕಟ್ಟು ಕುರಿತು ಸಂಪುಟ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಇಂದು ಸಂಜೆ 5ರ ವೇಳೆಗೆ ಜಲ್ಲಿಕಟ್ಟು ಸುಗ್ರವಾಜ್ಞೆಗೆ ಅಂಕಿತ ಸಾಧ್ಯತೆ ಇದೆ.
ಇಂದು ಮಧ್ಯಾಹ್ನ 3.30ರ ವೇಳೆಗೆ ರಾಜ್ಯಪಾಲರು ಚೆನ್ನೈ ತಲುಪಲಿದ್ದಾರೆ. ತಮಿಳುನಾಡು ಉಸ್ತುವಾರಿ ಹೊಂದಿರುವ ಹಾಗೂ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಚೆನ್ನೈಗೆ ತೆರಳಲಿದ್ದಾರೆ ಎಂದು ತಮಿಳುನಾಡಿನ ರಾಜಭವನ ಮೂಲಗಳು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here