ಮುಂದುವರಿದ ಡೈರಿ ವಿವಾದ

0
435

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯಾಡಳಿತ ಕಾಂಗ್ರೆಸ್‌ ಪಕ್ಷ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿದೆ ಎನ್ನಲಾದ ಡೈರಿ ವಿವಾದ ಶುಕ್ರವಾರವೂ ಉಭಯ ಸದನಗಳಲ್ಲೂ ಪ್ರಸ್ತಾಪಗೊಂಡು ಕೋಲಾಹಲಕ್ಕೆ ಕಾರಣವಾಗಿದೆ.
 
 
ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ವಿಧಾನ ಸಭೆಯಲ್ಲಿ ಚರ್ಚೆಗೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಹಿನ್ನಲೆ ತೀವ್ರ ಗದ್ಧಲ ಉಂಟಾಯಿತು.
 
 
ಕೋಲಾಹಲದ ಹಿನ್ನಲೆಯಲ್ಲಿ ಸ್ಪೀಕರ್‌ ಕೋಳಿವಾಡ ಅವರು ಕಲಾಪವನ್ನು ಅರ್ಧಗಂಟೆಗಳ ಕಾಲ ಮುಂದೂಡಿದರು. ಜೆಡಿಎಸ್‌ ಕಲಾಪವನ್ನು ಹಾಳು ಮಾಡದೆ ಬಜೆಟ್‌ ಕುರಿತಾಗಿ ಚರ್ಚೆ ನಡೆಸಬೇಕು ಎಂದಿದೆ.
 
 
ಡೈರಿ ವಿಚಾರದಲ್ಲಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಸದನದಲ್ಲಿ ಬಿಜೆಪಿ ಪಕ್ಷದವರು ಧರಣಿ ಮುಂದುವರಿಸಿದ್ದಾರೆ. ಇದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ನಿನ್ನೆಯೂ ಇಡೀ ದಿನದ ಕಲಾಪ ಡೈರಿ ವಿಚಾರದಲ್ಲಿ ಮುಕ್ತಯವಾಗಿತ್ತು.

LEAVE A REPLY

Please enter your comment!
Please enter your name here