ಮುಂದುವರಿದ ಕಾಡಾನೆ ಅಟ್ಟಹಾಸ

0
456

 
ಕೊಡಗು ಪ್ರತಿನಿಧಿ ವರದಿ
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದೆ. ಜಿಲ್ಲೆಯ ಸೋಮವಾರಪೇಟೆಯಲ್ಲಿ ಮತ್ತೆ ಕಾಡಾನೆಗಳು ದಾಳಿ ನಡೆಸಿದೆ.
 
 
ಬೆಂಬಳೂರು ಗ್ರಾಮದಲ್ಲಿ ಕಾಡಾನೆ ತುಳಿತಕ್ಕೆ ಮತ್ತೊರ್ವ ಮಹಿಳೆ ಬಲಿಯಾಗಿದ್ದಾರೆ. ಕಾಡಾನೆ ದಾಳಿಯಿಂದ ಜಯಮ್ಮ(77) ದುರ್ಮರಣ ಹೊಂದಿದ್ದಾರೆ. ಜಯಮ್ಮ ಮನೆ ಬಳಿಯೇ ಆನೆ ದಾಳಿ ನಡೆಸಿದೆ. ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.
 
 
 
ಕಳೆದ 25 ದಿನಗಳಲ್ಲಿ ಕಾಡಾನೆ ದಾಳಿಯಿಂದ ಐವರು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈಗಾಗಲೇ ಅರಣ್ಯ ಇಲಾಖೆ 2 ನರಹಂತಕ ಆನೆಗಳನ್ನು ಸೆರೆಹಿಡಿದಿದ್ದಾರೆ. ಆದರೂ ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಇದರಿಂದ ಸೋಮವಾರಪೇಟೆ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿದೆ.
 
 
ಕಾಡಾನೆ ಹಿಂಡು ಪ್ರತ್ಯಕ್ಷ:
ಮೈಸೂರು ಜಿಲ್ಲೆಯ ಹುಣಸೂರು ಕಚುವಿನಹಳ್ಳಿ ಗ್ರಾಮದ ಬಳಿ 8 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಮರಿ ಆನೆ ಸೇರಿದಂತೆ 8 ಕಾಡಾನೆಗಳು ಪ್ರತ್ಯಕ್ಷವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here