ಮುಂಜಾಗ್ರತೆ ವಹಿಸುವಂತೆ ಮನವಿ

0
466

 
ಬೆಂಗಳೂರು ಪ್ರತಿನಿಧಿ ವರದಿ
ಪ್ರತಿಕೂಲ ಹವಮಾನದಿಂದಾಗಿ ತಾಪಮಾನವು ಹೆಚ್ಚಾಗಿದ್ದು ಆರೋಗ್ಯ ಸಂಬಂಧ ಸಮಸ್ಯೆಗಳು ಉಲಬ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತಾಕ್ರವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅವರು ಮನವಿ ಮಾಡಿದರು.
 
 
 
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಬಿಸಿಲಿಗೆ ಹೋಗುವ ಸಂಭವ ಬಂದಲ್ಲಿ ಕೊಡೆ ಬಳಸಬೇಕು ಎಂದ ಸಚಿವರು ಸಡಿಲವಾದ ತೆಳು ಹತ್ತಿ ಬಟ್ಟೆ ಧರಿಸುವುದು, ಉಪ್ಪು, ಸಕ್ಕರೆ ಮಿಶ್ರಿತ ನೀರು ಸೇವನೆ, ಹಣ್ಣಿನ ರಸ ಕುಡಿಯುವುದು ಸೇರಿದಂತೆ ಮಸಾಲೆ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸಬೇಕು ಎಂದು ತಿಳಿಸಿದರು.
 
 
 
ಬೇಸಿಗೆ ಕಾಲ ಮುಗಿಯುವರೆಗೆ ವೃದ್ದರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸವ ಜೊತೆಗೆ ಚರ್ಮಕೆಂಪು ಬಣ್ಣ ಕಂಡುಬಂದಲ್ಲಿ, ಬೆವರಿನ ಪ್ರಮಾಣ ಕಡಿಮೆಯಾದಲ್ಲಿ, ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಹಾಗೂ ದೀರ್ಘವಾದ ಉಸಿರಾಟ ಕಂಡು ಬಂದಲ್ಲಿ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
 
 
 
 
ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 2012 ಅಧಿಕಾರಿ, ನೌಕರರುಗಳಿಗೆ ಬಡ್ತಿ ನೀಡಲಾಗಿದ್ದು ಈ ಪೈಕಿ 803 ಕಿರಿಯ ಮಹಿಳಾ ಸಹಾಯಕಿಯರಿಗೆ ಹಾಗೂ 610 ಕಿರಿಯ ಪುರುಷ ಸಹಾಯಕರುಗಳಿಗೆ ಹಿರಿಯ ಸಹಾಯಕರುಗಳ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂದ ಸಚಿವರು ಉಳಿದ 1200 ವಿವಿಧ ಹಂತದ ಹುದ್ದೆಗಳಿಗೆ ಇದೇ ತಿಂಗಳ ಅಂತ್ಯದೊಳಗೆ ಮುಂಬಡ್ತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
 
 
 
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈವರೆಗೆ 672 ತಜ್ಞ ವೈದ್ಯರು 243 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ 75 ದಂತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಯು.ಟಿ. ಖಾದರ್ ಅವರು ಮೇ ತಿಂಗಳ ಅಂತ್ಯದೊಳಗೆ ಕರ್ನಾಟಕ ಲೋಕಸೇವಾ ಆಯೋಗವು ಕಾಯ್ದಿರಿಸಿದ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ತಿಳಿಸಿದರು.

LEAVE A REPLY

Please enter your comment!
Please enter your name here