ಮೀನು ಮಳೆಯ ರಹಸ್ಯ ಇಲ್ಲಿದೆ ನೋಡಿ…

0
961

ವಿನಾಯಕ್ ಭಟ್
ಈ ಸ್ಟೋರಿಯನ್ನು ನೀವು ಓದಲೇ ಬೇಕು…ಯಾಕಂದ್ರೆ….
ಮಳೆ ಎಂದ ಕೂಡಲೇ ನಮಗೆ ಮುಂಗಾರುಮಳೆ ಹಿಂಗಾರು ಮಳೆ ನೆನಪಿಗೆ ಬರುತ್ತೆ. ಬೇಸಿಗೇಲಿ ಮಳೆ ಬಂದ್ರೂ ಒಪ್ಕೋಬಹುದು, ಆದ್ರೆ ಮಳೆಯಲ್ಲಿ ನೀರ ಹನಿ ಜೊತೆ ಜೀವಿಗಳು ಬೀಳುತ್ತೆ ಅಂದ್ರೆ ನಂಬೋದೆಂಗೆ ಅನ್ನೋರೂ ಮನಸಲ್ಲಿ ಮಂಡಿಗೆ ತಿನ್ನಲೇಬೇಕು. ಯಾಕೆಂದ್ರೆ ಊಹಿಸಲಾಗದ ಘಟನೆ ಇದು.. ನೀರಿನ ಜೊತೆ ಜೀವಿಗಳು ಕೂಡ ಆಕಾಶದಿಂದ ಬಿದ್ರೆ ಹೇಗಿರಬಹುದು? ಆಗಸದಿಂದ ನೆಲಕ್ಕುರುಳೋ ಮೀನುಗಳ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಇಂತಹ ಅಪರೂಪಕ್ಕೆ ಆಂಧ್ರಪ್ರದೇಶ ಕಾರಣವಾಗ್ಬಿಟ್ಟಿದೆ. ಯಸ್ ಇದು ಮೀನಿನ ಮಳೆ..
fish-rain-in-thailand_vaarte1
ಎಲ್ಲರಲ್ಲಿ ಅಚ್ಚರಿ ಮೂಡಿಸ್ತು ಫಿಶ್ ರೇನ್..!
ಆಂಧ್ರಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾನುವಾರ ಮೀನಿನ ಮಳೆ ಸುರಿದು ಸಂಚಲನವನ್ನ ಸೃಷ್ಟಿ ಮಾಡಿದೆ. ಮೀನುಗಳು ಧಾರಾಕಾರವಾಗಿ ಬೀಳುತ್ತಿದ್ದಂತೆ ಜನ ಮೂಕವಿಸ್ಮಿತರಾಗಿದ್ದಾರೆ. ಅಚ್ಚರಿಯ ಕಣ್ಣುಗಳಿಂದ ನೋಡಿದ್ದಾರೆ. ತಮ್ಮ ಪಾಡಿಗೆ ತಾವು ಹೋಗ್ತಾ ಇದ್ರೆ ಇತ್ತ ಮೀನುಗಳು ಮೇಲಿಂದ ಬೀಳ್ತಾ ಇವೆ. ಕೆಲವರು ತಬ್ಬಿಬ್ಬಾಗಿ ನೋಡ್ತಾ ನಿಂತಿದ್ರೆ ಕೆಲವರು ಇದೆಲ್ಲಾ ನಿಜಾನೋ ಅಥವಾ ಭ್ರಮೆನೋ ಅನ್ನೋ ರೀತಿಲಿ ನೋಡಿದ್ದಾರೆ.
ಪಶ್ಚಿಮ ಗೋದಾವರಿ ಭಾಗದಲ್ಲಿ ಮೀನಿನ ಮಳೆ ಜೋರಾಗಿ ಸುರಿದಿದ್ದು ಜನ ಅಚ್ಚರಿಗೊಳಗಾಗಿದ್ದಾರೆ. ಅದೆಷ್ಟೋ ಕಣ್ಣುಗಳು ಈ ಅದ್ಭುತವನ್ನ ಸವಿದಿದೆ. ರಭಸದಿಂದ ಬಿದ್ದ ಮೀನುಗಳಲ್ಲಿ ಕೆಲವೊಂದು ವಿಲವಿಲನೆ ಒದ್ದಾಡ್ತಾ ಇದ್ರೆ ಇನ್ನೂ ಕೆಲವೊಂದು ಪ್ರಾಣ ಕಳೆದುಕೊಂಡು ಬಿದ್ದಿದೆ. ಫ್ರೆಶ್ ಆಗಿರೋ ಫಿಶ್ ಗಳನ್ನ ಆಕಾಶದಿಂದ ಯಾರು ಪುಶ್ ಮಾಡಿದ್ರೋ ಗೊತ್ತಿಲ್ಲ. ಆದ್ರೆ ಇವನ್ನೆಲ್ಲಾ ನೋಡಿ ಭ್ರಮಾಲೋಕದಿಂದ ಹೊರಬಂದವರು ಮೀನುಗಳನ್ನ ಬಾಚಿ ಬಾಚಿ ತುಂಬ್ಕೊಂಡಿದ್ದಾರೆ.
ಮೀನಿನ ಮಳೆ ಬೀಳೋಕೆ ಸಾಧ್ಯಾನಾ?
‘ಉಲ್ಕೆ ಮಳೆ’ ‘ಆಲಿಕಲ್ಲು ಮಳೆ’ ಗಳನ್ನ ನೋಡಿರೋ ನಮಗೆ ಮೀನಿನ ಮಳೆ ಹೊಸ ಸಂಗತಿಯೆನಿಸದೇ ಇರಲ್ಲ. ಆದ್ರೆ ನಿಜಕ್ಕೂ ಮೀನಿನ ಮಳೆ ಬೀಳೋಕೆ ಸಾಧ್ಯಾನಾ? ಅದೇಗೆ ಆಕಾಶದಿಂದ ಕೆಳಗೆ ಬೀಳೋಕೆ ಸಾದ್ಯ? ಅನ್ನೋ ಪ್ರಶ್ನೆಗಳೂ ಉದ್ಭವವಾಗಿದೆ. ಒಂದು ಮೂಲದ ಪ್ರಕಾರ ಈ ವಿಚಾರದ ಬಗ್ಗೆ ಬಹಳವೇ ವಿಮರ್ಷೆ ನಡೆದಿದೆ. ಅಧ್ಯಯನ ನಡೆಸಲಾಗಿದೆ. ಕೆಲ ಆಸಕ್ತಿಕರ ಸಂಗತಿಗಳು ಇದರಿಂದ ಹೊರಗೆ ಬಿದ್ದಿವೆ.
ಮೀನು ಮಳೆಯಂತೆ ಬೀಳೋಕೆ ಸಾಧ್ಯಾನೇ ಇಲ್ಲ, ಇವನ್ನೆಲ್ಲಾ ಒಪ್ಪಿಕೊಳ್ಳೋದು ಕಷ್ಟಸಾಧ್ಯ ಅಂತ ಒಂದು ವರ್ಗ ವಾದಿಸೋಕೆ ಶುರು ಮಾಡಿತ್ತು. ಆಕಾಶಕ್ಕೆ ಯಾರಾದ್ರೂ ಪಾರ್ಸಲ್ ತಗೊಂಡೋಗ್ತಾರಾ ಅಂತ ವ್ಯಂಗ್ಯವಾಡಿದೋರೂ ಇದ್ರು. ಆದ್ರೆ ವಿಜ್ಞಾನಿಗಳು ಅಲ್ಲಗಳೆಯೋಕೆ ತಯಾರಿರಲಿಲ್ಲ. ಮೀನಿನ ಮಳೆ ಬಗ್ಗೆ ಸಾಕಷ್ಟು ಅಧ್ಯಯನವನ್ನ ನಡೆಸಿದ್ರು. ಇದು ನಿಜಾನಾ? ನಿಜಾನೇ ಆಗಿದ್ರೆ ಹೇಗೆ ಸಾಧ್ಯ? ಅನ್ನೋ ಚಿಂತನೆಗಳು ನಡೆದವು. ಫಿಶ್ ರೇನ್ ಬಿದ್ದ ದೃಷ್ಟಾಂತಗಳನ್ನ ತುಲನೆ ಮಾಡಿ ನೋಡಲಾಯ್ತು.
 
fish-rain-in-thailand_vaarte2
‘ಮೀನಿನ ಮಳೆ’ ಇತಿಹಾಸ
1794ರಲ್ಲೇ ಅಪ್ಪಳಿಸಿತ್ತು ‘ಫಿಶ್ ರೇನ್’
ಪ್ರತೀ ಮಾನ್ಸೂನ್​​ನಲ್ಲೂ ಕಾಣಸಿಗ್ತಿತ್ತು ‘ಮೀನು ಮಳೆ’
1861ರಲ್ಲಿ ಸಿಂಗಾಪೂರದಲ್ಲಿ ‘ಮಹಾದರ್ಶನ’
ಕೆಲ ದೇಶದಲ್ಲಿದೆ ‘ಮೀನಿನ ಮಳೆ’ಯ ಉಲ್ಲೇಖ
ಭಾರತದಲ್ಲೂ ಹಲವೆಡೆ ಸಂಭವಿಸಿದೆ ಈ ಅಚ್ಚರಿ!
ನಿಮಗಿದು ಅಚ್ಚರಿ ಎನಿಸ್ಬೋದು. ಆದ್ರೆ ರೋಮನ್ ಪರಿಸರ ತಜ್ಞ ‘ಪ್ಲಿನಿ ದಿ ಎಲ್ಡರ್’ ಎಂಬಾತ 1794 ರಲ್ಲೇ ಮೀನಿನ ಮಳೆ ಬಂದಿದ್ದನ್ನು ದಾಖಲಿಸಿದ್ದ. ಫ್ರೆಂಚ್ ಸಿಟಿಯ ಲಾಲೈನ್ ಬಳಿ ಮೀನಿನ ಮಳೆಯಾಗಿದ್ದಕ್ಕೆ ಪರಿಸರ ತಜ್ಞರಿಗೆ ಸೈನಿಕರು ಸಾಕ್ಷಿಯಾಗಿದ್ದರು. ಅಲ್ಲಿ ಪ್ರತಿ ಮಾನ್ಸೂನಲ್ಲಿ ಮೀನಿನ ಮಳೆ ಆಗುತಿತ್ತು . ಮೀನು ಹಾಗೂ ಜಲಚರಗಳನ್ನು ಸುತ್ತಿ ಎತ್ತಿಕೊಂಡ ಗಾಳಿ ತಕ್ಷಣವೇ ಅವುಗಳನ್ನು ಮೋಡದ ಜೊತೆ ಸುರಿಸಿದ್ದರಿಂದ ಕೆಲ ಪ್ರಾಣಿಗಳು ಜೀವಂತವಾಗಿ ನೆಲಕ್ಕೆ ಬಿದ್ದು ಚೇತಿರಿಸಿಕೊಂಡ ಉದಹಾರಣೆಗಳು ಇದೆ. ಆದರೇ ಕೆಲವೊಮ್ಮೆ ತೀವ್ರವಾದ ಗಾಳಿಯ ಹೊಡೆತಕ್ಕೆ ಅವು ಸಾವನ್ನಪ್ಪಿದ್ದಿದೆ.
1861 ರಲ್ಲಿ ಸಿಂಗಾಪೂರದಲ್ಲಿ ಮೀನಿನ ಮಳೆಯ ವರದಿಯಾಗಿತ್ತು . ಇನ್ನು 1983ರಲ್ಲಿ ಡೆರ್ನಿಯಾರ್ ಕಂಬಾಟ್ ನಲ್ಲಿ ಮೀನಿನ ಮಳೆಯಾಗಿತ್ತು. 1903ರಲ್ಲಿ ಕೆನಡಾ, 1947ರಲ್ಲಿ ಮಾಕ್ಸವಿಲ್ಲೆ, 2010ರಲ್ಲಿ ಆಸ್ಟ್ರೇಲಿಯಾ, 2014ರಲ್ಲಿ ಶ್ರೀಲಂಕಾದಲ್ಲಿ ಮೀನಿನ ಮಳೆ ಸುರಿದ ದಾಖಲೆಗಳು ಸಿಕ್ಕಿವೆ. ಅಷ್ಟೇ ಯಾಕೆ ನಮ್ಮ ಭಾರತದಲ್ಲಿಯೂ ಈ ಅಚ್ಚರಿ ಮಳೆಯ ದರ್ಶನವಾಗಿದೆ. 2000ದಲ್ಲಿ ಕೇರಳ, 2013ರಲ್ಲಿ ತಮಿಳುನಾಡು, 2015ರಲ್ಲಿ ನಂದಿಗಾಮ, 2015ರ ಆಗಸ್ಟ್ ನಲ್ಲಿ ಗುಂಟೂರ್ ಭಾಗಗಳಲ್ಲಿ ಮೀನಿನ ಮಳೆಯಾಗಿದೆ.
ಮೀನಿನ ಮಳೆ ರಹಸ್ಯವೇನು ಗೊತ್ತಾ..?
ಸಮುದ್ರದ ಸುತ್ತಮುತ್ತ ಬೀಸುವ ಸುಂಟರಗಾಳಿ ಸಮುದ್ರದ ತೇವಾಂಶವನ್ನು ತನ್ನ ಜೊತೆ ಕೊಂಡೊಯ್ಯುವಾಗ ಅದರ ಜೊತೆಗೆ ಜಲಚರಗಳು ಕೂಡ ಹೋಗುತ್ತೆ. ಬಳಿಕ ಅದು ಆಕಾಶದಲ್ಲಿ ತೇವಾಂಶವನ್ನ ಹೀರಿಕೊಂಡು ಆದ್ಮೇಲೆ ಅದರಲ್ಲಿನ ಜಲಚರಗಳು ಕೆಳಗೆ ಬೀಳುತ್ತೆ. ಮಾನ್ಸೂನು ಮೊದಲ ಮಳೆ ಸಂದರ್ಭದಲ್ಲಿ ಹಲವೆಡೆ ಮೀನಿನ ಮಳೆಯಾಗುತ್ತೆ. ಸುಂಟರಗಾಳಿಯು ಸಮುದ್ರದಿಂದ ತೇವಾಂಶದ ಜೊತೆ ಎತ್ತಿಕೊಂಡ ಮೀನನ್ನು ಕಿಲೋಮೀಟರ್ಗಳಷ್ಟು ದೂರದ ವರೆಗೂ ಸುರಿಸಬಲ್ಲದು. ಮೂಲಗಳ ಪ್ರಕಾರ ವರ್ಷದಲ್ಲಿಯೇ 40 ಸಲ ಮೀನಿನ ಮಳೆ ಬೀಳೋ ಸಾದ್ಯತೆಗಳು ಇರುತ್ವೆ. ಪ್ರಕೃತಿಯ ಕೆಲ ಸಂಗತಿಗಳನ್ನ ನಮಗೆ ನಂಬೋಕಾಗಲ್ಲ. ನಂಬಿದ್ರೂನು ಅಚ್ಚರಿ, ಗೊಂದಲಗಳು ತಪ್ಪಿದ್ದಲ್ಲ. ಒಟ್ಟಾರೆ ಮೀನಿನ ಮಳೆ ನಿಸರ್ಗದ ಕೌತುಕಗಳ ಪಾಲಿಗೆ ಮತ್ತೊಂದು ಸೇರ್ಪಡೆ ಅಂತಾನೇ ಹೇಳಬೇಕು.
ಸುಂಟರಗಾಳಿ ಸಮುದ್ರದಿಂದ ಕೊಂಡೊಯ್ಯುವ ತೇವಾಂಶದ ಜೊತೆಗೆ ಹೋಗುವ ಮೀನು ತದನಂತರ ನೆಲಕ್ಕೆ ಬೀಳುತ್ತೆ ಅಂತಾದರೇ ಮೀನಿನ ಜೊತೆ ಇರೋ ಕಪ್ಪೆ,ಹುಳಗಳು ಯಾಕೆ ಬೀಳೋದಿಲ್ಲ. ಅವು ಕೂಡ ಸಮುದ್ರದಲ್ಲಿ ಇರುತ್ತದಲ್ಲ ಎಂಬುದು ಜನಸಾಮಾನ್ಯರ ಪ್ರಶ್ನೆ. ಆದ್ರೆ ಇದಕ್ಕೆ ವಿಜ್ಞಾನ ಕೂಢ ಪೂರ್ತಿ ಪ್ರಮಾಣದಲ್ಲಿ ಉತ್ತರಿಸೋದು ಸಾಧ್ಯವಾಗಿಲ್ಲ.
ವಿನಾಯಕ್ ಭಟ್
[email protected]

LEAVE A REPLY

Please enter your comment!
Please enter your name here