ಮೀನುಗಾರರ ರಕ್ಷಣೆ

0
275

ರಾಷ್ಟ್ರೀಯ ಪ್ರತಿನಿಧಿ ವರದಿ
ಸಮುದ್ರದಲ್ಲಿ ಮುಳುಗಡೆಯಾಗುತ್ತಿದ್ದ ಎರಡು ದೋಣಿಯಲ್ಲಿದ್ದ ಮೀನುಗಾರರನ್ನು ಮುಂಬೈ ಕರಾವಳಿ ತೀರದಿಂದ 70 ನಾಟಿಕಲ್ ಮೈಲು ದೂರದಲ್ಲಿ ರಕ್ಷಿಸಲಾಗಿದೆ.
 
 
ಕಳೆದ ರಾತ್ರಿ ಹಿಮಸಾಗರ್ ಮತ್ತು ಕೃಷ್ಣಸಾಗರ ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
 
ಭಾರತೀಯ ನೌಕಾದಳದ ಹಡಗು ಗಂಗಾ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆ ಹಡಗು ಅಗ್ರಿಮ್ ಜತೆ ಎ ಸೀ ಕಿಂಗ್ 42ಬಿ ಹೆಲಿಕಾಫ್ಟರ್ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.
 
ನಿನ್ನೆ ಸಂಜೆ ಹಿಮಸಾಗರ್ ಮತ್ತು ಕೃಷ್ಣಸಾಗರ್ ದೋಣಿಯಲ್ಲಿ 15 ಮಂದಿ ಮೀನುಗಾರರು ಮೀನು ಹಿಡಿಯಲು ತೆರಳಿದ್ದು ರಾತ್ರಿಯಾದರೂ ಬಾರದೆ ಇದ್ದಿದ್ದರಿಂದ ಮೀನುಗಾರರನೊಬ್ಬ ಕರಾವಳಿ ರಕ್ಷಣಾ ಪಡೆಗೆ ವಿಷಯ ಮುಟ್ಟಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here