ಮೀನುಗಾರರಿಗೆ ಐಸ್ ಬಾಕ್ಸ್ ವಿತರಣೆ

0
162

 
ಉಡುಪಿ ಪ್ರತಿನಿಧಿ ವರದಿ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಡುಪಿ ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಮೀನುಗಾರಿಕಾ ಇಲಾಖೆಯ ಅನುದಾನದ ನೆರವಿನೊಂದಿಗೆ ನಿರ್ಮಾಣಗೊಂಡಿರುವ ನೂತನ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್ಗೆ ಹಸ್ತಂತರಿಸಲಾಗಿದೆ.
 
 
ಮೀನು ಮಾರುಕಟ್ಟೆ ಕಟ್ಟಡದ ಫಲಾನುಭವಿಗಳಿಗೆ ಮಾರಾಟ ಮಾಡುವ ಮೀನುಗಳನ್ನು ಸಂರಕ್ಷಿಸಿಡಲು ಅನುಕೂಲವಾಗುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರ ನಿವೇದಿತ್ ಆಳ್ವ ಇತ್ತೀಚೆಗೆ ಫಲಾನುಭವಿಗಳಿಗೆ ಉಚಿತವಾಗಿ ಐಸ್ ಬಾಕ್ಸ್ ಗಳನ್ನು ವಿತರಿಸಿದರು.
 
 
ಈ ಐಸ್ ಬಾಕ್ಸ್ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವಾರಿಜಾ ಪೂಜಾರ್ತಿ, ಉಪಾಧ್ಯಕ್ಷರಾದ ದೇವದಾಸ್ ನಾಯಕ್, ಸದಸ್ಯರುಗಳಾದ ರಾಮರಾಯ ಪಾಟ್ಕಾರ್, ಹಸನಬ್ಬ ಶೇಕ್ ಗೋಪಾಲಕೃಷ್ಣ ಪ್ರಭು, ರಮೇಶ್ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರದೀಪ್ ಡಿ’ಸೋಜಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಿಂಗಸೆಟ್ಟಿ, ವಲಯಾಧಿಕಾರಿಗಳಾದ ಹರಿಹರ ವಿ ಹರಿಕಾಂತ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಪ್ರಕಾಶ್ ಕೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here