ಮಿಸ್ತ್ರಿ-ಮೇಸ್ತ್ರಿ-ಮಿಸರಿ

0
464

ಮಸೂರ ಅಂಕಣ: ಆರ್ ಎಂ ಶರ್ಮ
ಕನ್ನಡದ ಗಾದೆ-“ಎಲ್ಲರ ಮನೆಯ ದೋಸೆಯೂ ತೂತೇ!”
ತಪ್ಪು ಮಾಡದವರು ಎಲ್ಲಿದ್ದಾರೆ-ತಪ್ಪೇ ಮಾಡದವರು ಎಲ್ಲಿದ್ದಾರೆ?
ಟಾಟಾ ಪ್ರಸಿದ್ಧ ಉದ್ಯೋಗ ಸಂಸ್ಥೆ-ಇದರ ಪರಮೋಚ್ಚ ಅಧಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು.
ಹೇಳಿ ಕೇಳಿ ಟಾಟಾ ಸಂಸ್ಥೆ ಉತ್ತೋಮೋತ್ತರ ಶೋಧನೆ ನಡೆಯಿಸಿ ಕೆಲಸಕ್ಕೆ ಮಿಸ್ತ್ರಿ ಯವರನ್ನು ನೇಮಿಸಿಕೊಂಡು ೪ ವಷ೯ಗಳಕಾಲ ಅವರ ಸಾರಥ್ಯದಲ್ಲಿ ವ್ಯವಹಾರಗಳನ್ನು ನಡೆಯಿಸಿತು.
ನಾಲ್ಕು ಆಯಿತು ಸಾಕು ಎಂತ ಹೇಳಿದರು.
ಶೋಧನೆ-ಸಂಶೋಧನೆ-ಪೋಷಣೆಗೆ ಆಗಲಿಲ್ಲ.
ಶೋಷಣೆಯೇ ಪ್ರಾಪ್ತವಾಯಿತು.
ಇದು ಯೋಗವೇ-ಪ್ರಯೋಗವೇ ಎಂದರೆ-“ಅಯೋಗ್ಯ”-ಇದೇ ಉತ್ತರ.
ನಾಲ್ಕು ವಷ೯ದ ಆಡಳಿತ ಬೇರುಬಿಡಲಿಲ್ಲ-ಬಿಳಿಲು ಬೆಳೆಯಿತು-ಬೆವರಿಳಿಸಿತು.
ದೂರದ ಬೆಟ್ಟ ನೋಡಲು ಚನ್ನ.
ಸಾನ್ನಿಧ್ಯ-ಸಾಮಿಪ್ಯ-ಛಿನ್ನದ ಅನ್ನ.
ಸಂಸ್ಥಾಪಕರ ಅಳಲು ಮಿಸ್ತ್ರಿ ಸಂಸ್ಥೆಯ ಕಟ್ಟುಪಾಡುಗಳನ್ನು ಪಾಲಿಸಲಿಲ್ಲ,ನೀತಿಗಳಿಗೆ ತಿಲಾಂಜಲಿ ನೀಡಿದರು ಎಂಬ ಆರೋಪ.
ಇದೇನು ಸ್ವರೂಪವೇ-ವಿರೂಪವೇ ಎಂದರೆ ಟಾಟಾ ಸಂಸ್ಥೆಯಮೇಲೆ ಹರಿಹಾಯ್ದು ನ್ಯಾಯಾಂಗದ ಸಹಾಯಕ್ಕೆ ಧಾವಿಸಿದರು ಮಿಸ್ತ್ರಿ.
ಮೇಧವಿ ಟಾಟಾ ಯಾಜಮಾನ್ಯ ಪ್ರತಿಯಾಗಿ ತಾನೂ ನ್ಯಾಯದ ಬೆಂಬಲಕ್ಕೆ ಧಾವಿಸಿ ತಿಪ್ಪೆ ಸಾರಿಸಿತು.
ಟಾಟಾ ಇತಿಹಾಸದಲ್ಲಿಯೇ-ಪೇಚಿನ-ಹೇಸಿಗೆಯ ಈ ಬೆಳವಣಿಗೆ ಕಾಪೋ೯ರೇಟ್ ಜಗತ್ತಿನಲ್ಲಿ ಪ್ರಕ್ಷುಭದೆತೆಯನ್ನು ತಂದೊಡ್ಡಿತು.
ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ-ವ್ಯಾಪಾರ ಜಗತ್ತಿನಲ್ಲಿ-ನಡುಕ-ಭಯ-ಮುಜುಗರ-ಭಾರಿಹೊಡೆತ ಸಂಭಂದಪಟ್ಟ ವಲಯಗಳಲ್ಲಿ-ವರಿಷ್ಟರಿಗೆಲ್ಲ.
ಈಗಿರುವ ಉಪಾಯ-
“ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವಷ೯ಆಯುಸ್ಸು”-ಎಂಬ ಪ್ರಸಿದ್ಧಕನ್ನಡ ಗಾದೆಯ ಆಂತಯ೯-ಐಶ್ವಯ೯.
ಇದನ್ನೇ ಬಲ್ಲವರು-ಪೇಟೆಬಲ್ಲ ಪಂಡಿತರ-ಚಾಣಕ್ಯರ-ಚಿಂತನ ಮಂಥನದ ಸಾಂದ್ರ ಅಂಬೋಣ-
“ಆಶ್ಚಯ೯ವದ್ವದತಿ ಕಸ್ಚಿದೇನಂ————-“.
ಈಗ ಮಿಸ್ತ್ರಿಯವರ ಸಿದ್ಧಾಂತ ರಘುವಂಶಮ್ ಮಹಾಕಾವ್ಯದಲ್ಲಿ ಮಹಾಕವಿ ಕಾಳಿದಾಸನ ಉದ್ಗಾರ-
“ನದೀವ ಉಭಯಕೂಲಭಾಕ್”-
ಎಂದರೆ, ಹರಿಯುವ ನದಿಯ ಇಕ್ಕೆಲದಲ್ಲಿ ಬೆಳೆದಿರುವ ಹುಲ್ಲು-ಒಂದು ದಡದಿಂದ ನೋಡಿದಾಗ ಹಸಿರು ಹಸಿರಾಗಿ ಕಾಣಿಸುತ್ತದೆ-ಸಮೀಪಕ್ಕೆ ಹೋದಾಗ ತದ್ವಿರುದ್ಧವಾಗಿರುತ್ತದೆ.
ಇಲ್ಲೇ ಭ್ರಮೆ-ನಂತತ ಭ್ರಮ ನಿರಸನ.
ಬಯಸಿಬಂದದ್ದು ಬೇಸರಿಕೆ- ವಾಕರಿಕೆ-ತೂಕಡಿಕೆ ತಂದಿತು.
ಮೋಕ್ಷಕ್ಕೆ ಬೇರೆದಾರಿಹುಡುಕಲು ಪ್ರಚೋದಿಸಿತು ಇದೇ ಟಾಟಾ ಸತ್ಯ ಗಾಥ.
ಸವ೯ಂ ಗತಂ ಗತಂ.
ಇಂತಹ ಜೀವನ ಸತ್ಯಗಳನ್ನು ನೋಡಿಯೇ ಸುಭಾಷಿತಕಾರ ಹೇಳಿದ ಮಾತು-
“ಜೀವೇ ವಾರಿ ತರಂಗ ಬುದ್ಬುದಸಮೇ ಸೌಖ್ಯಂ ಕುತಃ ಪ್ರಾಣಿನಾಂ?”
ಶ್ರೀ ಶಂಕರ ಭಗವತ್ಪಾದರೂ ಹೇಳಿದರು-
“ನಹಿ ನಹಿ ರಕ್ಷತಿ ದುಕ್ರಿಂಕರಣೆ”-ಎಂತ.
ಒಟ್ಟಿನಲ್ಲಿ ಆಧ್ಯಾತ್ಮ ಇರಲಿ-ವ್ಯವಹಾರವಿರಲಿ-ಸತ್ಯಕ್ಕೆ ಚ್ಯುತಿ ಇಲ್ಲ.
ಸತ್ಯವೇ ನಿತ್ಯ-ಪಥ್ಯ.
ಖ್ಯಾತಿ-ಪ್ರಖ್ಯಾತಿ-ಪ್ರಕೃತಿ ಅನುಸಂಧಾನದಲ್ಲಿಯೇ ಪಯ೯ವಸಾನ.
ಟಾಟಾ ಖ್ಯಾತಿ ಗೆ “ಟಾಟಾ.”
ಇನ್ನು ಬರೇ ಪರದಾಟ-ತಿಕ್ಕಾಟ.
ಭಾರತದ ಉತ್ತೋಮೋತ್ತಮ ಸಂಸ್ಥೆ-“ಟಾಟಾ ಸಮೂಹ”-ಈಗ ಸನ್ನಿ ಹಿಡಿಸಿದ ಸಂದೋಹ.
ಹಾಗಾಗಿ ಇನ್ನು ಸಂದೇಹವೇ ದೇಹ.
ದೇಹದೊಳಗೆ ಆತ್ಮ-ಪ್ರವೇಶಿಸಿದಾಗ-ಪ್ರಶ್ನಿಸಿದಾಗ ಸತ್ಯದಶ೯ನ.
ಆಗ ವ್ಯಥ೯ದ ಯಾಥಾಥ್ಯ೯.
ಶ್ರೀ ಮಿಸ್ತ್ರಿ ಮೇಸ್ತ್ರಿಯಾಗಲು ಹೋಗಿ “ಮಿಸರಿ” ಆದರು.
ಮಿಸರಿ ಯಾರಿಗೆ-ಏಕೆ ಇದಕ್ಕೇ ಬೇಕು ಉತ್ತರ.
ನಂತರ ಎತ್ತರ-ತತ್ತರ-ತತ್ಪರ ಎಲ್ಲಾ ಸ್ಪಷ್ಟ.
ಇನ್ನಿಲ್ಲ ಕಷ್ಟ-ಕ್ಲೇಷ.
ಅಲ್ಲಿಯವರೆಗೆ ಸಶೇಷ-ಇದೇ ಈಗಿನ ಸಂದೇಶವಪ್ಪ.
ಶ್ರೀ ಮಿಸ್ತ್ರಿ ಪಾಠ ಕಲಿತರೇ-ಕಲಿಸಿದರೇ-ಗಳಿಸಿದರೇ-ಗುಡಿಸಿದರೇ ಎಂದರೆ ಬರುವದಿನಗಳಲ್ಲಿ ಬಯಲಾಗುತ್ತದೆ ನಿಜ.
ಟಾಟಾ ಸಂಸ್ಥೆ ಕಾಪೋ೯ರೇಟ್ ವಲಯದಲ್ಲಿ-ಮೇರು-ಬೇರು-ತೇರು.
ಒಂದಥ೯ದಲ್ಲಿ ದೇವೇಂದ್ರನ ಆನೆ-“ಐರಾವತ”-ಇದ್ದಂತೆ.
ರಾಜಗಾಂಭೀಯ೯-ರಾಜಮಯಾ೯ದೆ.
ಅದಕ್ಕೆ ಎಚ್ಚರಿಕೆಯಿಂದ ಅಡಿ ಇಡುತ್ತದೆ.
ಆದರೂ ಜಾರದೇ ಇರದು.
ಆಗಲೇ ಉದ್ಗಾರ- “ಐರಾವತವೂ ಅಡಿ ಜಾರುತ್ತದೇ” ಎಂತ.
ಇದರ ತಾತ್ಪಯ೯-ಹೆಜ್ಜೆ ತಪ್ಪುತ್ತದೆ-ಅಥಾ೯ತ್ ನಡೆಯಲ್ಲಿ ವ್ಯತ್ಯಯ-ಇದೇ ಪ್ರತ್ಯವಾಯ.
ಆಗಲೇ ಪರಿಹಾರ ಅನಿವಾಯ೯.
ಇದೇ ಈಗ ಮಿಸ್ತ್ರಿ-ಮಿಸರಿ ದ್ವಂದ್ವ.
ದ್ವಂದ್ವ ಎಂದ ಮೇಲೆ ಯುದ್ಧ.
ಯುದ್ಧ ಎಂದಮೇಲೆ ಸೋಲು -ಗೆಲವು.
ಆಗೆಲ್ಲ ಚೆಲುವು-ಚಿನ್ನ-ಚನ್ನ.
ಈ ಯುದ್ಧಕ್ಕೆ ಆಶಾಪಾಶ ಶತೈಃ-ನೂರುಮುಖ-ನೂರುಜನ-ನೂರು ಮನ.
ಆದರೆ ಸತ್ಯಕೆ ಒಂದೇ ಮುಖ-ಜನ-ಮನ- ಅದೇ-“ಸತ್ಯಂ ಶಿವಂ ಸುಂದರಂ”-ಪರಾತ್ಪರ-ಪರಮೇಶ್ವರ.
ಕಾಯೋಣ ಸತ್ಯಕ್ಕೆ-ಜಯಕ್ಕೆ.
ನಂತರ-ವಿಜಯಿಯ ಗುಣಗಾನ-ಅವಗುಂಠದ ನಿತ್ರಾಣ.
ನಂತರ-ಮಾನ-ಮೇನಾ-ಸಮ್ಮಾನ ಇವೆಲ್ಲದರ ದಿಬ್ಬಣ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here