ಮಿರ್ಜಾಗೆ 40ನೇ ಡಬ್ಲ್ಯೂಟಿಎ ಪ್ರಶಸ್ತಿ

0
340

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತದ ಮೂಗುತ್ತಿ ಸುಂದರಿ ಸಾನಿಯಾ ಮಿರ್ಜಾ ಅವರು 40ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಸಿದ್ದಾರೆ. ಜೆಕ್ ಗಣರಾಜ್ಯದ ಬಾರ್ಬರಾ ಸ್ಟ್ರೈಕೋವಾ ಜತೆ ಸೇರಿ ಸಾನಿಯಾ ಮಿರ್ಜಾ ಟೊರೇ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಫೈನಲ್ ನಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
 
 
 
ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಲಿಯಾಂಗ್, ಜಾವೋ ಯಂಗ್ ಜೋಡಿಯನ್ನು 6-1,6-1 ಸೆಟ್ ಗಳಿಂದ ಸಾನಿಯಾ-ಸ್ಟ್ರೈಕೋವಾ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
 
 
ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್ ಜತೆ ಸೇರಿ ಹಲವು ಚಾಂಪಿಯನ್ ಪಟ್ಟ ಅಲಂಕರಿಸಿ ವಿಶ್ವ ಅಗ್ರ ಶ್ರೇಯಾಂಕಿತ ಜೋಡಿ ಎಂದು ಖ್ಯಾತಿ ಗಳಿಸಿದ್ದ ಸಾನಿಯಾ-ಮಾರ್ಟಿನಾ ಹಿಂಗೀಸ್ ಇತ್ತೀಚೆಗಷ್ಟೇ ಹಿಂಗೀಸ್ ರನ್ನು ತೊರೆದು ಬಾರ್ಬರಾ ರನ್ನು ಸೇರಿದ್ದು, ಈ ಜೋಡಿಗೆ ಇದು ಎರಡನೇ ಪ್ರಶಸ್ತಿಯಾಗಿದೆ.

LEAVE A REPLY

Please enter your comment!
Please enter your name here