ಮಾಹಿತಿ ಕಾರ್ಯಗಾರ

0
245

 
ಉಡುಪಿ ಪ್ರತಿನಿಧಿ ವರದಿ
ಬಿ.ಎಸ್.ಕೆ ಗೇರು ಬೀಜ ಕಾರ್ಖಾನೆ ಮಂಜರ್ ಪಲ್ಕೆ, ಕಾರ್ಕಳ ತಾಲೂಕು ಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ, ಎನ್.ಪಿ.ಸಿ.ಡಿ.ಸಿ.ಎಸ್ ಘಟಕ ಮತ್ತು ಬಿ.ಎಸ್.ಕೆ ಗೇರು ಬೀಜ ಕಾರ್ಖಾನೆ ಇವರ ಸಹಯೋಗದಲ್ಲಿ ಕ್ಷಯಾ ರೋಗದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಉಚಿತ ಮಧು ಮೇಹ ಹಾಗೂ ರಕ್ತದೊತ್ತಡದ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
 
 
ಈ ಕಾರ್ಯಕ್ರಮವನ್ನು ಶ್ರೀ ಗೋಪಾಲ್ ಶೆಟ್ಟಿ ಕಿರಿಯ ಆರೋಗ್ಯ ಸಹಾಯಕ ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಇವರು ಸ್ವಾಗತಿಸಿ, ನಿರೂಪಣೆ ಮಾಡಿದರು. ಡಾ. ಸತೀಶ್ ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಇವರು ಕ್ಷಯಾ ರೋಗದ ಗುಣ ಲಕ್ಷಣಗಳು ಮತ್ತು ಡಾಟ್ಸ್ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ನೀಡಿದರು.
 
 
ಎನ್.ಪಿ.ಸಿ.ಡಿ.ಸಿ.ಎಸ್ ಘಟಕದ ವೈದ್ಯಾಧಿಕಾರಿಗಳಾದ ಡಾ. ಶೈಲೇಶ್ ಕುಮಾರ್ ರವರು ಮಧು ಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
 
 
ಈ ಸಂದರ್ಭದಲ್ಲಿ ಬಿ.ಎಸ್.ಕೆ ಗೇರು ಬೀಜ ಕಾರ್ಖಾನೆಯ ಮಾಲಿಕರಾದ ಬೋಳ ದಾಮೋದರ್ ಕಾಮತ್, ಬೋಳ ರಾಜೇಶ್ ಕಾಮತ್ ಮತ್ತು ಕಾರ್ಕಳ ತಾಲೂಕು ಕ್ಷಯಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚರಾಕರಾದ ಶಿವಕುಮಾರ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಇಲ್ಲಿಯ ನಿಬ್ಬಂಧಿ ವರ್ಗದವರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 177 ಕಾರ್ಮಿಕರಿಗೆ ಉಚಿತವಾಗಿ ಮಧುಮೇಹ ಮತ್ತು ರಕ್ತದೊತ್ತಡದ ಪರೀಕ್ಷೆಯನ್ನು ನಡೆಸಲಾಯಿತು.

LEAVE A REPLY

Please enter your comment!
Please enter your name here