ಮಾಹಿತಿ ಕಾರ್ಯಕ್ರಮ

0
224

 
ಉಡುಪಿ ಪ್ರತಿನಿಧಿ ವರದಿ
‘ಏಕೀಕೃತ ಮಾರುಕಟ್ಟೆಯಿಂದ ರೈತರು ಸ್ವಾವಲಂಬಿಗಳಾಗಲು ಅವಕಾಶ’
ಕರ್ನಾಟಕ ಸರ್ಕಾರ ಕೃಷಿ ಮಾರಾಟ ಇಲಾಖೆ ಮೂಲಕ ಕರ್ನಾಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು ಇವರ ನಿರ್ದೇಶನದ ಮೇರಗೆ ಆನ್ಲೈನ್ ಮಾರಾಟ ವೇದಿಕೆ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಕಾರ್ಯಾಗಾರವನ್ನು ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ರಾಜ್ಯಾದ್ಯಾಂತ ಕೃಷಿ ಮಾರುಕಟ್ಟೆ ಸಮಿತಿ ಅನುಷ್ಠಾನಗೊಳಿಸುತ್ತಿದೆ ಎಂದು ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರಾದ ಭಾಸ್ಕರ್ ಶೆಟ್ಟಿ ಹೇಳಿದರು.
 
udupi APMC
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಎಪಿಎಂಸಿ ಸಹಯೋಗದೊಂದಿಗೆ ಕಡೆಕಾರ್ ಗ್ರಾಮಪಂಚಾಯಿತಿಯಲ್ಲಿ ಆಯೋಜಿಸಲಾದ ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕ ಕೃಷಿ ಮಾರಾಟ ನೀತಿ 2013 ರನ್ವಯ ಹೊಸ ಚಿಂತನೆಗಳೊಂದಿಗೆ ಆನ್ಲೈನ್ ವೇದಿಕೆ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ವಿದ್ಯುನ್ಮಾನ ವ್ಯವಸ್ಥೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
 
 
 
ಕೇಂದ್ರ ಸರ್ಕಾರದ ಮೂಲಭೂತ ಅಭಿವೃದ್ಧಿ ಯೋಜನೆ, ಭಾರತ ಸರ್ಕಾರ ಮಾರಾಟ ತಂತ್ರಜ್ಞಾನ ಯೋಜನೆ, ರಾಷ್ಟ್ರೀಯ ಕೃಷಿ ಮಾರಾಟ ಯೋಜನೆ, ಗ್ರಾಮೀಣ ಭಂಡಾರ ಯೋಜನೆ, ತೋಟಗಾರಿಕಾ ಮಿಶನ್ ಯೋಜನೆಗಳು ರಾಜ್ಯ ಸರ್ಕಾರದ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಈ ಮೂಲಕ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಗೆ ರಚನಾತ್ಮಕ ಕಾರ್ಯ ಯೋಜನೆಯಾಗಿದೆ. ಆದರೆ ಸ್ಥಳೀಯವಾಗಿ ಕೃಷಿಕರು ಸಂಘಟಿತರಾಗಿ ಯೋಜನೆಯ ಪ್ರಯೋಜನೆ ಪಡೆದು ಕೊಳ್ಳಬೇಕಾಗಿದೆ. ರೈತ ಬೆಳೆದ ಉತ್ಪನ್ನಗಳಿಗೆ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದ ಪಾರದರ್ಶಕವಾದ ಮೌಲ್ಯಾಧಾರಿತ ಮಾರುಕಟ್ಟೆ ಒದಗಲಿದೆ. ಇದರಿಂದ ರೈತರಿಗೆ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.
 
 
 
ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾನಾಥ ಕೋಟ್ಯಾನ್ ರೈತರು ಆನ್ ಲೈನ್ ಮಾರುಕಟ್ಟೆಯ ಪ್ರಯೋಜನ ಪಡೆಯಬೇಕು ಎಂದರು. ಪಂಚಾಯತ್ ಕೃಷಿಕರ ಪ್ರತಿನಿಧಿಯಾಗಿ ದಯಾನಂದ ಅಂಚನ್ ಕುತ್ಪಾಡಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜೀನತ್ ಉನ್ನೀಸಾ ರವರು ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ಪ್ರದೀಪ್ ಚಂದ್ರ ಕೆ, ರಾಘವೇಂದ್ರ ಕುತ್ಪಾಡಿ, ಸಬಿತಾ ಬಾಲಕೃಷ್ಣ ಪೂಜಾರಿ, ವಿನಯ ಪ್ರಕಾಶ್, ರೇಣುಕಾ ಹಾಗೂ ಪ್ರಗತಿಪರ ಕೃಷಿಕರಾದ ದೇಜು ಪೂಜಾರಿ, ಉದಯ ಪೂಜಾರಿ, ಭೋಜ ಪೂಜಾರಿ, ಗಣೇಶ ಪೂಜಾರಿ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here