ಮಾಹಿತಿ ಕಾರ್ಯಕ್ರಮ

0
354

 
ಮಂಗಳೂರು ಪ್ರತಿನಿಧಿ ವರದಿ
‘ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ-2016’ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಂತ.ಅಲೋಶಿಯಸ್ ಪದವಿ ಪೂರ್ವ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು ಇದರ ಕುರಿತು ಮಾಹಿತಿ ಕಾರ್ಯಕ್ರಮವನ್ನು ಚೈಲ್ಡ್ ಲೈನ್ ಮಂಗಳೂರು-1098,ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜು ಮತ್ತು ರೇಡಿಯೋ ಸಾರಂಗ್ 107.8 ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
 
 
 
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ.ಗು.ಮೇಲ್ವಿನ್ ಮೆಂಡೋನ್ಸಾ ಇವರು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುತ್ತ ಇಂತಹ ಮಾಹಿತಿ ಕಾರ್ಯಕ್ರಮಗಳು ಹದಿಹರಯದ ಮಕ್ಕಳಿಗೆ ಹಮ್ಮಿಕೊಳ್ಳುತ್ತಿರುವುದ ತುಂಬಾ ಸೂಕ್ತವಾಗಿದೆ ಯಾಕೆಂದರೆ ಇವತ್ತಿನ ದಿನಗಳಲ್ಲಿ ಯುವಜನತೆ ಇಂತಹ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದ ಹೆಚ್ಚಾಗುತ್ತಿದೆ. ಇದು ಯುವಜನತೆ ಮೇಲೆ ಗಾಢವಾದ ದುಷ್ಪರಿಣಾಮವನ್ನು ಬಿರುತ್ತಿದೆ.ಆದುದರಿಂದ ಚೈಲ್ಡ್ ಲೈನ್ ಮಂಗಳೂರು-1098 ಇಂತಹ ಒಂದು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳುತ್ತ ಮಕ್ಕಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು.
 
 
 
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ‘ಮಾದಕ ವಸ್ತು ಪತ್ತೆದಳ’ ಸಿ.ಐ.ಡಿ ವಿಭಾಗದಿಂದ ಆಗಮಿಸಿದ ಅಶೋಕ್ ಇವರು ಮಾತನಾಡುತ್ತ ಮಾದಕ ವಸ್ತುಗಳ ಬಗ್ಗೆ ಹೇಳುತ್ತ ಕಾನೂನಿನಲ್ಲಿ ಇದಕ್ಕೆ ಇರುವ ಶಿಕ್ಷೆಗಳು, ಇಂತಹ ಮಾದಕ ವಸ್ತುಗಳ ಪತ್ತೆಗೆ ಇಲಾಖೆಯಲ್ಲಿ ಇರುವ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು. ಮಾದಕ ವಸ್ತುಗಳ ಬಗ್ಗೆ ಎಲ್ಲಿಯಾದರು ಮಾಹಿತಿ ಇದ್ದಲ್ಲಿ ಧೈರ್ಯವಾಗಿ ಪೋಲಿಸ್ ಇಲಾಖೆಯನ್ನು ಸಂಪರ್ಕಿಸುವಂತೆ ತಮ್ಮ ಮಾತುಗಳಲ್ಲಿ ತಿಳಿಸಿದರು.
 
 
 
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಲಿಂಕ್ ಡಿಆಡಿಕ್ಷನ್ ಜಪ್ಪಿನಮೊಗರು ಇದರ ಆಡಳಿತಾಧಿಕಾರಿ ಹಾಗೂ ನಿರ್ದೇಶಕರಾದ ಲಿಡಿಯಾ ಲೋಬೋ ಇವರು ಮಾದಕ ವಸ್ತುಗಳ ದುಷ್ಪರಿಣಾಮಗಳು ಇದರ ಕುರಿತು ಮಾತನಾಡಿದರು.ಮಾದಕ ವಸ್ತುಗಳ ಸೇವನೆಯಿಂದ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳು, ಮಾದಕ ವಸ್ತುಗಳ ಸೇವನೆಯಿಂದ ವಿಧ್ಯಭ್ಯಾಸದ ಮೇಲೆ ಆಗುವ ಸಮಸ್ಯೆಗಳು, ಮಾದಕ ವಸ್ತುಗಳ ಸೇವನೆಯಿಂದ ದೈನಂದಿನ ಜೀವನದಲ್ಲಿ ಆಗುವ ಏರುಪೇರುಗಳು, ಇದರಿಂದ ಸಮಾಜಕ್ಕೆ ಆಗುವ ನಷ್ಟಗಳ ಕುರಿತು ಮಾತನಾಡಿದರು. ಯುವಜನತೆ ಇಂತಹ ಮಾದಕ ವಸ್ತುಗಳ ಸೇವನೆಯಿಂದ ಹೇಗೆ ದೂರವಿರಬೇಕು ಮತ್ತು ಅದರಿಂದ ತಮ್ಮನ್ನು ತಾವೂ ಹೇಗೆ ಇದರಿಂದ ರಕ್ಷಿಸಿಕೊಳ್ಳಬೇಕು ಎಂದು ತಮ್ಮ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
 
 
ವೇದಿಕೆಯಲ್ಲಿ ಚೈಲ್ಡ್ ಲೈನ್ ಮಂಗಳೂರು-1098 ಇದರ ನಗರ ಸಂಯೋಜಕರಾದ ಶ್ರೀ.ಯೋಗಿಶ್ ಮಲ್ಲಿಗೆಮಾಡು, ಆಪ್ತಸಮಾಲೋಚಕರಾದ ಮೇ ಡೆಸಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸಂತ. ಆಲೋಷಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಚೈಲ್ಡ್ ಲೈನ್ -1098ನ ಸಿಬಂಧಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here