ಮಾಹಿತಿ ಕಾರ್ಯಕ್ರಮ

0
380

 
ಮಂಗಳೂರು ಪ್ರತಿನಿಧಿ ವರದಿ
ಚೈಲ್ಡ್ ಲೈನ್ ಮಂಗಳೂರು-1098 ಮತ್ತು ಮಂಗಳೂರಿನ ಸಂತ.ಆಗ್ನೇಸ್ ಕಾಲೇಜು ಸಮುದಾಯದೆಡೆಗೆ ಆಗ್ನೇಸ್ (Agnes Towards Community) ಇವರ ಸಹಯೋಗದೊಂದಿಗೆ ದಿನಾಂಕ 30/07/2016ರ ಶನಿವಾರದಂದು ಪೂರ್ವಾಹ್ನ11.30ರಿಂದ ಅಪರಾಹ್ನ12.30ರ ವರೇಗೆ ಮಕ್ಕಳ ಸುರಕ್ಷತೆ/ರಕ್ಷಣೆ ಮತ್ತು ಚೈಲ್ಡಲೈನ್-1098 ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 
 
ಮಕ್ಕಳ ಸುರಕ್ಷೆ ಮತ್ತು ಮಕ್ಕಳ ರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮ ಮಂಗಳೂರು ನಗರದ 6 ಶಾಲೆಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಮಕ್ಕಳ ಮೇಲಿನ ದೈಹಿಕ-ಮಾನಸಿಕ ದೌರ್ಜನ್ಯ, ಮಕ್ಕಳ ಮಾರಾಟ ಸಾಗಾಟ, ಬಾಲಕಾರ್ಮಿಕತೆ, ಜೀತ ದಿನಗಳಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಜಾಗೃತಿನ್ನು ಮೂಡಿಸಿ, ಇಂತಹ ದೌಜನ್ಯಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿ ಹೋರಾಡಲು ಮಕ್ಕಳ ಸುರಕ್ಷತೆ/ರಕ್ಷಣೆ ಮತ್ತು ಚೈಲ್ಡಲೈನ್-1098 ಕುರಿತು 5ನೇ,6ನೇ ಮತ್ತು 7ನೇ ತರಗತಿ ಮಕ್ಕಳಿಗೆ ನೇರವಾಗಿ ಸಂತ.ಆಗ್ನೆಸ್ ಕಾಲೇಜಿನ ಅಂತೀಮ ಪದವಿಯ ಸುಮಾರು 150 ವಿದ್ಯಾರ್ಥಿಗಳು ಮಕ್ಕಳೊಂದಿಗೆ ನೃತ್ಯ, ಮೂಕಾಭಿನಯ, ಹಾಗೂ ಸಂವಾದದ ಮೂಲಕ ಮಾಹಿತಿಯನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 1000 ಸಾವಿರದಷ್ಟು ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತೆ/ರಕ್ಷಣೆ ಮತ್ತು ಚೈಲ್ಡಲೈನ್-1098 ಕುರಿತು ಮಾಹಿತಿಯನ್ನು ನೀಡಲಾಗುವುದು.
 
 
ಕಾರ್ಯಕ್ರಮ ನಡೆಯುವ ಶಾಲೆಗಳು ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿ, ಹಿಂದುಳಿದ ವರ್ಗಗಳ ಆಶ್ರಮ ಶಾಲೆ ಕದ್ರಿ ನಂತೂರು, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಮಲ್ಲಿಕಟ್ಟಾ, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಬಿರ್ಕನಕಟ್ಟೆ ಇಲ್ಲಿ ಆಯೋಜಿಸಲಾಗಿದೆ. ಸಂತ.ಆಗ್ನೇಸ್ ಕಾಲೇಜು ಮಂಗಳೂರು, ಚೈಲ್ಡ್ ಲೈನ್ ಮಂಗಳೂರು-1098, ಪಡಿ-ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here