ಮಾಸ್ಟರ್ ಪ್ಲಾನ್ ಗೆ ಮಾಫಿಯಾ ಡೀಲ್…?

0
246

ನೆನೆಗುದಿಗೆ ಬಿದ್ದಿದೆ `ಮಹಾನಗರ’ ಯೋಜನೆ ;ಪುನಶ್ಚೇತನಕ್ಕೆ ಕಾಣದ `ಕೈ’ಗಳ ಕರಾಮತ್ತು?
“2031ನೇ ಇಸವಿಯನ್ನು ದೃಷ್ಠಿಯಲ್ಲಿರಿಸಿ `ಮಹಾನಗರ ಯೋಜನೆ’ಯನ್ನು ರೂಪಿಸಿ ವರುಷ ಮೂರು ಕಳೆದುಹೋಗಿದೆ. ಅನುಮೋದನೆ ಆಗಿಲ್ಲ. ಮಹಾನಗರದ ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವ ಉತ್ಸಾಹ ಕಾಣುತ್ತಿಲ್ಲ. ಗ್ರೀನ್ ಝೋನ್ ಲಾಬಿ ಇಲ್ಲಿ ನಡೆಯುತ್ತಿದೆಯೋ…? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು…?”
ವಾರ್ತೆ.ಕಾಂ ಎಸ್ಕ್ಲೂಸಿವ್ : ಹರೀಶ್ ಕೆ.ಆದೂರು
 
 
ದಿನ ದಿನಕ್ಕೂ ಬೆಳೆಯುತ್ತಿರುವ ಮೂಡಬಿದಿರೆಗೆ ‘ಮಹಾನಗರ’ ಯೋಜನೆ `ಶಾಪ’ವಾಗಿದೆಯೇ…? ಜೈನ ಕಾಶಿ, ಪ್ರೇಕ್ಷಣೀಯ ಸ್ಥಳ, ಶೈಕ್ಷಣಿಕ ಹಬ್, ಎಂದೇ ಬಿಂಭಿಸಲ್ಪಟ್ಟ- ಪಡುತ್ತಿರುವ ಮೂಡಬಿದಿರೆ ಪ್ರಾಕೃತಿಕ , ಸಾಂಸ್ಕೃತಿಕ ದೃಷ್ಠಿಯಿಂದಲೂ ಪ್ರಸಿದ್ಧಿ. ವಿಶ್ವದ ನಾನಾ ಭಾಗಗಳಿಂದ ಹಲವು ಕಾರಣಕ್ಕೆ ದಿನಂಪ್ರತಿ ಮೂಡಬಿದಿರೆಗೆ ಆಗಮಿಸುವವರ ಸಂಖ್ಯೆ ಏರುತ್ತಲೇ ಇದೆ. ನಿತ್ಯ ಸಮಸ್ಯೆಗಳ ಆಗರವಾಗಿರುವ ಮೂಡಬಿದಿರೆಯನ್ನು ‘ಮಹಾನಗರ’ವನ್ನಾಗಿ ಅಭಿವೃದ್ಧಿ ಪಡಿಸಲು ನೂರೆಂಟು ವಿಘ್ನಗಳು ಕಾಡುತ್ತಿವೆ. ಒಂದು ಹೋಬಳಿ ಪ್ರದೇಶವಾಗಿರುವ ಮೂಡಬಿದಿರೆ ಹಲವು ಸಾಧನೆಗಳ ಮೂಲಕ ಗುರುತಿಸಿದ್ದು ಸತ್ಯ. ಇದೀಗ `ತಾಲೂಕು’ ಎಂಬ ಪಟ್ಟ ಘೋಷಣೆಯಾಗಿದೆ. ಇನ್ನಾದರೂ ಮಹಾನಗರ ಯೋಜನೆಯ ಕನಸು ನನಸಾಗಬಹುದೇ…
 
 
 
ಮೂಡಬಿದಿರೆ ನಗರದ ಜನಸಂಖ್ಯೆ ಪ್ರಸ್ತುತ 30ಸಾವಿರದಷ್ಟಿದೆ. 2045ರ ಅಂದಾಜಿಗೆ ಇದು 47547ರಷ್ಟಾಗಲಿದೆ. ಈಗಿರುವ ಜನಸಂಖ್ಯೆಯನ್ನು ದೃಷ್ಠಿಯಲ್ಲಿರಿಸಿ ನೋಡಿದರೆ ಮೂಲಭೂತ ಸೌಕರ್ಯ, ತ್ಯಾಜ್ಯ ವಿಲೇವಾರಿ ಮೊದಲಾದ ಸಮಸ್ಯೆಗಳು ಬೆಟ್ಟದಷ್ಟು ಕಾಡುತ್ತಿವೆ. ಹೀಗಿರುವಾಗ ಮಹಾನಗರದ ಕಲ್ಪನೆ ಯಾಕೆ ಸಾಕಾರಗೊಳ್ಳುತ್ತಿಲ್ಲ…? ಇದಕ್ಕೆ ಇಚ್ಛಾ ಶಕ್ತಿಯ ಕೊರತೆಯಿದೆಯೇ? ಅಥವಾ ವ್ಯವಸ್ಥಿತ ರೀತಿಯ ಒತ್ತಡ ಇದಕ್ಕಡ್ಡಿಯಾಗುತ್ತಿದೆಯೇ ಎಂಬ ಸಂದೇಹ ಬಲವಾಗಿದೆ.
 
 
 
ಮೂಡಬಿದಿರೆ ಮಹಾನಗರ ಮಾಸ್ಟರ್ ಪ್ಲಾನ್ ಕನಸು ಚಿಗುರೊಡೆದಿದ್ದು 2013ರ ಅವಧಿಯಲ್ಲಿ. ಮೂಡಬಿದಿರೆಯ ಪ್ರಗತಿಯನ್ನು ದೃಷ್ಠಿಯಲ್ಲಿರಿಸಿಕೊಂಡು ಈ ಯೋಜನೆ ರೂಪಿಸಲಾಯಿತು. ಮೂಡಬಿದಿರೆಯ 23 ವಾರ್ಡುಗಳನ್ನೊಳಗೊಂಡ ಮಹಾನಗರದ ಕಲ್ಪನೆ ಜಾರಿಯಾದದ್ದೇ ಆದಲ್ಲಿ ಮೂಡಬಿದಿರೆಯ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ನಗರದ ಅಭಿವೃದ್ಧಿಯೂ ಉತ್ತಮರೀತಿಯಲ್ಲಿ ಆಗಲಿದೆ.
ಮೂಡಬಿದಿರೆ ನಗರ ಹೊರತು ಪಡಿಸಿದರೆ ಇತರ ವಾರ್ಡುಗಳು ಗ್ರಾಮಾಂತರ ಭಾಗದಲ್ಲಿದೆ. ಇಲ್ಲಿ ಹಸಿರು ಧಾರಾಳವಾಗಿದೆ. ಒಂದೊಮ್ಮೆ ಈ ಭಾಗಗಳೆಲ್ಲಾ ಮಹಾನಗರ ಯೋಜನೆಯಂತೆ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಟ್ಟರೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ವಿವಿಧ ರೀತಿಯ ಹೊಡೆತ ಬೀಳುವುದು ಗ್ಯಾರಂಟಿ. ಇದೇ ಉದ್ದೇಶದಿಂದಾಗಿ ಈ ಯೋಜನೆಗೆ ಹೆಚ್ಚಿನ ಉತ್ಸಾಹ ಲಭ್ಯವಾಗುತತಿಲ್ಲ ಎಂಬ ಸಂಗತಿಯೂ ಇದೆ! .
 
 
ಏನೇನ್ ಲಾಭ…
ಮಹಾನಗರದ ಪಟ್ಟ
ಒಳಚರಂಡಿ ವ್ಯವಸ್ಥೆ
ಆರೋಗ್ಯಕರ ಬೆಳವಣಿಗೆ
ನಗರ ನೈರ್ಮಲ್ಯೀಕರಣ
ತ್ಯಾಜ್ಯ ವಿಲೇವಾರಿ
ಅಭಿವೃದ್ಧಿಗೆ ವಿಫುಲ ಅವಕಾಶ
 
ನಿರೀಕ್ಷೆ ನೂರಾರು…
ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ನೂತನ ಸಾರಥ್ಯವನ್ನು ಸುರೇಶ್ ಪ್ರಭು ವಹಿಸಿದ್ದಾರೆ. ಕ್ಷೇತ್ರ ಶಾಸಕ ಕೆ.ಅಭಯಚಂದ್ರ ಜೈನ್ ಅವರ ನಿಕಟವರ್ತಿಯೂ , ಆಗಿರುವ ಸುರೇಶ್ ಪ್ರಭು ಈ ಬಾರಿಯ ಅಧ್ಯಕ್ಷರು. ಇವರ ಬಗ್ಗೆ ನಿರೀಕ್ಷೆ ಸಾಕಷ್ಟಿದೆ. ಅಧಿಕಾರಾವಧಿಯಲ್ಲಿ ಮಾಸ್ಟರ್ ಪ್ಲಾನ್ ಗೆ ಹೈ ಸ್ಪೀಡ್ ಸಿಗಲಿದೆಯೋ ಕಾದು ನೋಡಬೇಕಾಗಿದೆ.
suresh prabhu
 

LEAVE A REPLY

Please enter your comment!
Please enter your name here